ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚಿಗೆ ಭಾರತ ಕಳವಳ

ಅಮೆರಿಕದ ಇಲಿನಾಯ್ಸ್‌ನ ಪಾಲಟೈನ್‌ನಲ್ಲಿರುವ ಹಿಂದೂ ದೇವಾಲಯವೊಂದನ್ನು ಗುರಿಯಾಗಿಸಿಕೊಂಡು ನಡೆಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ಗುಂಡಿನ ದಾಳಿಯ ಸಂಚನ್ನು ಅಮೆರಿಕದ ಭದ್ರತಾ ಸಂಸ್ಥೆಗಳು ವಿಫಲಗೊಳಿಸಿದ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.   "ಇಲಿನಾಯ್ಸ್‌ನ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಹಣೆದಿದ್ದ ಸಂಚಿನ ವರದಿಗಳು ನಮಗೆ ತೀವ್ರ ಕಳವಳ ಉಂಟುಮಾಡಿವೆ. ಈ ದಾಳಿಯ ಯೋಜನೆಯಲ್ಲಿದ್ದ ಹಿಂದೂ ವಿರೋಧಿ ಹಾಗೂ ಜನಾಂಗೀಯ ದ್ವೇಷದ ಸ್ವರೂಪ ಮತ್ತು ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರ ನಡೆಸುವ ಬೆದರಿಕೆಯು ಅತ್ಯಂತ ಆತಂಕಕಾರಿಯಾಗಿದೆ" ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚಿಗೆ ಭಾರತ ಕಳವಳ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
Image Credit source: PTI

Updated on: Oct 15, 2026 | 4:00 PM

ನವದೆಹಲಿ, ಅಕ್ಟೋಬರ್ 15: ಅಮೆರಿಕದ ಇಲಿನಾಯ್ಸ್ ರಾಜ್ಯದ ಹಿಂದೂ ದೇವಾಲಯವೊಂದರ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ನಡೆದಿದ್ದ ಸಂಚಿನ ಕುರಿತು ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೇವಾಲಯಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಭಾರತ ಆಗ್ರಹಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಆರೋಪಿಯ ಬಂಧನ, ಆತನನ್ನು ವಶಕ್ಕೆ ಪಡೆದಿರುವುದು ಹಾಗೂ ಆತನ ವಿರುದ್ಧ ಹೊರಿಸಲಾದ ಆರೋಪಗಳು ಸೇರಿದಂತೆ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಕೈಗೊಂಡಿರುವ ತಕ್ಷಣದ ಕ್ರಮವನ್ನು ನಾವು ಗಮನಿಸಿದ್ದೇವೆ” ಎಂದು ಹೇಳಿದ್ದಾರೆ.

“ಈ ಘಟನೆಯು ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷ ಹಾಗೂ ಭಾರತ ವಿರೋಧಿ ಆಕ್ರೋಶದ ಕುರಿತು ಇರುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ದ್ವೇಷಪೂರಿತ ಹಿಂಸಾಚಾರದ ವಿರುದ್ಧ ಹೆಚ್ಚಿನ ಜಾಗರೂಕತೆ, ಶೂನ್ಯ ಸಹಿಷ್ಣುತೆ ಹಾಗೂ ಭಾರತೀಯ ಸಮುದಾಯದ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳ ಅಗತ್ಯವಿದೆ. ಅಮೆರಿಕ ಸರ್ಕಾರ ಈ ವಿಷಯವನ್ನು ಸಮಗ್ರವಾಗಿ ತನಿಖೆ ಮಾಡುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಭಾರತೀಯರ ಹತ್ಯೆಗೆ ರೈಫಲ್ ಹಿಡಿದು ಅಮೆರಿಕದ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್: ಗನ್ ಜಾಮ್ ಆಗಿದ್ದರಿಂದ ತಪ್ಪಿದ ಭಾರೀ ದುರಂತ

ಏನಿದು ಘಟನೆ?:

ಅಮೆರಿಕದ ಇಲಿನಾಯ್ಸ್‌ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂಬಾತನನ್ನು ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ಬಳಿ ಪತ್ತೆಯಾದ ಭಾರತೀಯ ಮೂಲದವರ ವಿರುದ್ಧದ ಮ್ಯಾನಿಫೆಸ್ಟೋ ಪತ್ತೆಯಾಗಿದೆ. ಈ ಕೃತ್ಯದ ಹಿಂದೆ ಇರುವ ಜನಾಂಗೀಯ ನಿಂದನೆ ಮತ್ತು ಹಿಂದೂ ವಿರೋಧಿ ದ್ವೇಷವು ಅತ್ಯಂತ ಕಳವಳಕಾರಿಯಾಗಿದೆ ಎಂದು ಭಾರತ ಬಣ್ಣಿಸಿದೆ.


ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಧಾರ್ಮಿಕ ಕೇಂದ್ರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಉನ್ನತ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Video: ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು

ಅಪಾಯವನ್ನು ಸಮಯೋಚಿತವಾಗಿ ಗುರುತಿಸಿ ಆರೋಪಿಯನ್ನು ಬಂಧಿಸಿರುವ ಅಮೆರಿಕದ ಅಧಿಕಾರಿಗಳ ಕ್ರಮವನ್ನು ಭಾರತ ಸ್ವಾಗತಿಸಿದೆ. ಸ್ಥಳೀಯ ಪೊಲೀಸ್ ಆಡಳಿತವು ಈ ಕುರಿತು ಎಚ್ಚರಿಕೆ ವಹಿಸಿದ್ದು, ಸುತ್ತಮುತ್ತಲಿನ ಎಲ್ಲಾ ಹಿಂದೂ ಪ್ರಾರ್ಥನಾ ಮಂದಿರಗಳಿಗೆ ಹೆಚ್ಚಿನ ಭದ್ರತೆ ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us