ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಅಜೆಂಡಾವಿರುವ ರಾಜಕೀಯ ರಂಗ ಬೇಕಾಗಿಲ್ಲ: ಕೆಸಿಆರ್

ಇತರ ಕೆಲವು ಪಕ್ಷಗಳೂ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ವಿಷಯವನ್ನು ಎತ್ತಿದವು. ಇದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ನಾನು ಅವರಿಗೆ ಹೇಳಿದೆ. ಮೋದಿಯನ್ನು ಕೆಳಗಿಳಿಸಿ ಕೆಲವು ಟಾಮ್, ಡಿಕ್ ಮತ್ತು ಹ್ಯಾರಿಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವತ್ತ ಗಮನ ಹರಿಸಿಲ್ಲ ಎಂದು ಕೆಸಿಆರ್ ಹೇಳಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಅಜೆಂಡಾವಿರುವ ರಾಜಕೀಯ ರಂಗ ಬೇಕಾಗಿಲ್ಲ: ಕೆಸಿಆರ್
ತೆಲಂಗಾಣ ಸಿಎಂ ಕೆಸಿಆರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 27, 2022 | 6:58 PM

ಹೈದರಾಬಾದ್: ಕೇಂದ್ರದಲ್ಲಿ ಬಿಜೆಪಿಯನ್ನು(BJP) ಅಧಿಕಾರದಿಂದ ತೆಗೆದುಹಾಕುವ ಏಕೈಕ ಅಜೆಂಡಾವಿರುವ ರಾಜಕೀಯ ರಂಗ ಅಥವಾ  ಗುಂಪು  ಭಾರತಕ್ಕೆ ಅಗತ್ಯವಿಲ್ಲ ಎಂದು ತೆಲಂಗಾಣ (Telangana) ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಬುಧವಾರ ಹೇಳಿದ್ದಾರೆ.  ರಾವ್ ಅವರು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಪರ್ಯಾಯವಾದ ಜನರ ಕಾರ್ಯಸೂಚಿಗೆ ಕರೆ ನೀಡಿದರು. 2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳುವ ಪ್ರಯತ್ನಗಳ ಭಾಗವಾಗಿ ಅವರು ಸರಣಿ ಸಭೆಗಳನ್ನು ನಡೆಸುತ್ತಿರುವಾಗ ರಾವ್ ಅವರ ಈ ಹೇಳಿಕೆಗಳು ಬಂದಿವೆ. ಕೆಸಿಆರ್ ಮಾರ್ಚ್‌ನಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಫೆಬ್ರವರಿ 20 ರಂದು ಮುಂಬೈನಲ್ಲಿ ಪ್ರತ್ಯೇಕವಾಗಿ ಭೇಟಿಯಾದರು.  ಠಾಕ್ರೆ ಅವರ ಶಿವಸೇನೆ ಮತ್ತು ಎನ್‌ಸಿಪಿ ಮಹಾರಾಷ್ಟ್ರದಲ್ಲಿ ತಮ್ಮ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಸರ್ಕಾರದ ಭಾಗವಾಗಿ ಕಾಂಗ್ರೆಸ್ ಕೂಡ ಇದೆ. ಮುಂಬೈನಲ್ಲಿ ತಮ್ಮ ಸಭೆಗಳ ನಂತರ, ಕೆಸಿಆರ್ ಅವರು “ವಿಭಜಕ, ಕೋಮುವಾದಿ ಶಕ್ತಿಗಳ” ವಿರುದ್ಧ ಹೋರಾಡಲು ಮತ್ತು ದೇಶದ ಆಡಳಿತದಲ್ಲಿ ಬದಲಾವಣೆಯನ್ನು ತರಲು ರಾಷ್ಟ್ರೀಯ ರಾಜಕೀಯದಲ್ಲಿ ಪಾತ್ರವಹಿಸಲು ಪ್ರತಿಜ್ಞೆ ಮಾಡಿದರು. ತನಗೆ ರಾಜಕೀಯ ಅಜೆಂಡಾ ಅಗತ್ಯವಿಲ್ಲ, ಆದರೆ ದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಪರ್ಯಾಯವಾದ ಜನರ ಅಜೆಂಡಾ ಬೇಕಾಗಿದೆ.ಯಾವುದೇ ಹೊಸ ಪ್ರಯೋಗವು ಈ ತತ್ವಶಾಸ್ತ್ರವನ್ನು ಆಧರಿಸಿರಬೇಕು” ಎಂದು ತೆಲಂಗಾಣ ರಾಷ್ಟ್ರ ಸಮಿತಿಯ 21 ನೇ ಸಂಸ್ಥಾಪನಾ ದಿನದಂದು ತಮ್ಮ ಭಾಷಣದಲ್ಲಿ ರಾವ್ ಹೇಳಿದರು.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕಿತ್ತೊಗೆಯಲು ಕಮ್ಯುನಿಸ್ಟ್ ನಾಯಕರು ತಮ್ಮ ಸಹಾಯ ಕೋರಿದ್ದಾರೆ ಎಂದರು. “ಇತರ ಕೆಲವು ಪಕ್ಷಗಳೂ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ವಿಷಯವನ್ನು ಎತ್ತಿದವು. ಇದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ನಾನು ಅವರಿಗೆ ಹೇಳಿದೆ. ಮೋದಿಯನ್ನು ಕೆಳಗಿಳಿಸಿ ಕೆಲವು ಟಾಮ್, ಡಿಕ್ ಮತ್ತು ಹ್ಯಾರಿಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವತ್ತ ಗಮನ ಹರಿಸಿಲ್ಲ ಎಂದು ಕೆಸಿಆರ್ ಹೇಳಿದ್ದಾರೆ.

ಭಾರತೀಯ ರಾಷ್ಟ್ರ ಸಮಿತಿಗೆ ಸಲಹೆಗಳನ್ನು ಪಡೆಯುತ್ತಿದ್ದಾರೆ. “ದೇಶಕ್ಕೆ ಖಂಡಿತವಾಗಿಯೂ ಹೊಸ ದಿಕ್ಕು ಮತ್ತು ಸರಿಯಾದ ಮಾರ್ಗವನ್ನು ತೋರಿಸುವ ಪರ್ಯಾಯ ಕಾರ್ಯಸೂಚಿಯ ಅಗತ್ಯವಿದೆ. ಅದನ್ನು ನಿಜವಾಗಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೈದರಾಬಾದ್‌ನಿಂದ ಈ ವೇದಿಕೆಯಲ್ಲಿ ಹೊಸ ಪ್ರಸ್ತಾಪ, ಹೊಸ ಕಾರ್ಯಸೂಚಿ ಮತ್ತು ಹೊಸ ತತ್ವಶಾಸ್ತ್ರ ಹೊರಹೊಮ್ಮಿ ಇಡೀ ದೇಶಕ್ಕೆ ಹರಡಿದರೆ, ಅದು ನಮಗೆ ಹೆಮ್ಮೆಯ ವಿಷಯವಾಗಿದೆ.

ದೇಶಕ್ಕೆ ಹೊಸ ಕೃಷಿ, ಆರ್ಥಿಕ ಮತ್ತು ಕೈಗಾರಿಕಾ ನೀತಿಗಳ ಅಗತ್ಯವಿದೆ . “ಅದಕ್ಕಾಗಿ, ನಮಗೆ ಸರಿಯಾದ ವೇದಿಕೆ ಬೇಕು. ಕ್ಷುಲ್ಲಕ ಮತ್ತು ಸಂಕುಚಿತ ರಾಜಕಾರಣವನ್ನು ಮೀರಿ ಬೆಳೆಯಬೇಕು. ನಮಗೆ ದೇಶಕ್ಕಾಗಿ ಪ್ರಗತಿಪರ ಮಾರ್ಗ ಬೇಕು ಮತ್ತು ಆಗ ಮಾತ್ರ ನಾವು ಬಲಿಷ್ಠ ರಾಷ್ಟ್ರವನ್ನು ನೋಡಬಹುದು ಎಂದಿದ್ದಾರೆ ಕೆಸಿಆರ್.

ಇದನ್ನೂ ಓದಿ:Video: ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರೆ, ಅರವಿಂದ್ ಕೇಜ್ರಿವಾಲ್ ಹೀಗೆ ಕುಳಿತುಕೊಳ್ಳೋದಾ?- ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್