2031ರ ವೇಳೆಗೆ ಭಾರತ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಬಹುದು: ಆರ್‌ಬಿಐ ಡೆಪ್ಯುಟಿ ಗವರ್ನರ್

ಆರ್ಥಿಕ ಅಭಿವೃದ್ಧಿಯಲ್ಲಿ ಭಾರತದ ಪ್ರಯಾಣ ಪ್ರಯಾಸಕರವಾದುದು. ಕಳೆದ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತವು 3.6 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿದೆ ಎಂದು ಹೇಳಿದರು. ಭಾರತವು ಪ್ರಸ್ತುತ ವಿನಿಮಯ ದರದಲ್ಲಿ ₹ 295.4 ಲಕ್ಷ ಕೋಟಿ ಅಥವಾ 3.6 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿದೆ.

2031ರ ವೇಳೆಗೆ ಭಾರತ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಬಹುದು: ಆರ್‌ಬಿಐ ಡೆಪ್ಯುಟಿ ಗವರ್ನರ್
ಮೈಕೆಲ್ ದೇಬಬ್ರತ ಪಾತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Jul 13, 2024 | 5:55 PM

ದೆಹಲಿ ಜುಲೈ 13: ಭಾರತವು 2031 ರ ವೇಳೆಗೆ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು(largest economy) 2060 ರ ವೇಳೆಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಡೆಪ್ಯುಟಿ ಗವರ್ನರ್ ಮೈಕೆಲ್ ದೇಬಬ್ರತ ಪಾತ್ರ ( Michael Debabrata Patra) ಹೇಳಿದ್ದಾರೆ. “2048 ರ ವೇಳೆಗೆ ಅಲ್ಲ, ಆದರೆ 2031 ರ ವೇಳೆಗೆ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಮತ್ತು 2060 ರ ವೇಳೆಗೆ  ಭಾರತವು  ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪಾತ್ರ ಹೇಳಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಜುಲೈ 9 ರಂದು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಿಗೆ ಮಿಡ್-ಕರಿಯರ್ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡುತ್ತಿದ್ದರವರು.

ಆರ್ಥಿಕ ಅಭಿವೃದ್ಧಿಯಲ್ಲಿ ಭಾರತದ ಪ್ರಯಾಣ ಪ್ರಯಾಸಕರವಾದುದು. ಕಳೆದ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತವು 3.6 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿದೆ ಎಂದು ಹೇಳಿದರು. ಭಾರತವು ಪ್ರಸ್ತುತ ವಿನಿಮಯ ದರದಲ್ಲಿ ₹ 295.4 ಲಕ್ಷ ಕೋಟಿ ಅಥವಾ 3.6 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿದೆ. ತಲಾ ಆದಾಯ ₹ 2,07,030 ಅಥವಾ 2,500 ಅಮೆರಿಕನ್ ಡಾಲರ್ ಆಗಿದ್ದು ಭಾರತವು ಕಡಿಮೆ ಮಧ್ಯಮ-ಆದಾಯದ ದೇಶಗಳ ಗುಂಪಿನಲ್ಲಿ ಸೇರಿದೆ. ಇದು ಘಟನಾತ್ಮಕ ಮತ್ತು ಪ್ರಯಾಸಕರ ಪ್ರಯಾಣವಾಗಿದೆ, ಇದನ್ನು ಸಂಖ್ಯಾಶಾಸ್ತ್ರಜ್ಞರು ‘ಸ್ಟ್ರಕ್ಟರಲ್ ಬ್ರೇಕ್’ ಎಂದು ಕರೆಯುತ್ತಾರೆ ಎಂದಿದ್ದಾರೆ ಪಾತ್ರ.

ಭಾರತವು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಬೇಕಾದರೆ ಮುಂದಿನ ಹತ್ತು ವರ್ಷಗಳವರೆಗೆ ವಾರ್ಷಿಕ 9.6 ರಷ್ಟು ದರದಲ್ಲಿ ಬೆಳೆಯಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ವಾರ್ಷಿಕ ಶೇ.9.6 ದರದಲ್ಲಿ ಬೆಳೆಯಲು ಸಾಧ್ಯವಾದರೆ, ಕೆಳ ಮಧ್ಯಮ ಆದಾಯದ ಬಲೆಯಿಂದ ಮುಕ್ತಿ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲಿದೆ” ಎಂದು ಅವರು ಹೇಳಿದರು.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯೋಜನೆಗಳ ಪ್ರಕಾರ, PPP (ಖರೀದಿ ಸಾಮರ್ಥ್ಯದ ಸಮಾನತೆ) ಪರಿಭಾಷೆಯಲ್ಲಿ ಭಾರತವು 2048 ರ ವೇಳೆಗೆ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತೀಯ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕಾಗಿ, ಹಣದುಬ್ಬರವನ್ನು ಗುರಿಯೊಂದಿಗೆ ಹೊಂದಿಸಲು ಆರ್​​ಬಿಐ ಬದ್ಧವಾಗಿದೆ. ಹಣದುಬ್ಬರವು 2025-26 ರಲ್ಲಿ ಶೇಕಡಾ 4.1 ಕ್ಕೆ ಇಳಿಯುತ್ತದೆ ಎಂದು ಡೆಪ್ಯೂಟಿ ಗವರ್ನರ್ ಹೇಳಿದ್ದಾರೆ.

ಇದನ್ನೂ ಓದಿ: Ratna Bhandar: 4 ದಶಕಗಳ ಬಳಿಕ ನಾಳೆ ಬಯಲಾಗುತ್ತಾ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ

“ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಇದು 2024-25 ರಲ್ಲಿ ಸರಾಸರಿ 4.5 ಶೇಕಡಾ ಮತ್ತು 2025-26 ರಲ್ಲಿ 4.1 ಶೇಕಡಾಕ್ಕೆ ಹಣದುಬ್ಬರವನ್ನು ಯೋಜಿಸುತ್ತದೆ. ಹಣದುಬ್ಬರವು ಭವಿಷ್ಯದಲ್ಲಿ ನಿರಂತರ ಹೆಚ್ಚಿನ ಬೆಳವಣಿಗೆಯ ಅಡಿಪಾಯವನ್ನು ಹಾಕುತ್ತದೆ” ಎಂದು ಪಾತ್ರ ಹೇಳಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) ಮಾರ್ಚ್ 2018 ರಲ್ಲಿ ತಮ್ಮ ಗರಿಷ್ಠ ಮಟ್ಟದಿಂದ ಮಾರ್ಚ್ 2024 ರ ವೇಳೆಗೆ ಒಟ್ಟು ಆಸ್ತಿಯ ಶೇಕಡಾ 2.8 ಕ್ಕೆ ಸ್ಥಿರವಾಗಿ ಕುಸಿದಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ