ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ; ರಾಹುಲ್ ಗಾಂಧಿ ಕಳವಳ
ಭಾರತವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಪಟ್ಟದಿಂದ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರ ಎಂಬಲ್ಲಿಗೆ ಇಳಿಸಿರುವ ವರದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸದ್ಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುವ ವಾಕ್ಯಗಳನ್ನು ಬರೆದುಕೊಂಡಿದ್ದಾರೆ.
ದೆಹಲಿ: ವಿಶ್ವದ ಅತಿದೊಡ್ಡ ಲಿಖಿತ ರೂಪದ ಸಂವಿಧಾನ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತದ ಪ್ರಸ್ತುತ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವ ಆಶಯಕ್ಕೆ ಸಂಪೂರ್ಣ ಬದ್ಧವಾಗಿಲ್ಲ ಎಂಬ ವರದಿ ಪ್ರಕಟಿಸಿರುವ ಸ್ವೀಡನ್ ಇನ್ಸ್ಟಿಟ್ಯೂಟ್ಸ್ ಡೆಮಾಕ್ರಸಿ ರಿಪೋರ್ಟ್ಸ್ ಉಲ್ಲೇಖಿಸಿರುವ ರಾಹುಲ್ ಗಾಂಧಿ ಟ್ವೀಟ್ ಮೂಲಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಭಾರತವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಪಟ್ಟದಿಂದ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರ ಎಂಬಲ್ಲಿಗೆ ಇಳಿಸಿರುವ ವರದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸದ್ಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುವ ವಾಕ್ಯಗಳನ್ನು ಬರೆದುಕೊಂಡಿದ್ದಾರೆ. ಸದರಿ ವರದಿಗೆ ಸಂಬಂಧಿಸಿದ ತಲೆಬರಹದಲ್ಲಿ ಭಾರತ ಪಾಕಿಸ್ತಾನದಂತೆಯೇ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರವಾಗಿದ್ದು, ಅದರ ಪರಿಸ್ಥಿತಿ ಬಾಂಗ್ಲಾದೇಶಕ್ಕಿಂತಲೂ ಕಳಪೆ ಎಂದು ಟೀಕಿಸಲಾಗಿದೆ.
ಇದಕ್ಕೂ ಮುನ್ನ ಅಮೆರಿಕಾ ಸರ್ಕಾರ ಪೋಷಿತ ಫ್ರೀಡಮ್ ಹೌಸ್ ಎಂಬ ಎನ್ಜಿಓ ಒಂದು, ಭಾರತವನ್ನು ಸ್ವಾತಂತ್ರ್ಯ ಎಂಬಲ್ಲಿಂದ ತುಸು ಸ್ವಾತಂತ್ರ್ಯವುಳ್ಳ ರಾಷ್ಟ್ರ ಎಂಬಲ್ಲಿಗೆ ಇಳಿಸಿ ವರದಿ ಪ್ರಕಟಿಸಿತ್ತು. ಅಂತೆಯೇ, ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಆಡಳಿತಕ್ಕೆ ಏರಿದ ನಂತರ ಭಾರತದಲ್ಲಿ ರಾಜಕೀಯ ಹಕ್ಕು ಹಾಗೂ ನಾಗರೀಕ ಸ್ವಾತಂತ್ರ್ಯದ ಹನನವಾಗಿದೆ ಎಂದೂ ಫ್ರೀಡಮ್ ಹೌಸ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ, ಇದನ್ನು ಬಲವಾಗಿ ವಿರೋಧಿಸಿದ್ದ ಸರ್ಕಾರ, ಫ್ರೀಡಮ್ ಹೌಸ್ ವರದಿ ಸಂಪೂರ್ಣ ತಪ್ಪಾಗಿದ್ದು, ವಾಸ್ತವಕ್ಕೆ ದೂರವಾಗಿದೆ ಎಂದು ಹೇಳಿತ್ತು. ಅಲ್ಲದೇ, ಭಾರತ ಅತ್ಯುತ್ತಮ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಿಕೊಂಡು ಸಾಗುತ್ತಿದೆ. ಆ ಬಗ್ಗೆ ಯಾವುದೇ ಸಂದೇಹ ಬೇಡ ಎಂದೂ ಹೇಳಿಕೊಂಡಿತ್ತು. ಅದಾದ ನಂತರ ಈಗ ಮತ್ತೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಡಿಲಗೊಳ್ಳುತ್ತಿರುವ ಬಗ್ಗೆ ಪ್ರಸ್ತಾಪವಾಗಿದ್ದು, ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
India is no longer a democratic country. pic.twitter.com/iEwmI4ZbRp
— Rahul Gandhi (@RahulGandhi) March 11, 2021
ಇದನ್ನೂ ಓದಿ: Emergency: ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ, ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ: ರಾಹುಲ್ ಗಾಂಧಿ
ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಹೋರಾಟಕ್ಕೆ ಧುಮುಕುವೆ; ಹೆಚ್.ಸಿ.ಮಹದೇವಪ್ಪ