Independence Day 2023: 1947 ಆಗಸ್ಟ್​​ 14 ರಂದು ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ ಏನಾಯ್ತು?

1947ರ ಆಗಸ್ಟ್ 14 ರಂದು ಭಾರತದಲ್ಲಿ ಏನಾಯಿತು ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ. ಬ್ರಿಟಿಷರು ಭಾರತ ಬಿಡುವ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದು ಕಡೆ ಭಾರತ ವಿಭಜನೆಯಾಗಿ ಪಾಕಿಸ್ತಾನ ದೇಶ ಹುಟ್ಟಿಕೊಂಡಿತು.

Independence Day 2023: 1947 ಆಗಸ್ಟ್​​ 14 ರಂದು ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ ಏನಾಯ್ತು?
ಭಾರತ ಮತ್ತು ಪಾಕಿಸ್ತಾನ ವಿಭಜನೆ
Follow us
Rakesh Nayak Manchi
|

Updated on: Aug 14, 2023 | 8:00 AM

ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಮಿಂದೆದ್ದಿ ಭಾರತ, ಇದೀಗ 76 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ (Independence Day) ಸಜ್ಜಾಗುತ್ತಿದೆ. ಈ ದಿನವು ತುಂಬಾ ಮಹತ್ವದ್ದಾಗಿರುವುದಕ್ಕೆ ಕಾರಣವೆಂದರೆ 1947 ರಲ್ಲಿ ಆಗಸ್ಟ್ 14 ರಂದು ಬ್ರಿಟಿಷರು ಭಾರತ ಬಿಟ್ಟು ತೊಲಗಿದರು. ಸ್ವಾತಂತ್ರ್ಯ ನಮಗೆ ದೊರಕಿರುವುದು ಖುಷಿಯ ವಿಚಾರವಾಗಿದ್ದರೂ ಭಾರತದ ವಿಭಜನೆ ಕೋಟ್ಯಂತರ ಜನರ ಮನಸ್ಸಿಗೆ ದುಃಖ ತಂದಿತ್ತು.

ಭಾರತ ವಿಭಜನೆ ನಂತರ ಪಾಕಿಸ್ತಾನವು ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ಹಾಗದರೆ, 1947ರ ಈ ದಿನದಂದು ಏನಾಯ್ತು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: Independence Day 2023: ಭಾರತದ ರಾಷ್ಟ್ರಗೀತೆ ಜನ ಗಣ ಮನದ ಬಗ್ಗೆ ತಿಳಿಯಬೇಕಾದ ವಿಷಯಗಳು ಮತ್ತು ಗೀತೆಯ ಅರ್ಥ

  1. ಭಾರತ ವಿಭಜನೆ ಜಾರಿಗೆ ಬಂದ ನಂತರ 1947ರ ಭಾರತೀಯ ಸ್ವಾತಂತ್ರ್ಯ ಕಾಯ್ದೆಯು ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿತು. ಅಲ್ಲದೆ, ಆಗಸ್ಟ್ 14 ರಂದು ಭಾರತದ ಉಪಖಂಡ ವಿಭಜನೆಯಾಗಿ ಪಾಕಿಸ್ತಾನ ರೂಪುಗೊಂಡಿತು. ಆದರೆ ಭಾರತವು ಒಂದು ದಿನದ ಬಳಿಕ ಸ್ವಾತಂತ್ರ್ಯ ಪಡೆಯಿತು.
  2. ಭಾರತ ವಿಭಜನೆಯ ನಂತರ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಭಾರತ ಗಣರಾಜ್ಯವಾಯಿತು.
  3. ಭಾರತ ಮತ್ತು ಪಾಕಿಸ್ತಾನ ದೇಶಗಳ ಪ್ರತಿ ರಸ್ತೆಗಳಲ್ಲಿ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆ ಹೊಂದಿದ್ದ ಜನರಿಂದ ತುಂಬಿ ತುಳುಕುತ್ತಿತ್ತು.
  4. ಆದರೆ ಭಾರತದ ಬಂಗಾಳ, ಬಿಹಾರ, ಯುನೈಟೆಡ್ ಪ್ರಾಂತ್ಯಗಳು ಮತ್ತು ಪಂಜಾಬ್‌ನ ಹಲವಾರು ಭಾಗಗಳಲ್ಲಿನ ಜನರು ಹಿಂಸಾತ್ಮಕವನ್ನು ಅನುಭವಿಸಬೇಕಾಯಿತು. ವ್ಯಾಪಕವಾದ ಕೊಲೆಗಳು, ಅತ್ಯಾಚಾರಗಳು ಮತ್ತು ಕ್ರೌರ್ಯಗಳು ನಡೆದವು.
  5. ಭಾರತ ಧರ್ಮದ ಆಧಾರದಲ್ಲಿ ವಿಭಜನೆಯಾಗಿದ್ದರಿಂದ ಆ ಭಾಗದ ಜನರು ಮಾತ್ರವಲ್ಲದೆ, ಇತರ ಕಡೆಗಳಿಂದಲೂ ಜನರು ತಮ್ಮ ಎಲ್ಲಾ ಸ್ಥಿರ ಆಸ್ತಿಗಳನ್ನು ಬಿಟ್ಟು ಹೋದರು. ಹೀಗೆ ಲಕ್ಷಾಂತರ ಜನ ಸ್ಥಳಾಂತರಗೊಂಡು ನಿರಾಶ್ರಿತರ ಶಿಬಿರಗಳನ್ನು ಸೇರಿಕೊಂಡರು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಜೊತೆಗೆ ಅನೈರ್ಮಲ್ಯದಿಂದಾಗಿ ಅನೇಕ ಜನರು ಸಾವನ್ನಪ್ಪಿದರು.
  6. ಮಧ್ಯರಾತ್ರಿಯಲ್ಲಿ 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಹಿನ್ನೆಲೆ ದೇಶದ ಸ್ವಾತಂತ್ರ್ಯವನ್ನು ಆಚರಿಸಲು ಜನರು ಬೀದಿಗಿಳಿದಿದರು. ಸಂವಿಧಾನ ರಚನಾ ಸಭೆಯು ಸಂವಿಧಾನ ಭವನದಲ್ಲಿ ಸಭೆ ಸೇರಿ ನಂತರ ಮಧ್ಯರಾತ್ರಿಯಲ್ಲಿ ಸ್ವತಂತ್ರ ಭಾರತದ ಶಾಸಕಾಂಗ ಸಭೆಯಾಗಿ ತನ್ನ ಹೊಸ ಪಾತ್ರವನ್ನು ವಹಿಸಿಕೊಂಡಿತು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್