ದೆಹಲಿ: ಭಾರತವು ವಾರ್ಷಿಕವಾಗಿ ₹ 8.5 ಲಕ್ಷ ಕೋಟಿ ಮೌಲ್ಯದ ಹಾಲನ್ನು(Milk) ಉತ್ಪಾದಿಸುತ್ತದೆ, ಇದು ಗೋಧಿ ಮತ್ತು ಅಕ್ಕಿ ವಹಿವಾಟುಗಿಂತಲೂ ಹೆಚ್ಚು. ಸಣ್ಣ ರೈತರು ಹೈನುಗಾರಿಕೆ ವಲಯದ ದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಹೇಳಿದ್ದಾರೆ. ಇಂದು ಭಾರತವು ವಿಶ್ವದ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಕೋಟ್ಯಂತರ ರೈತರ ಜೀವನವು ಹಾಲಿನ ಮೇಲೆ ಅವಲಂಬಿತವಾಗಿರುವಾಗ, ಭಾರತವು ವಾರ್ಷಿಕವಾಗಿ ₹ 8.5 ಲಕ್ಷ ಕೋಟಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ. ಇದರ ಬಗ್ಗೆ ದೊಡ್ಡ ಆರ್ಥಿಕ ತಜ್ಞರು ಸೇರಿದಂತೆ ಅನೇಕ ಜನರು ಗಮನ ಹರಿಸುವುದಿಲ್ಲ, ”ಎಂದು ಬನಸ್ಕಾಂತದ (Banaskantha) ದಿಯೋದರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಪ್ರಧಾನಿ ಹೇಳಿದರು. ಜಿಲ್ಲೆಯ ಹೊಸ ಡೈರಿ ಸಂಕೀರ್ಣ ಮತ್ತು ಬನಾಸ್ ಡೈರಿಯ ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದರವರು. “ಗ್ರಾಮಗಳ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯು ಇದಕ್ಕೆ ಉದಾಹರಣೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಗೋಧಿ ಮತ್ತು ಅಕ್ಕಿಯ ವಹಿವಾಟು ಸಹ ₹ 8.5 ಲಕ್ಷ ಕೋಟಿಗೆ ಸಮನಾಗಿಲ್ಲ. ಸಣ್ಣ ರೈತರು ಹೈನುಗಾರಿಕೆ ವಲಯದ ದೊಡ್ಡ ಫಲಾನುಭವಿಗಳು” ಮೋದಿ ಹೇಳಿದರು.
Glimpses from my visit to @banasdairy1969. The Dairy is equipped with modern infrastructure and is contributing to India’s strides in the dairy and animal husbandry sectors. pic.twitter.com/0tFCnjBiUa
— Narendra Modi (@narendramodi) April 19, 2022
ಹೊಸ ಡೈರಿ ಸಂಕೀರ್ಣ ಮತ್ತು ಬನಾಸ್ ಡೈರಿಯ ಆಲೂಗಡ್ಡೆ ಸಂಸ್ಕರಣಾ ಘಟಕವು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುವ ಮತ್ತು ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿಯವರು ಬನಾಸ್ ಸಮುದಾಯ ರೇಡಿಯೋ ಸ್ಟೇಷನ್ ಮತ್ತು ಪಾಲನ್‌ಪುರದಲ್ಲಿ ಚೀಸ್ ಉತ್ಪನ್ನಗಳು ಮತ್ತು ಪ್ರೊಟೀನ್ ಪುಡಿ ಉತ್ಪಾದನೆಗೆ ವಿಸ್ತೃತ ಸೌಲಭ್ಯಗಳು ಮತ್ತು ಡಾಮಾದಲ್ಲಿ ಸ್ಥಾಪಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಗುಜರಾತ್ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಅಭಿವೃದ್ಧಿಯನ್ನು ಕಂಡಿರುವುದು ಹೆಮ್ಮೆ ತಂದಿದೆ
ಗಾಂಧಿನಗರದಲ್ಲಿರುವ ವಿದ್ಯಾ ಸಮೀಕ್ಷಾ ಕೇಂದ್ರವು ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳನ್ನು ತರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿರುವ ಬನಾಸ್ ಡೈರಿ ಸಂಕುಲದಲ್ಲಿ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ವಿದ್ಯಾ ಸಮೀಕ್ಷಾ ಕೇಂದ್ರದಂತಹ ಆಧುನಿಕ ವ್ಯವಸ್ಥೆಯಿಂದ ದೇಶದ ಮಕ್ಕಳು ಪ್ರಯೋಜನ ಪಡೆಯುವ ಮೂಲಕ ಭಾರತಕ್ಕೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತಾರೆ ಎಂದರು. “ಗುಜರಾತ್ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಅಭಿವೃದ್ಧಿಯನ್ನು ಕಂಡಿರುವುದು ಹೆಮ್ಮೆ ತಂದಿದೆ. ನಿನ್ನೆ ಗಾಂಧಿನಗರದ ವಿದ್ಯಾ ಸಮೀಕ್ಷಾ ಕೇಂದ್ರದಲ್ಲಿ ನಾನು ಇದನ್ನು ಅನುಭವಿಸಿದೆ. ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂತಹ ಬೃಹತ್ ತಂತ್ರಜ್ಞಾನವನ್ನು ಬಳಸಿರುವುದು ಅಚ್ಚರಿಯುಂಟುಮಾಡಿದೆ. ಈ ಕ್ಷೇತ್ರದೊಂದಿಗೆ ನನಗೆ ಮೊದಲಿನಿಂದಲೂ ಒಡನಾಟವಿದೆ, ಆದರೆ ನಿನ್ನೆ ನಾನು ವಿಶೇಷವಾಗಿ ಗಾಂಧಿನಗರಕ್ಕೆ ಇದನ್ನು ನೋಡಲು ಹೋಗಿದ್ದೆ ”ಎಂದು ಅವರು ಹೇಳಿದರು. ವಿದ್ಯಾ ಸಮೀಕ್ಷಾ ಕೇಂದ್ರವು ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಲ್ಲದು ಎಂದು ಪ್ರಧಾನಿ ಒತ್ತಿ ಹೇಳಿದರು. “ವಿದ್ಯಾ ಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡಲು ನಾನು ಭಾರತ ಸರ್ಕಾರದ ಸಂಬಂಧಿಸಿದ ಸಚಿವಾಲಯಗಳು ಮತ್ತು ಅಧಿಕಾರಿಗಳನ್ನು ಕೇಳುತ್ತೇನೆ. ವಿವಿಧ ರಾಜ್ಯಗಳ ಸಂಬಂಧಪಟ್ಟ ಇಲಾಖೆಗಳು ಸಹ ಗಾಂಧಿ ನಗರಕ್ಕೆ ಬಂದು ಉಪಕ್ರಮವನ್ನು ಅಧ್ಯಯನ ಮಾಡಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ತವರು ರಾಜ್ಯ ಗುಜರಾತ್‌ಗೆ ಮೂರು ದಿನಗಳ ಭೇಟಿಗಾಗಿ ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ ಪ್ರಧಾನಿ, ಬನಾಸ್ ಡೈರಿಯನ್ನು ಶ್ಲಾಘಿಸಿದರು ಮತ್ತು ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಇತರ ಸಂಪನ್ಮೂಲಗಳನ್ನು ಬಳಸಬಹುದು ಎಂದು ಇದು ಸಾಬೀತುಪಡಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಿಶ್ಚಿಯನ್ ಮಹಿಳೆ, ಮುಸ್ಲಿಂ ಡಿವೈಎಫ್‌ಐ ನಾಯಕನ ಅಂತರ್‌ಧರ್ಮೀಯ ಸಂಬಂಧದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದ ಕೇರಳ ಹೈಕೋರ್ಟ್