ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ, ಆಯುಕ್ತರ ವಿರುದ್ಧ ಜಾತಿನಿಂದನೆ ಆರೋಪ; ಎಫ್ಐಆರ್ ದಾಖಲು

ಆಯುಕ್ತ ಬಸವರಾಜ್ ನೀನು ಸಿಎಂಸಿ ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಅದಕ್ಕೆ ರಿಮೂವ್ ಮಾಡಿದ್ದೇನೆಂದು = ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಗರಸಭೆ ಸದಸ್ಯ ಗೋಪಿ ಇಬ್ಬರ ವಿರುದ್ಧ ಆರೋಪಿಸಿ ದೂರು ನೀಡಿದ್ದಾರೆ.

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ, ಆಯುಕ್ತರ ವಿರುದ್ಧ ಜಾತಿನಿಂದನೆ ಆರೋಪ; ಎಫ್ಐಆರ್ ದಾಖಲು
ನಗರಸಭೆ ಅಧ್ಯಕ್ಷ ವೇಣುಗೋಪಾಲ್
TV9kannada Web Team

| Edited By: sandhya thejappa

May 22, 2022 | 2:41 PM

ಚಿಕ್ಕಮಗಳೂರು: ಜಾತಿನಿಂದನೆ (Caste Abuse) ಮಾಡಿರುವ ಆರೋಪದ ಮೇಲೆ ನಗರಸಭೆಯ ಅಧ್ಯಕ್ಷ, ಆಯುಕ್ತರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ನಗರಸಭೆ ಸದಸ್ಯ ಗೋಪಿ ಎಂಬುವರು ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ನಗರಸಭೆಯ ಅಫಿಷಿಯಲ್ ವಾಟ್ಸಾಪ್ ಗ್ರೂಪಿನಿಂದ ನನ್ನನ್ನ ರಿಮೂವ್ ಮಾಡಿದ್ದರು. ಹಾಗಾಗಿ, ಅದರ ಬಗ್ಗೆ ಚರ್ಚಿಸಲು ಹಾಗೂ ನನ್ನ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಹೋಗಿದ್ದೆ. ಆಗ ನಗರಸಭೆ ಆಯುಕ್ತ ಬಸವರಾಜ್ ಕೂಡ ಅಲ್ಲೇ ಇದ್ದರು. ನಾನು ಕೇಳಿದ್ದಕ್ಕೆ ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಯುಕ್ತ ಬಸವರಾಜ್ ನೀನು ಸಿಎಂಸಿ ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಅದಕ್ಕೆ ರಿಮೂವ್ ಮಾಡಿದ್ದೇನೆಂದು = ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಗರಸಭೆ ಸದಸ್ಯ ಗೋಪಿ ಇಬ್ಬರ ವಿರುದ್ಧ ಆರೋಪಿಸಿ ದೂರು ನೀಡಿದ್ದಾರೆ. ನಗರಸಭೆ ಸದಸ್ಯರ ದೂರಿನ ಅನ್ವಯ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ವಿರುದ್ಧ ಜಾತಿನಿಂದನೆ, ಜೀವ ಬೆದರಿಕೆ ಕೇಸ್ ದಾಖಲಾಗಿದೆ. ಕಲಂ 504, 506ರ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?

ವಿಗ್ರಹ ಕದ್ದ ಕಳ್ಳರು: ಬೆಳಗಾವಿ: ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹವನ್ನು ಕಳ್ಳರು ಕದ್ದಿರುವ ಘಟನೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. ಕೊಕಟನೂರ ಗ್ರಾಮದ ಬೀರೇಶ್ವರ ದೇವಸ್ಥಾನದ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದು, ತಡರಾತ್ರಿ ನಡೆದ ಈ ಘಟನೆ ಬೆಳಿಗ್ಗೆ ಪೂಜಾರಿ ಪೂಜೆಗೆ ಬಂದಾಗ ಬೆಳಕಿಗೆ ಬಂದಿದೆ. ವಾಮಾಚಾರಿಗಳು, ನಿಧಿಗಳ್ಳರು ದೇವರ ಮೂರ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಗಾಂಜಾ ಮಾರುತ್ತಿದ್ದ ನಾಲ್ವರ ಸೆರೆ: ಬೆಳಗಾವಿ: ಗೋಕಾಕ್​ನಲ್ಲಿ ಗಾಂಜಾ, ಹೆರಾಯಿನ್ ಮಾರುತ್ತಿದ್ದ ನಾಲ್ವರನ್ನು ಸೆರೆಹಿಡಿಯಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮೂವರು ಗಾಂಜಾ, ಹೆರಾಯಿನ್​​​​​​ ಮಾರಲು ಬಂದಿದ್ದರು. ಗಾಂಜಾ, ಹೆರಾಯಿನ್ ಖರೀದಿಗೆ ಬಂದಿದ್ದ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 1 ಕಾರು, ಒಂದು ದ್ವಿಚಕ್ರ ವಾಹನ, 5 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada