AIR Force Global Ranking: ವಿಶ್ವದ ಶಕ್ತಿಶಾಲಿ ವಾಯುಸೇನೆಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ | WDMMA ವರದಿ ಪ್ರಕಟ
ವಿಶ್ವ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ 2022 ಗ್ಲೋಬಲ್ ಏರ್ ಪವರ್ಸ್ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತೀಯ ವಾಯುಸೇನೆಯು ಮೂರನೇ ಸ್ಥಾನ ಪಡೆದಿದೆ.
ನವದೆಹಲಿ: ವಿಶ್ವ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ (WDMMA) 2022 ಗ್ಲೋಬಲ್ ಏರ್ ಪವರ್ಸ್ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತೀಯ ವಾಯುಸೇನೆಯು (Indian Air Force) ಮೂರನೇ ಸ್ಥಾನ ಪಡೆದಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಚೀನೀ ಏರ್ ಫೋರ್ಸ್)ನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದೆ. ವಿವಿಧ ರಾಷ್ಟ್ರಗಳ ವಾಯುಪಡೆಗಳ ಒಟ್ಟು ಯುದ್ಧ ಸಾಮರ್ಥ್ಯದ ದೃಷ್ಟಿಯಿಂದ ಭಾರತೀಯ ವಾಯುಪಡೆ (IAF) ಜಾಗತಿಕ ವಾಯುಪಡೆಯ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿದೆ.
ವಿಶ್ವ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ (WDMMA) 2022 ಗ್ಲೋಬಲ್ ಏರ್ ಪವರ್ಸ್ ಜಗತ್ತಿನ ಎಲ್ಲಾ ದೇಶಗಳು ವಾಯುಪಡೆ ಹೊಂದಿರುವ ವಿಮಾನಗಳ ಸಂಖ್ಯೆಯನ್ನು ಆಧರಿಸಿದೆ. ಆದರೆ ಅವುಗಳ ಆಧುನೀಕರಣ, ವ್ಯವಸ್ಥಾಪನಾ ಬೆಂಬಲ, ರಕ್ಷಣೆ ಮತ್ತು ದಾಳಿ ಸಾಮರ್ಥ್ಯವನ್ನು. ಆಧಾರವಾಗಿ ಇಟ್ಟುಗೊಂಡು ಎಲ್ಲಾ ದೇಶಗಳ ವಾಯುಸೇನೆಗಳುಗೆ ಅಂಕಗಳನ್ನು ನೀಡುತ್ತದೆ. ನಂತರ ಅದನ್ನು ಪ್ರಕಟಿಸುತ್ತದೆ. ಈ ಆಧಾರದ ಮೇಲೆ ಭಾರತ ಮೂರನೇ ಸ್ಥಾನದಲ್ಲಿವುದು ಹೆಮ್ಮೆಯ ವಿಷಯವಾಗಿದೆ.
ಇದನ್ನು ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತನ್ನಿ, ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಿ: ರಾಜ್ ಠಾಕ್ರೆ ಒತ್ತಾಯ
WDMMA ವರದಿಯ ಪ್ರಕಾರ, ಭಾರತೀಯ ವಾಯುಪಡೆಯು ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JASDF), ಇಸ್ರೇಲಿ ವಾಯುಪಡೆ ಮತ್ತು ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆಗಳಿಗಿಂತಲೂ ಮುಂದಿದೆ.
ವಿಶ್ವ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ (WDMMA) ಪ್ರಕಾರ 98 ದೇಶಗಳ 124 ವಿಮಾನಯಾನ ಸಂಸ್ಥೆಗಳು, ಒಟ್ಟು 47,840 ವಿಮಾನಗಳನ್ನು ಅಧ್ಯಯನ ಮಾಡಿದೆ. WDMMA 2022 ವರದಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ (USAF) ಗೆ ಅತ್ಯಧಿಕ TvR ಸ್ಕೋರ್ ನೀಡಿದೆ. USAF 5209 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 4167 ವಿಮಾನಗಳು ಯಾವುದೇ ಸಮಯದಲ್ಲಿ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವಂತಿದೆ. ಅವರ ಬಳಿ ದಾಳಿಗೆ 1976, ಬೆಂಬಲಕ್ಕಾಗಿ 1692, ತರಬೇತಿಗಾಗಿ 1541 ಫೈಟರ್ ಜೆಟ್‌ಗಳಿವೆ. ಭವಿಷ್ಯದಲ್ಲಿ, 2,419 ವಿಮಾನಗಳನ್ನು ಖರೀದಿಸಲಿದೆ. ಇದು 152 ಬಾಂಬರ್‌ಗಳು, 213 ಹೆಲಿಕಾಪ್ಟರ್‌ಗಳು ಮತ್ತು 677 ಸಾರಿಗೆ ವಿಮಾನಗಳನ್ನು ಹೊಂದಿದೆ.
ಇದನ್ನು ಓದಿ: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ, ಆಯುಕ್ತರ ವಿರುದ್ಧ ಜಾತಿನಿಂದನೆ ಆರೋಪ; ಎಫ್ಐಆರ್ ದಾಖಲು
ರಷ್ಯಾದ ವಾಯುಪಡೆಗೆ 114.2 TvR ನೀಡಿದೆ. ಅವರ ಬಳಿ ಒಟ್ಟು 3829 ವಿಮಾನಗಳಿವೆ. ಇವುಗಳಲ್ಲಿ 3063 ವಿಮಾನಗಳು ಯಾವುದೇ ಸಮಯದಲ್ಲಿ ಹಾರಾಟಕ್ಕೆ ಸಿದ್ಧವಾಗಿವೆ. ರಷ್ಯಾ 1507 ದಾಳಿ, 1837 ಬೆಂಬಲ ಮತ್ತು 485 ತರಬೇತಿ ವಿಮಾನಗಳನ್ನು ಹೊಂದಿದೆ. ಭಾರತೀಯ ವಾಯುಪಡೆಯು 69.4 TvR ಅನ್ನು ಪಡೆದಿದೆ. ಇದು ಒಟ್ಟು 1645 ವಿಮಾನಗಳನ್ನು ಹೊಂದಿದೆ. ಚೀನಾವು ಭಾರತಕ್ಕಿಂತ ಹೆಚ್ಚಿನ ವಿಮಾನಗಳನ್ನು ಹೊಂದಿದೆ, ಆದರೆ ರಫೇಲ್ ಆಗಮನ ಮತ್ತು ತೇಜಸ್ ಯುದ್ಧ ವಿಮಾನಗಳ ನವೀಕರಣ ಮತ್ತು ಇತರ ಹಲವು ರೀತಿಯ ಆಧುನೀಕರಣದೊಂದಿಗೆ ಭಾರತದ ಶ್ರೇಯಾಂಕವು ಏರಿದೆ. ಭಾರತದಲ್ಲಿ 1316 ವಿಮಾನಗಳು ಯುದ್ಧಕ್ಕೆ ಸಿದ್ಧವಾಗಿವೆ ಅಥವಾ ಯಾವುದೇ ಸಮಯದಲ್ಲಿ ಹಾರಲು ಸಿದ್ಧವಾಗಿವೆ. ಭಾರತವು 632 ದಾಳಿ, 709 ಬೆಂಬಲ ಮತ್ತು 304 ತರಬೇತಿ ವಿಮಾನಗಳನ್ನು ಹೊಂದಿದೆ. ಭವಿಷ್ಯದಲ್ಲಿ 689 ವಿಮಾನಗಳನ್ನು ಖರೀದಿಸಲು ಯೋಜಿಸಿದೆ. ಭಾರತೀಯ ವಾಯುಪಡೆಯು 438 ಹೆಲಿಕಾಪ್ಟರ್‌ಗಳನ್ನು ಹೊಂದಿದೆ. 250 ಸಾರಿಗೆ ವಿಮಾನಗಳು, 7 ಇಂಧನ ತುಂಬುವ ಮತ್ತು 14 ವಿಶೇಷ ಮಿಷನ್ ವಿಮಾನಗಳಿವೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ 63.8 TvR ಅನ್ನು ಪಡೆದುಕೊಂಡಿದೆ. ಚೀನಾದ ವಾಯುಪಡೆಯು 2,084 ವಿಮಾನಗಳನ್ನು ಹೊಂದಿದೆ, ಅದರಲ್ಲಿ 1,667 ಯಾವುದೇ ಸಮಯದಲ್ಲಿ ಹಾರಲು ಸಿದ್ಧವಾಗಿದೆ. ಜಪಾನಿನ ವಾಯುಪಡೆಯು 58.1 TvR ಅನ್ನು ಸ್ವೀಕರಿಸಿದೆ. ಒಟ್ಟು 779 ವಿಮಾನಗಳಿದ್ದು, ಇದರಲ್ಲಿ 623 ವಿಮಾನಗಳು ಯಾವುದೇ ಸಮಯದಲ್ಲಿ ಹಾರಲು ಸಿದ್ಧವಾಗಿವೆ. ಇಸ್ರೇಲಿ ವಾಯುಪಡೆಯು 58 TvRಗಳನ್ನು ಸ್ವೀಕರಿಸಿದೆ. ಇದು ಒಟ್ಟು 581 ವಿಮಾನಗಳನ್ನು ಹೊಂದಿದೆ. ಅವರಲ್ಲಿ 465 ವಿಮಾನಗಳು ಯಾವಾಗಲೂ ಯುದ್ಧಕ್ಕೆ ಸಿದ್ಧರಾಗಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:47 pm, Sun, 22 May 22