ಬಿಹಾರದ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನ ಸಾವು, ಐವರು ನಾಪತ್ತೆ
ಕುಚೈಕೋಟ್ನ ರಾಮ್ಜೀತಾದಿಂದ ವಾಪಾಸ್ ಬರುವಾಗ ಮಾರ್ಗಮಧ್ಯೆ ನದಿಯಲ್ಲಿ ದೋಣಿ ಮಗುಚಿದೆ. ದುರಂತ ನಡೆಯುವಾಗ ದೋಣಿಯಲ್ಲಿ 10 ಜನರಿದ್ದರು. ಅವರಲ್ಲಿ ಐವರ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಐವರು ಕೂಡ ಬದುಕಿರುವ ಸಾಧ್ಯತೆಯಿಲ್ಲ.
ಪಾಟ್ನಾ: ಬಿಹಾರ ರಾಜ್ಯದ ಗೋಪಾಲ್ಗಂಜ್ ಜಿಲ್ಲೆಯ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನರು ಸಾವನ್ನಪ್ಪಿದ್ದಾರೆ, ಐವರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಹಾಗೂ ಓರ್ವ ಮಹಿಳೆ ಕೂಡ ಸೇರಿದ್ದಾರೆ. ದುರಂತ ನಡೆಯುವಾಗ ದೋಣಿಯಲ್ಲಿ 10 ಜನರಿದ್ದರು. ಅವರಲ್ಲಿ ಐವರ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಐವರು ಕೂಡ ಬದುಕಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇನ್ನೂ ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲ.
ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದವರನ್ನು ಆಕಾಶ್ (13), ಪವನ್ ಕುಮಾರ್ (10), ಬ್ರಜೇಶ್ ಗುಪ್ತಾ, ಪುಷ್ಪಾ ದೇವಿ ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಅಪರಿಚಿತರು ಕೂಡ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಕುಚೈಕೋಟ್ನ ರಾಮ್ಜೀತಾದಿಂದ ವಾಪಾಸ್ ಬರುವಾಗ ಮಾರ್ಗಮಧ್ಯೆ ನದಿಯಲ್ಲಿ ದೋಣಿ ಮಗುಚಿದೆ.
ನಿನ್ನೆ ಮಳೆಯಿಂದಾಗಿ ಬಿಹಾರದ ಗಂದಕ್ ನದಿಯಲ್ಲಿ ಅಲೆಗಳು ಹೆಚ್ಚಾಗಿದ್ದವು. ಹೀಗಾಗಿ, ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ಮಾಹಿತಿ ಲಭ್ಯವಾಗಿದೆ.
ಇದೇ ರೀತಿ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ವಿದ್ಯುತ್ ತಗುಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದ್ಯುತ್ ಸಂಸ್ಥೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ
(5 Dead 5 Missing After Boat Capsizes in Bihar Gandak River)