AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರ ಹತ್ಯೆಗೆ ರೈಫಲ್ ಹಿಡಿದು ಅಮೆರಿಕದ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್: ಗನ್ ಜಾಮ್ ಆಗಿದ್ದರಿಂದ ತಪ್ಪಿದ ಭಾರೀ ದುರಂತ

ಅಮೆರಿಕದ ಚಿಕಾಗೋ ಹಿಂದೂ ದೇವಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ ಯತ್ನಿಸಿದ 19ರ ಯುವಕ ಅರೆಸ್ಟ್. ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಭಾರತೀಯರನ್ನು ಗುರಿಯಾಗಿಸಿಕೊಂಡಿದ್ದ. ಗನ್ ಜಾಮ್ ಆದ ಕಾರಣ ದೊಡ್ಡ ದುರಂತ ತಪ್ಪಿದೆ. ಸಹೋದ್ಯೋಗಿಯ ಮಾಹಿತಿ ಮೇರೆಗೆ ಬಂಧನ. ನವ-ನಾಜಿ ಸಿದ್ಧಾಂತದ ಚಿಹ್ನೆಗಳು ಪತ್ತೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಈ ಘಟನೆ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಭಾರತೀಯರ ಹತ್ಯೆಗೆ ರೈಫಲ್ ಹಿಡಿದು ಅಮೆರಿಕದ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್: ಗನ್ ಜಾಮ್ ಆಗಿದ್ದರಿಂದ ತಪ್ಪಿದ ಭಾರೀ ದುರಂತ
ಆರೋಪಿ Image Credit source: X Account, Zeerohour, AFP
ನಯನಾ ರಾಜೀವ್
|

Updated on: Oct 15, 2026 | 8:04 AM

Share

ಚಿಕಾಗೋ, ಅಕ್ಟೋಬರ್ 15: ಅಮೆರಿಕದ ಇಲಿನಾಯ್ಸ್‌ನ ಗ್ರೇಟರ್ ಚಿಕಾಗೋ ವ್ಯಾಪ್ತಿಯ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ ಭಾರತೀಯ ಮೂಲದವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂದು ಗುರುತಿಸಲಾಗಿದೆ.

ಆರೋಪಿಯು ಅರೋರಾದ ಹಿಂದೂ ಪೂಜಾ ಸ್ಥಳದ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾಗ, ಆತನ ಸಹೋದ್ಯೋಗಿ ನೀಡಿದ ತುರ್ತು ಸುಳಿವಿನ ಮೇರೆಗೆ ಪ್ಯಾಲಟೈನ್, ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ಹಾಗೂ ಎಫ್‌ಬಿಐ ನಡೆಸಿದ ಮಿಂಚಿನ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಹೆಡೆಮುರಿ ಕಟ್ಟಲಾಗಿದೆ. ಬುಧವಾರ ಆತನನ್ನು ಕುಕ್ ಕೌಂಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಜಾಮೀನು ರಹಿತ ಬಂಧನಕ್ಕೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30 ಕ್ಕೆ ನಿಗದಿಪಡಿಸಿದೆ.

ಪೋಸ್ಟ್​

ಸಹೋದ್ಯೋಗಿಗೆ ಸಿಕ್ಕ ಸುಳಿವು: ಪ್ಯಾಲಟೈನ್‌ನ ಟ್ಯಾಕೋ ಬೆಲ್ ಫಾಸ್ಟ್‌ಫುಡ್ ಮಳಿಗೆಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಪಪೊರಾಕಿಸ್, ತನ್ನ ಸಾಮೂಹಿಕ ಹತ್ಯೆಯ ರಹಸ್ಯ ಯೋಜನೆಯ ದಾಖಲೆಗಳು, ರೈಫಲ್, ಮತ್ತು ಲೋಡೆಡ್ ಮ್ಯಾಗಜೀನ್‌ಗಳ ಫೋಟೋಗಳನ್ನು ಸಹೋದ್ಯೋಗಿಯೊಬ್ಬನಿಗೆ ಕಳುಹಿಸಿದ್ದ. ಜೊತೆಗೆ ಭಾನುವಾರ ತನಗೆ ವಿಶೇಷ ದಿನ ಎಂದು ಹೇಳಿಕೊಂಡಿದ್ದ.

ಹಿಂದೂ ಅಮೆರಿಕನ್ ಫೌಂಡೇಶನ್ ಹಾಗೂ ತನಿಖಾಧಿಕಾರಿಗಳ ಪ್ರಕಾರ, ಅಕ್ಟೋಬರ್ 11 ರ ಭಾನುವಾರ ಮುಂಜಾನೆ ಈತ ಶಸ್ತ್ರಸಜ್ಜಿತನಾಗಿ ದೇವಾಲಯದ ಆವರಣಕ್ಕೆ ತಲುಪಿದ್ದ. ಆದರೆ ಅದೃಷ್ಟವಶಾತ್ ಆತನ ಬಂದೂಕು ಜಾಮ್ ಆಗಿತ್ತು. ಇದರಿಂದ ಆತಂಕಗೊಂಡ ಆತ ಯಾರಿಗೂ ಕಾಣದಂತೆ ಅಲ್ಲಿಂದ ಕಾಲ್ಕಿತ್ತಿದ್ದ. ನಂತರ ಸಹೋದ್ಯೋಗಿಗೆ ಕರೆ ಮಾಡಿ ಗನ್ ಜಾಮ್ ಆಯಿತು, ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳಿಕೊಂಡಿದ್ದ.

ಮತ್ತಷ್ಟು ಓದಿ:

ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ

ಸಹೋದ್ಯೋಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ, ಅಕ್ಟೋಬರ್ 11 ರ ಸಂಜೆ ಪಪೊರಾಕಿಸ್ ತನ್ನ ಮನೆಯಿಂದ ಹೊರಹೋಗುತ್ತಿದ್ದ ವೇಳೆ ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ಆರೋಪಿಯ ಮನೆಯನ್ನು ಶೋಧಿಸಿದಾಗ 16 ಇಂಚಿಗಿಂತ ಕಡಿಮೆ ಉದ್ದದ ಅಪಾಯಕಾರಿ ಶಾರ್ಟ್-ಬ್ಯಾರೆಲ್ ರೈಫಲ್, ನೂರಾರು ಸುತ್ತುಗಳ ಜೀವಂತ ಗುಂಡುಗಳು, ಯುದ್ಧತಂತ್ರದ ಜಾಕೆಟ್ ಮತ್ತು ನವ-ನಾಜಿ ಸಿದ್ಧಾಂತದ ಚಿಹ್ನೆಗಳುಳ್ಳ ಪ್ಯಾಚ್‌ಗಳು ಪತ್ತೆಯಾಗಿವೆ.

ಈತನ ವಿರುದ್ಧ ಕಾನೂನುಬಾಹಿರ ಮಾರಕಾಸ್ತ್ರ ಸಂಗ್ರಹಣೆ ಹಾಗೂ ಭಯೋತ್ಪಾದಕ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಎಫ್‌ಬಿಐ ಈತನ ವಿರುದ್ಧ ‘ದ್ವೇಷದ ಅಪರಾಧ’ಕಾಯ್ದೆಯಡಿ ಹೆಚ್ಚುವರಿ ಫೆಡರಲ್ ಆರೋಪಗಳನ್ನು ಹೊರಿಸಲು ತನಿಖೆ ಮುಂದುವರಿಸಿದೆ.

ಹಿಂದೂ ಹಬ್ಬಗಳ ಸಂದರ್ಭದಲ್ಲಿ ಆತಂಕ: ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮ ಆರಂಭವಾಗುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ.

ಓಹಿಯೋ ಮಂದಿರದ ಮೇಲಿನ ದಾಳಿ: ಕೇವಲ ಎರಡು ವಾರಗಳ ಹಿಂದಷ್ಟೇ ಓಹಿಯೋದ ರಿಚ್ಮಂಡ್ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಲ್ ಧಾಮ್ ಹಿಂದೂ ಮಂದಿರವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿರೂಪಗೊಳಿಸಿದ್ದರು.

ದೇವಾಲಯಗಳಿಗೆ ಪೊಲೀಸ್ ರಕ್ಷಣೆ: ಈ ಘಟನೆಯ ಬೆನ್ನಲ್ಲೇ ಚಿಕಾಗೋ, ಅರೋರಾ ಹಾಗೂ ಸುತ್ತಮುತ್ತಲಿನ ನಗರಗಳ ಎಲ್ಲಾ ಹಿಂದೂ ದೇವಾಲಯಗಳು ಹಾಗೂ ಭಾರತೀಯ ಸಮುದಾಯ ಕೇಂದ್ರಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಮತ್ತು ಗಸ್ತು ನಿಯೋಜಿಸಲಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ (HAF) ಸ್ಥಳೀಯ ಸಮುದಾಯಕ್ಕೆ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಲು ಮನವಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ