ಭಾರತ ಮೊದಲಿನಿಂದಲೂ ಜಾತ್ಯತೀತ ರಾಷ್ಟ್ರವಾಗಿದೆ: ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಕಾಂಗ್ರೆಸ್‌ ನಿಲುವು ಕೂಡಾ ಮೊದಲಿನಿಂದಲೂ ಇದೆ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಅದು ಕೇವಲ ಹಿಂದೂ ರಾಷ್ಟ್ರವಾಗಿಲ್ಲ ಎಂಬ ಡಾ. ಅಮಾರ್ತ್ಯ ಸೇನ್​ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

ಭಾರತ ಮೊದಲಿನಿಂದಲೂ ಜಾತ್ಯತೀತ ರಾಷ್ಟ್ರವಾಗಿದೆ: ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಭಾರತ ಮೊದಲಿನಿಂದಲೂ ಜಾತ್ಯತೀತ ರಾಷ್ಟ್ರವಾಗಿದೆ: ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ
Follow us
|

Updated on: Jun 27, 2024 | 7:48 PM

ನವದೆಹಲಿ, ಜೂನ್​ 27: ಭಾರತ ಮೊದಲಿನಿಂದಲೂ ಜಾತ್ಯಾತೀತ ರಾಷ್ಟ್ರವಾಗಿದೆ. ಅದು ಯಾವತ್ತೂ ಕೂಡಾ ಕೇವಲ ಹಿಂದೂ ರಾಷ್ಟ್ರವಾಗಿರಲಿಲ್ಲ ಮತ್ತು ಕೇವಲ ಹಿಂದೂ ರಾಷ್ಟ್ರವಾಗಿರಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಆ ಮೂಲಕ ನೊಬೆಲ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಆರ್ಥಿಕಜ್ಞ ಡಾ. ಅಮಾರ್ತ್ಯ ಸೇನ್‌ (Amartya Sen) ಅವರು ನೀಡಿದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಅದು ಕೇವಲ ಹಿಂದೂ ರಾಷ್ಟ್ರವಾಗಿಲ್ಲ ಎಂಬ ಹೇಳಿಕೆಯನ್ನ ಅವರು ಸಮರ್ಥಿಸಿ ಕೊಂಡಿದ್ದಾರೆ.

ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿದ್ದರಾಮಯ್ಯ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಕಾಂಗ್ರೆಸ್‌ ನಿಲುವು ಕೂಡಾ ಮೊದಲಿನಿಂದಲೂ ಇದೆ ಆಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಎಎನ್​ಐ ಟ್ವೀಟ್ 

ಬುಧವಾರ ಸಂಜೆ ಅಮೆರಿಕದಿಂದ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಮರ್ತ್ಯ ಸೇನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಭಾರತ ಹಿಂದೂ ರಾಷ್ಟ್ರವಲ್ಲ. ಇದನ್ನು ಲೋಕಸಭಾ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: LK Advani: ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ಆರೋಗ್ಯ ಸ್ಥಿರ; ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬ್ರಿಟಿಷರ ಆಳ್ವಿಕೆಯಿಂದಲೂ ದೇಶದಲ್ಲಿ ಜನರನ್ನು ವಿಚಾರಣೆ ಮಾಡದೆ ಜೈಲಿಗೆ ಹಾಕುವುದು ಮುಂದುವರೆದಿದೆ. ಈ ಪದ್ಧತಿ ಕಾಂಗ್ರೆಸ್ ಆಡಳಿತಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರದಲ್ಲಿ ಅತೀ ಹೆಚ್ಚು ಚಾಲ್ತಿಯಲ್ಲಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದ್ದು, ಅವು ನಿಲ್ಲಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ