ಅಫ್ಘಾನಿಸ್ತಾನ ನಿರಾಶ್ರಿತರಿಗೆ ತುರ್ತು ಇ-ವೀಸಾ ಸೇವೆ ಆರಂಭಿಸಿದ ಭಾರತ; ಅರ್ಜಿ ಸಲ್ಲಿಸುವುದು ಹೇಗೆ? ವಿವರ ಇಲ್ಲಿದೆ
Afghanistan: ತಾಲಿಬಾನ್ ಆಡಳಿತದ ದೇಶದಲ್ಲಿ ವಾಸಿಸಲು ಇಚ್ಛಿಸಿದ ಹಾಗೂ ಅಲ್ಲಿಂದ ಹೊರಹೋಗಲು ಹವಣಿಸುತ್ತಿರುವ ಜನರಿಗೆ ಭಾರತ ಸರ್ಕಾರ ಮಂಗಳವಾರ (ಆಗಸ್ಟ್ 17) ಇ- ವೀಸಾ ಘೋಷಿಸಿದೆ.
ದೆಹಲಿ: ಅಫ್ಘಾನಿಸ್ತಾನ ತಾಲಿಬಾನರ ವಶವಾಗುತ್ತಿದ್ದಂತೆ ಅಲ್ಲಿ ನೆಲೆಸಿರುವ ಸಾವಿರಾರು ಮಂದಿ ದೇಶ ತೊರೆಯಲು ಮುಂದಾಗಿದ್ದಾರೆ. ವಿಮಾನದ ಹೊರಭಾಗದಲ್ಲಿ ಕುಳಿತಾದರೂ ಬೇರೆ ದೇಶಕ್ಕೆ ಹೋಗುವ ಧಾವಂತ, ಆತಂಕದಲ್ಲಿ ಅಫ್ಘನ್ನರು ಹಾಗೂ ಅಲ್ಲಿ ನೆಲೆಸಿರುವ ಇತರ ದೇಶೀಯರು ಇದ್ದಾರೆ. ಈಗಾಗಲೇ ಭಾರತವೂ ಸೇರಿ ಹಲವು ದೇಶಗಳು ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಏರ್ಲಿಫ್ಟ್ ಮಾಡುವ ಕ್ರಮ ಕೈಗೊಂಡಿದೆ. ಈ ಮಧ್ಯೆ, ಭಾರತ ದೇಶ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಜನರಿಗೆ ರಕ್ಷಣೆ, ಭದ್ರತೆ ನೀಡುವ ಉದ್ದೇಶದಿಂದ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.
ತಾಲಿಬಾನ್ ಆಡಳಿತದ ದೇಶದಲ್ಲಿ ವಾಸಿಸಲು ಇಚ್ಛಿಸಿದ ಹಾಗೂ ಅಲ್ಲಿಂದ ಹೊರಹೋಗಲು ಹವಣಿಸುತ್ತಿರುವ ಜನರಿಗೆ ಭಾರತ ಸರ್ಕಾರ ಮಂಗಳವಾರ (ಆಗಸ್ಟ್ 17) ಇ- ವೀಸಾ ಘೋಷಿಸಿದೆ. ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ (e-Emergency X-Misc Visa) ಎಂಬ ಎಲೆಕ್ಟ್ರಾನಿಕ್ ವೀಸಾದ ಮೂಲಕ ವೇಗವಾಗಿ ವೀಸಾಗೆ ಅಪ್ಲೈ ಮಾಡಬಹುದಾಗಿದೆ. ಅಫ್ಘಾನಿಸ್ತಾನದ ನಾಗರಿಕರಿಗೆ ಕೂಡ ಭಾರತದ ಇ-ವೀಸಾ ನೀಡಿಕೆ ಇರಲಿದೆ. ಈ ತುರ್ತು ವೀಸಾ ಸೇವೆಯಲ್ಲಿ ಎಲ್ಲಾ ಧರ್ಮದವರಿಗೂ ಅವಕಾಶ ನೀಡಲಾಗಿದೆ. ಭದ್ರತೆಯ ವಿಚಾರ ಗಮನದಲ್ಲಿ ಇಟ್ಟುಕೊಂಡು ಅಫ್ಘನ್ನರಿಗೆ 6 ತಿಂಗಳ ಕಾಲ ಭಾರತದ ಇ-ವೀಸಾ ನೀಡಲಾಗುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರ, ಈಗಿನ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ವೀಸಾ ಅವಕಾಶವನ್ನು ಮರುವಿಮರ್ಶಿಸಲಾಗಿದೆ. ಎಲೆಕ್ಟ್ರಾನಿಕ್ ವೀಸಾದ ಹೊಸ ಕ್ಯಾಟಗರಿ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಭಾರತದ ಮತ್ತು ಭಾರತೀಯರ ಸುರಕ್ಷತೆ, ಭದ್ರತೆ ಗಮನದಲ್ಲಿ ಇಟ್ಟುಕೊಂಡು ಮಾಡಲಾಗುವುದು. ಹಿಂದು ಮತ್ತು ಸಿಖ್ಖರಿಗೆ ಆದ್ಯತೆ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
MHA reviews visa provisions in view of the current situation in Afghanistan. A new category of electronic visa called “e-Emergency X-Misc Visa” introduced to fast-track visa applications for entry into India.@HMOIndia @PIB_India @DDNewslive @airnewsalerts
— Spokesperson, Ministry of Home Affairs (@PIBHomeAffairs) August 17, 2021
ಇ-ವೀಸಾಗೆ ಅಪ್ಲೈ ಮಾಡುವುದು ಹೇಗೆ?
- https://indianvisaonline.gov.in/evisa/tvoa.html ಲಿಂಕ್ ಕ್ಲಿಕ್ ಮಾಡಿ
- ಅಲ್ಲಿ ವೀಸಾ ಕ್ಯಾಟಗರಿ- Emergency X-Misc Visa ಆಗಿರುತ್ತದೆ
- ಒಂದುವೇಳೆ ಆ ಲಿಂಕ್ ಅಪ್ಲಿಕೇಷನ್ ಪುಟಕ್ಕೆ ಹೋಗದಿದ್ದರೆ, ಹೋಮ್ ಪೇಜ್ನಲ್ಲಿ For eVisa by Bureau of Immigration, Apply here ಎಂಬಲ್ಲಿ ಕ್ಲಿಕ್ ಮಾಡಿ
- ಆಗ ನಿಮಗೆ Apply here for e-visa ಎಂಬ ಆಯ್ಕೆ ಕಾಣುತ್ತದೆ
- ಅಲ್ಲಿ ಅಗತ್ಯ ಮತ್ತು ಪ್ರಾಥಮಿಕ ವಿವರಗಳನ್ನು ಸಲ್ಲಿಸಿರಿ. ಬಳಿಕ, ಬೇಕಾದ ಇತರ ದಾಖಲಾತಿಗಳ ವಿವರವು ಅಲ್ಲಿ ಕಾಣಿಸಿಕೊಳ್ಳುತ್ತದೆ
- ಅದನ್ನು ಕಾಪಿ ಮಾಡಿಕೊಳ್ಳಿ ಅಥವಾ ಸ್ಕ್ರೀನ್ಶಾಟ್ ತೆಗೆದಿರಿಸಿಕೊಳ್ಳಿ. ಮುಂದೆ ಫಾರ್ಮ್ ಭರ್ತಿ ಮಾಡಲು ಸಹಾಯ ಆಗುತ್ತದೆ
- ಈ ವಿವರಗಳನ್ನು ಭರ್ತಿ ಮಾಡಿದ ನಂತರ, ಅಲ್ಲಿ ಅರ್ಜಿ ಸಲ್ಲಿಸುವವರ ಹೆಚ್ಚಿನ ವಿವರ ಬೇಕಿರುತ್ತದೆ
- ಪ್ರತಿ ಅರ್ಜಿಯು, ಹೆಸರು, ಫೋನ್ ನಂಬರ್, ಹಾಗೂ ಭಾರತದಲ್ಲಿ ನೆಲೆಸಿರುವ ಒಬ್ಬ ರೆಫರೆನ್ಸ್ ವ್ಯಕ್ತಿಯ ವಿಳಾಸ ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಒಬ್ಬ ರೆಫರೆನ್ಸ್ ವ್ಯಕ್ತಿಯ ವಿಳಾಸ ಬೇಕಿರುತ್ತದೆ
- ಈ ವೀಸಾ ಉಚಿತವಾಗಿರುತ್ತದೆ ಮತ್ತು ಯಾವುದೇ ಅಪ್ಲಿಕೇಷನ್ ಫೀಸ್ ಇರುವುದಿಲ್ಲ
- ವೀಸಾಗೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಬಹುದು- ವೀಸಾ ಅಪ್ಲಿಕೇಷನ್ ಕೊಂಡಿ
#India has just started an e-visa for #Afghanistan.
Visa category is “Emergency X-Misc Visa”
Upon selecting “Afghanistan” in the drop down, the “e-Emergency X-Misc Visa” category checkbox automatically shows pic.twitter.com/NbhvpwAAPl
— Rajeshwari (@rajeshwarie) August 17, 2021
ಭಾರತದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 919717785379 ಸಹಾಯವಾಣಿ ತೆರೆಯಲಾಗಿದೆ. ಹಾಗೇ, MEAHelpdeskIndia@gmail.com ಇಮೇಲ್ ಹೆಲ್ಪ್ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್ನಲ್ಲಿರುವ ಭಾರತೀಯರು ಭಾರತವನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ
(India begins emergency E Visa service to Afghan Refugees amid Afghanistan Crisis How to apply other details here)
Published On - 3:39 pm, Tue, 17 August 21