AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಮತದಾರರ ದಿನಾಚರಣೆ | ರಿಮೋಟ್​ ವೋಟಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಆಯೋಗ ಪ್ರಯತ್ನ

ರಿಮೋಟ್ ಮತದಾನದ ಅಣಕು ಪ್ರಯೋಗ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ಇಂದು ತಿಳಿಸಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ | ರಿಮೋಟ್​ ವೋಟಿಂಗ್ ತಂತ್ರಜ್ಞಾನ ಅಭಿವೃದ್ಧಿಗೆ ಆಯೋಗ ಪ್ರಯತ್ನ
ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್
TV9 Web
| Updated By: ganapathi bhat|

Updated on:Apr 06, 2022 | 8:42 PM

Share

ದೆಹಲಿ: ಭಾರತೀಯ ಚುನಾವಣಾ ವಿಧಾನದ ಯಶಸ್ಸಿನ ಬಳಿಕ, ವಿವಿಧ ದೇಶಗಳು ಭಾರತೀಯ ಚುನಾವಣಾ ಪದ್ಧತಿಯನ್ನು ಅಧ್ಯಯನ ನಡೆಸಲು ಆಸಕ್ತಿ ತೋರಿದವು ಎಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ತಿಳಿಸಿದರು.

11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದೇಶವನ್ನು ನೀಡಿದ ರಾಮ್​ನಾಥ್ ಕೋವಿಂದ್, ಕೊವಿಡ್-19 ಪರಿಸ್ಥಿತಿಯ ನಡುವೆಯೂ ಭಾರತದ ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣೆಗಳನ್ನು ಆಯೋಜಿಸಿತು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿತು ಎಂದು ಹೇಳಿದರು.

ರಿಮೋಟ್ ವೋಟಿಂಗ್ ಬಗ್ಗೆ ಸುನಿಲ್ ಅರೋರಾ ಮಾತು ಮತದಾನ ಪ್ರಕ್ರಿಯೆಗಾಗಿ ರಿಮೋಟ್ ವೋಟಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆಯು ಈಗಾಗಲೇ ಆರಂಭವಾಗಿದೆ. ರಿಮೋಟ್ ಮತದಾನದ ಅಣಕು ಪ್ರಯೋಗ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ತಿಳಿಸಿದರು. 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ದೇಶಿಸಿ ಸುನಿಲ್ ಅರೋರಾ ಮಾತನಾಡಿದರು.

ರಿಮೋಟ್ ವೋಟಿಂಗ್ ಯೋಜನೆಯು ಉತ್ತಮ ಪ್ರಗತಿ ಹೊಂದುತ್ತಲಿದೆ. ಶೀಘ್ರವೇ ಈ ವ್ಯವಸ್ಥೆಯ ಅಣಕು ಪ್ರಯೋಗವನ್ನು ಆರಂಭಿಸಲಾಗುವುದು ಎಂದು ಹೇಳಿದರು. ಅಂಚೆ ಮತದಾನ ವ್ಯವಸ್ಥೆಯನ್ನು ವಿದೇಶಿ ಭಾರತೀಯರಿಗೂ ವಿಸ್ತರಿಸಬೇಕು ಎಂಬ ಚುನಾವಣಾ ಆಯೋಗದ ಕೋರಿಕೆಯು ಕಾನೂನು ಸಚಿವಾಲಯದ ಸಕ್ರಿಯ ಪರಿಗಣನೆಯಲ್ಲಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಹೊಸ ತಂತ್ರಜ್ಞಾನ ಹೊಂದಿರುವ ರಿಮೋಟ್ ವೋಟಿಂಗ್ ಕೆಲಸಕ್ಕಾಗಿ IIT ಮದ್ರಾಸ್ ಸಹಯೋಗ ಪಡೆದುಕೊಂಡಿದೆ ಎಂದೂ ಸುನಿಲ್ ಅರೋರಾ ಮಾಹಿತಿ ಹಂಚಿಕೊಂಡರು.

ಚುನಾವಣಾ ಆಯೋಗದ ಕಾರ್ಯ ಸ್ಮರಿಸಿದ ಪ್ರಧಾನಿ ರಾಷ್ಟ್ರೀಯ ಮತದಾರರ ದಿನಾಚರಣೆಯು, ಚುನಾವಣಾ ಆಯೋಗದ ಕಾರ್ಯಗಳನ್ನು ಸ್ಮರಿಸಿಕೊಳ್ಳಲು ಹಾಗೂ ಅಭಿನಂದಿಸಲು ಸೂಕ್ತ ಸಮಯ. ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಚುನಾವಣಾ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆಯಲು ಚುನಾವಣಾ ಆಯೋಗದ ಕೊಡುಗೆ ಮಹತ್ವದ್ದು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.

ಜ.25ರಿಂದ ಲಭ್ಯವಾಗಲಿದೆ ಡಿಜಿಟಲ್ ವೋಟರ್ ಐಡಿ ಕಾರ್ಡ್

Published On - 5:14 pm, Mon, 25 January 21