ಅಂಡಮಾನ್-ನಿಕೋಬಾರ್ ದ್ವೀಪದ ಬಳಿ ಬರೋಬ್ಬರಿ 25,000 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ

ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ (ಸುಮಾರು 5 ಟನ್) ತೂಕದ ಮಾದಕವಸ್ತುಗಳ ದೊಡ್ಡ ಪ್ರಮಾಣವನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 25000 ಕೋಟಿ ರೂ. ಆಗಿದೆ. ಈ ಸರಕು ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಅಂಡಮಾನ್-ನಿಕೋಬಾರ್ ದ್ವೀಪದ ಬಳಿ ಬರೋಬ್ಬರಿ 25,000 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ
ಡ್ರಗ್ಸ್​

Updated on: Nov 26, 2024 | 7:54 AM

ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ (ಸುಮಾರು 5 ಟನ್) ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 25000 ಕೋಟಿ ರೂ. ಆಗಿದೆ.
ಈ ಸರಕು ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಮಾದಕ ದ್ರವ್ಯವು ಸರ್ಕಾರದ ಬದ್ಧತೆ ಮತ್ತು ಅದರ ಏಜೆನ್ಸಿಗಳ ನಡುವಿನ ಸಮನ್ವಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಎರಡು ಕಿಲೋ ತೂಕದ ಡ್ರಗ್ಸ್‌ನ ಮೂರು ಸಾವಿರ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು, ಕೋಸ್ಟ್‌ಗಾರ್ಡ್‌ನ ಡೋರ್ನಿಯರ್ ವಿಮಾನವು ಅನುಮಾನಾಸ್ಪದ ದೋಣಿಯನ್ನು ಗುರುತಿಸಿತು ಮತ್ತು ತಕ್ಷಣ ಹತ್ತಿರದ ಕಮಾಂಡ್‌ಗೆ ತಿಳಿಸಿತು.

ಅದರ ಹಿನ್ನೆಲೆಯಲ್ಲಿ ಗಸ್ತು ಹಡಗುಗಳು ತಕ್ಷಣವೇ ಧಾವಿಸಿವೆ. ಹಡಗನ್ನು ತಕ್ಷಣವೇ ಹತ್ತಿರದ ದ್ವೀಪಕ್ಕೆ ಎಳೆಯಲಾಯಿತು. ಇದರಲ್ಲಿ ಆರು ಮಂದಿ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಮೆಥಾಂಫೆಟಮೈನ್ ಎಂದು ನಂಬಲಾಗಿದೆ. ಜಂಟಿ ವಿಚಾರಣೆಗಾಗಿ ಅಂಡಮಾನ್ ನಿಕೋಬಾರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರು: ಹೊಸ ವರ್ಷಾಚರಣೆಗೆ ಸಂಗ್ರಹಿಸಿಟ್ಟಿದ್ದ 6 ಕೋಟಿ ರೂ. ಮೌಲ್ಯದ ಕ್ವಿಂಟಾಲ್​ಗಟ್ಟಲೆ ಮಾದಕ ವಸ್ತು ಜಪ್ತಿ

ಸಾಗರ್​ಮಂಥನ್-4 ಹೆಸರಿನ ಅಭಿಯಾನವು ಗುಪ್ತಚರ ಸಂಸ್ಥೆಗಳ ಸುಳಿವು ಆಧರಿಸಿದೆ ಎಂದು ಹೇಳಿದೆ. ಕರಾವಳಿ ಕಾವಲು ಪಡೆ ಕಡಲಾಚೆಯ ಗಸ್ತು ನೌಕೆಗಳನ್ನು ಬಳಸಿ ಹಡಗನ್ನು ಗುರುತಿಸಿ ತಡೆದಿದೆ. ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.

ಇದಲ್ಲದೇ ನವೆಂಬರ್ 15 ರಂದು ಗುಜರಾತ್‌ನ ಪೋರಬಂದರ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಎಟಿಎಸ್ 500 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:48 am, Tue, 26 November 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us