ಇದು ಸಂಕುಚಿತ ಮನಸ್ಸಿನ ರಾಜಕೀಯ: ಯುಎಸ್ ಪ್ರತಿನಿಧಿ ಇಲ್ಹಾನ್ ಒಮರ್ ಅವರ ಪಿಒಕೆ ಭೇಟಿ ಖಂಡಿಸಿದ ಭಾರತ

| Updated By: ರಶ್ಮಿ ಕಲ್ಲಕಟ್ಟ

Updated on: Apr 21, 2022 | 6:30 PM

ಏಪ್ರಿಲ್ 20-24ರವರೆಗೆ ಒಮರ್ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಭೇಟಿಯಲ್ಲಿದ್ದಾರೆ. ಅಲ್ಲಿ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ನಾಯಕತ್ವದೊಂದಿಗಿನ ಸಭೆಗಳ ಹೊರತಾಗಿ, ಅವರು ಲಾಹೋರ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.

ಇದು ಸಂಕುಚಿತ ಮನಸ್ಸಿನ ರಾಜಕೀಯ: ಯುಎಸ್ ಪ್ರತಿನಿಧಿ ಇಲ್ಹಾನ್ ಒಮರ್ ಅವರ ಪಿಒಕೆ ಭೇಟಿ ಖಂಡಿಸಿದ ಭಾರತ
ಇಮ್ರಾನ್ ಖಾನ್ ಜತೆ ಇಲ್ಹಾನ್ ಒಮರ್
Follow us on

ಪಾಕ್ ಆಕ್ರಮಿತ ಕಾಶ್ಮೀರಕ್ಕೆ (Pakistan occupied Kashmir) ಅಮೆರಿಕ ಪ್ರತಿನಿಧಿ ಇಲ್ಹಾನ್ ಒಮರ್ (Ilhan Omar )ಭೇಟಿ ನೀಡುತ್ತಿದ್ದಂತೆ ಭಾರತ ಗುರುವಾರ ಈ ಭೇಟಿಯನ್ನು ಖಂಡಿಸಿದೆ. ಭಾರತದ “ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ” ವನ್ನು ಉಲ್ಲಂಘಿಸುವ “ಸಂಕುಚಿತ ಮನಸ್ಸಿನ ರಾಜಕೀಯ” ಎಂದು ಭಾರತ ಹೇಳಿದೆ. ಒಮರ್ ಅವರು ಏಪ್ರಿಲ್ 20 ರಿಂದ 24 ರವರೆಗೆ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಭೇಟಿಯಲ್ಲಿದ್ದಾರೆ. ಅಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದರು. ಅಷ್ಟೇ ಅಲ್ಲದೆ ಪಿಒಕೆಯಲ್ಲಿ ಮುಜಫರಾಬಾದ್‌ಗೆ ಭೇಟಿ ನೀಡಿದರು.ಈ  ಬಗ್ಗೆ ಪ್ರತಿಕ್ರಿಯಿಸಿದ  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, “ಅಮೆರಿಕದ ಪ್ರತಿನಿಧಿ ಇಲ್ಹಾನ್ ಒಮರ್ ಅವರು ಪ್ರಸ್ತುತ ಪಾಕಿಸ್ತಾನದಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಭಾರತೀಯ ಕೇಂದ್ರಾಡಳಿತ ಪ್ರದೇಶದ ಒಂದು ಭಾಗಕ್ಕೆ ಭೇಟಿ ನೀಡಿರುವುದನ್ನು ನಾವು ಗಮನಿಸಿದ್ದೇವೆ. ಅಂತಹ ರಾಜಕಾರಣಿ ಇಲ್ಲಿ ತನ್ನ ಸಂಕುಚಿತ ರಾಜಕಾರಣವನ್ನು ಮಾಡಲು ಬಯಸಿದರೆ, ಅದು ಅವರಿಗೆ ಬಿಟ್ಟಿದ್ದು. ಆದರೆ ಅದರ ಅನ್ವೇಷಣೆಯಲ್ಲಿ ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವುದರಿಂದ ಅದು ನಮ್ಮದಾಗುತ್ತದೆ. ಈ ಭೇಟಿ ಖಂಡನೀಯ’ ಎಂದರು.
ಈ ತಿಂಗಳ ಆರಂಭದಲ್ಲಿ, ಡೆಮಾಕ್ರಟಿಕ್ ಕಾಂಗ್ರೆಸ್‌ವುಮನ್  ಒಮರ್, ಅವರು ಮಾನವ ಹಕ್ಕುಗಳ ವಿಷಯದಲ್ಲಿ ಮೋದಿ ಸರ್ಕಾರವನ್ನು ಟೀಕಿಸಲು ಬಿಡೆನ್ ಆಡಳಿತವು ಏಕೆ ಹಿಂಜರಿಯುತ್ತಿದೆ ಎಂದು ಕೇಳಿದರು. ಭಾರತವು ಮುಸ್ಲಿಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಒಮರ್ ಈ ಹಿಂದೆ ಆರೋಪಿಸಿದ್ದರು.


ಏಪ್ರಿಲ್ 20-24ರವರೆಗೆ ಒಮರ್ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಭೇಟಿಯಲ್ಲಿದ್ದಾರೆ. ಅಲ್ಲಿ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ನಾಯಕತ್ವದೊಂದಿಗಿನ ಸಭೆಗಳ ಹೊರತಾಗಿ, ಅವರು ಲಾಹೋರ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳನ್ನು ತನಿಖೆ ಮಾಡಲು ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ವ್ಯವಹಾರಗಳ ಸಮಿತಿಯು ಈ ಹಿಂದೆ ವಿಚಾರಣೆಗಳನ್ನು ನಡೆಸಿತ್ತು ಮತ್ತು ಭಾರತದಲ್ಲಿ ಮುಸ್ಲಿಂ ವಿರೋಧಿ ವಾಕ್ಚಾತುರ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸಿದೆ ಎಂದು ಮುಜಫರಾಬಾದ್‌ನಲ್ಲಿ ಒಮರ್ ಹೇಳಿದರು.

ಇದನ್ನೂ ಓದಿ: ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆ, ಮೋದಿ ಸರ್ಕಾರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ: ಅಮಿತ್ ಶಾ