ಇಂಡಿಯಾ ಬ್ಲಾಕ್ ಹರ್ಯಾಣದಲ್ಲಿ ಹೊಸ ಇತಿಹಾಸವನ್ನು ಬರೆಯಬಹುದು: ಅಖಿಲೇಶ್ ಯಾದವ್

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಅಖಿಲೇಶ್ ಯಾದವ್, ಇದು ರಾಜಕೀಯ ಅವಕಾಶಗಳನ್ನು ಅನ್ವೇಷಿಸಲು ಎಸ್‌ಪಿ ಅಥವಾ ಇಂಡಿಯಾ ಬ್ಲಾಕ್‌ನ ಯಾವುದೇ ಇತರ ಪಕ್ಷಕ್ಕೆ ಸಮಯವಲ್ಲ, ಇದು "ತ್ಯಾಗ ಮತ್ತು ನಿಸ್ವಾರ್ಥತೆಯ" ಸಮಯ. ಸಾರ್ವಜನಿಕ ಕಲ್ಯಾಣದ ಹಾದಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಇಂಡಿಯಾ ಬ್ಲಾಕ್ ಹರ್ಯಾಣದಲ್ಲಿ ಹೊಸ ಇತಿಹಾಸವನ್ನು ಬರೆಯಬಹುದು: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 06, 2024 | 4:29 PM

ಲಕ್ನೋ ಸೆಪ್ಟೆಂಬರ್ 06: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಶುಕ್ರವಾರ “ಇಂಡಿಯಾ ಬ್ಲಾಕ್ ನ ಏಕತೆಯು ಹರ್ಯಾಣ ಚುನಾವಣೆಯಲ್ಲಿ (Haryana elections) ಹೊಸ ಇತಿಹಾಸವನ್ನು ಬರೆಯಲು ಸಮರ್ಥವಾಗಿದೆ”. ಬಿಜೆಪಿಯ “ಕುಟಿಲ ಮತ್ತು ಸ್ವಾರ್ಥಿ ರಾಜಕಾರಣ”ವನ್ನು ಸೋಲಿಸಲು ತನ್ನನ್ನು ತಾನು ಮೇಲಕ್ಕೆತ್ತಲು ಇರುವ ಸಮಯ ಇದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.  ಹರ್ಯಾಣದಲ್ಲಿ ಬಿಜೆಪಿಯ “ನಕಾರಾತ್ಮಕ, ಕೋಮುವಾದಿ ಮತ್ತು ವಿಭಜಕ ರಾಜಕೀಯ” ವನ್ನು ಯಾವ ರೀತಿ ಇಂಡಿಯಾ ಒಕ್ಕೂಟದ ಸದಸ್ಯರು ಉತ್ತಮವಾಗಿ ಸೋಲಿಸಲು ಸಾಧ್ಯವೋ ಅದಕ್ಕೆ ನಮ್ಮ ಪಕ್ಷವು ಬೆಂಬಲಿಸುತ್ತದೆ ಎಂದು ಯಾದವ್ ಹೇಳಿದರು.

ಹರ್ಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಆಪ್ ನಡುವೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದ್ದು, ಎರಡೂ ಕಡೆಯಿಂದ ಕಠಿಣ ಚೌಕಾಶಿಯೊಂದಿಗೆ ಅವರ ಹೇಳಿಕೆ ಬಂದಿದೆ.  ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಯಾದವ್, ಇದು ರಾಜಕೀಯ ಅವಕಾಶಗಳನ್ನು ಅನ್ವೇಷಿಸಲು ಎಸ್‌ಪಿ ಅಥವಾ ಇಂಡಿಯಾ ಬ್ಲಾಕ್‌ನ ಯಾವುದೇ ಇತರ ಪಕ್ಷಕ್ಕೆ ಸಮಯವಲ್ಲ, ಇದು “ತ್ಯಾಗ ಮತ್ತು ನಿಸ್ವಾರ್ಥತೆಯ” ಸಮಯ. ಸಾರ್ವಜನಿಕ ಕಲ್ಯಾಣದ ಹಾದಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಅಖಿಲೇಶ್ ಯಾದವ್ ಟ್ವೀಟ್

” ಕುಟಿಲ ಮತ್ತು ಸ್ವಾರ್ಥಿಗಳು ಇತಿಹಾಸದಲ್ಲಿ ಹೆಸರು ಮಾಡಲಾರರು. ಇಂತಹ ರಾಜಕೀಯವನ್ನು ಸೋಲಿಸಲು ನಾವೇ ಮೇಲೇರಲು ಈ ಕ್ಷಣ ಒಂದು ಐತಿಹಾಸಿಕ ಅವಕಾಶವಾಗಿದೆ. ನಾವು ಮುಕ್ತ ಹೃದಯದಿಂದ, ಹರ್ಯಾಣದ ಹಿತಕ್ಕಾಗಿ ಪ್ರತಿ ತ್ಯಾಗಕ್ಕೂ ಸಿದ್ಧರಿದ್ದೇವೆ” ಎಂದು ಅಖಿಲೇಶ್ ಪೋಸ್ಟ್ ಮಾಡಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಬಣದ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ಎಸ್‌ಪಿ ವರಿಷ್ಠರು ಎಕ್ಸ್‌ನಲ್ಲಿ , “ನಾವು ಇದನ್ನು ಈ ಹಿಂದೆ ಹಲವು ಬಾರಿ ಹೇಳಿದ್ದೇವೆ ಮತ್ತು ನಾವು ಇದನ್ನು ಮತ್ತೆ ಹೇಳುತ್ತೇವೆ ಮತ್ತು ಭವಿಷ್ಯದಲ್ಲಿಯೂ ಇದನ್ನೇ ಹೇಳುತ್ತೇವೆ. ಇದು ಸೀಟು ಬಗ್ಗೆ ಅಲ್ಲ ಗೆಲುವು ಬಗ್ಗೆ ಎಂದು ಬರೆದಿದ್ದಾರೆ.

“ಕೆಲವು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅಲ್ಲ, ಆದರೆ ಜನರ ನೋವು ಮತ್ತು ಹತಾಶೆ ಅರ್ಥಮಾಡಿಕೊಳ್ಳುವುದು ಮತ್ತು ಬಿಜೆಪಿಯ ಭ್ರಷ್ಟ ಮತ್ತು ಕುತಂತ್ರ ರಾಜಕಾರಣದಿಂದ ಅವರನ್ನು ಮುಕ್ತಗೊಳಿಸುವುದು. ಇದು ಹರ್ಯಾಣದ ನಿಜವಾದ ಅಭಿವೃದ್ಧಿ ಮತ್ತು ಅದರ ಜನರ ಕಲ್ಯಾಣದ ಬಗ್ಗೆ ಆಗಿದೆ. ಕಳೆದ 10 ರಲ್ಲಿ ವರ್ಷಗಳಲ್ಲಿ, ಬಿಜೆಪಿ ಹರ್ಯಾಣದ ಅಭಿವೃದ್ಧಿಯನ್ನು ಎರಡು ದಶಕಗಳಷ್ಟು ಹಿಂದಕ್ಕೆ ತಳ್ಳಿದೆ ಎಂದು ಅಖಿಲೇಶ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಮತ್ತು ಜನನಾಯಕ ಜನತಾ ಪಾರ್ಟಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆದರೆ, ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ-ಜೆಜೆಪಿ ಮೈತ್ರಿ ಮುರಿದು ಬಿದ್ದಿತ್ತು.

ಇದನ್ನೂ ಓದಿ: Haryana Assembly Elections: ವಿನೇಶ್ ಫೋಗಟ್, ಬಜರಂಗ್ ಪುನಿಯಾ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ

2024 ರ ಲೋಕಸಭಾ ಚುನಾವಣೆಯಲ್ಲಿ, ಹರ್ಯಾಣದ 10 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಐದು ಸ್ಥಾನಗಳನ್ನು ಗೆದ್ದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ