ಲೋಕಸಭೆ ಚುನಾವಣೆ: ಮುಂಬೈನಲ್ಲಿ ಇಂದು ‘ಇಂಡಿಯಾ’ ಒಕ್ಕೂಟದ 3ನೇ ಸಭೆ, ಹೊಸ ಚಿಹ್ನೆ ಬಿಡುಗಡೆ, ಪ್ರಧಾನಿ ಅಭ್ಯರ್ಥಿ ಘೋಷಣೆ ಸಾಧ್ಯತೆ

ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಭರ್ಜರಿ ತಯಾರಿ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಶತಾಯ ಗತಾಯವಾಗಿ ಸೋಲಿಸಬೇಕು ಎಂದು ಪಣತೊಟ್ಟಿದೆ. ಇಂಡಿಯಾ ಒಕ್ಕೂಟದ ಮೂರನೇ ಸಭೆ ಇಂದು ಮುಂಬೈನಲ್ಲಿ ನಡೆಯುತ್ತಿದೆ, ಒಕ್ಕೂಟದ ಹೊಸ ಲೋಗೋ ಹಾಗೂ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆ: ಮುಂಬೈನಲ್ಲಿ ಇಂದು ‘ಇಂಡಿಯಾ’ ಒಕ್ಕೂಟದ 3ನೇ ಸಭೆ, ಹೊಸ ಚಿಹ್ನೆ ಬಿಡುಗಡೆ, ಪ್ರಧಾನಿ ಅಭ್ಯರ್ಥಿ ಘೋಷಣೆ ಸಾಧ್ಯತೆ
ಇಂಡಿಯಾ ಒಕ್ಕೂಟ
Image Credit source: CNBCTV18.COM

Updated on: Aug 31, 2023 | 8:13 AM

ಲೋಕಸಭೆ ಚುನಾವಣೆ(Lok Sabha Election)ಗೆ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಭರ್ಜರಿ ತಯಾರಿ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಶತಾಯ ಗತಾಯವಾಗಿ ಸೋಲಿಸಬೇಕು ಎಂದು ಪಣತೊಟ್ಟಿದೆ. ಇಂಡಿಯಾ ಒಕ್ಕೂಟದ ಮೂರನೇ ಸಭೆ ಇಂದು ಮುಂಬೈನಲ್ಲಿ ನಡೆಯುತ್ತಿದೆ, ಒಕ್ಕೂಟದ ಹೊಸ ಲೋಗೋ ಹಾಗೂ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಎರಡು ದಿನಗಳ ಸಭೆ ನಡೆಯಲಿದ್ದು‌ 26 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಇಂಡಿಯಾ ಒಕ್ಕೂಟದ ಹೊಸ ಲೋಗೊ ಅನಾವರಣ ಮಾಡಲಾಗುತ್ತದೆ.‌

ಅಶೋಕ ಚಕ್ರ ರಹಿತ ತ್ರಿವರ್ಣ ಧ್ವಜ ಬಹುತೇಕ ಒಕ್ಕೂಟದ ಧ್ವಜವಾಗಿರಲಿದ್ದು, ಚಿಹ್ನೆಯ ಬಗ್ಗೆ ಇನ್ನು ನಾಯಕರು ಸುಳಿವು ಬಿಟ್ಟುಕೊಟ್ಟಿಲ್ಲ.
ಸಮನ್ವಯ ಸಮಿತಿ, ಅಧ್ಯಕ್ಷರು ಮತ್ತು ಸಂಚಾಲಕರನ್ನು ನೇಮಕ ಸಾಧ್ಯತೆ ಜೊತೆಗೆ ‘ಬಿಜೆಪಿ ಚಲೇ ಜಾವೋ’ ಅಭಿಯಾನ ಆರಂಭಿಸುವ ನಿರೀಕ್ಷೆಯಿದೆ. ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಉದ್ಧವ್‌ ಠಾಕ್ರೆ, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ, ಅರವಿಂದ್‌ ಕೇಜ್ರಿವಾಲ್‌ ಸೇರಿ 26 ಪಕ್ಷಗಳ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಅವರು ಮುಂಬೈಗೆ ತೆರಳಿದ್ದಾರೆ.

150 ಕೋಣೆಗಳನ್ನು ಬುಕ್‌ ಮಾಡಲಾಗಿದೆ, ರಾತ್ರಿ ಉದ್ಧವ್‌ ಠಾಕ್ರೆ ಇಂಡಿಯಾ ನಾಯಕರಿಗೆ ಭೋಜನ ಕೂಟ ಆಯೋಜಿಸಿದ್ದಾರೆ, ಸೀಟು ಹಂಚಿಕೆ ಹಾಗೂ ಲೋಗೊ ಅನಾವರಣ ಜತೆಗೆ ಮಧ್ಯಪ್ರದೇಶ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಗೆಲುವಿಗೆ ರಣತಂತ್ರವನ್ನೂ ರೂಪಿಸಲು ಯೋಜಿಸಲಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರನ್ನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಘೋಷಿಸಬೇಕು.

ಮತ್ತಷ್ಟು ಓದಿ: ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಮೂರನೇ ಸಭೆ

ದೆಹಲಿಯಲ್ಲಿ ಹಣದುಬ್ಬರ ಕಡಿಮೆ ಇದೆ. ಉಚಿತವಾಗಿ ಶಿಕ್ಷಣ, ವಿದ್ಯುತ್‌ ನೀಡುತ್ತಿದ್ದಾರೆ. ಹೆಣ್ಣುಮಕ್ಕಳು ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಅವರನ್ನೇ ಪಿಎಂ ಅಭ್ಯರ್ಥಿ ಎಂಬುದಾಗಿ ಘೋಷಿಸಬೇಕು ಎಂದು ಆಪ್‌ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್‌ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ದೆಹಲಿ ಸಚಿವೆ ಮತ್ತು ಆಪ್ ನಾಯಕಿ ಅತಿಶಿ ಸ್ಪಷ್ಟಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:09 am, Thu, 31 August 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us