Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India: ದೇಶದಲ್ಲಿ 37,593 ಹೊಸ ಕೊವಿಡ್ ಪ್ರಕರಣ ಪತ್ತೆ, 648 ಮಂದಿ ಸಾವು

Covid 19: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ ಇದುವರೆಗೆ 59.55 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ

Coronavirus cases in India: ದೇಶದಲ್ಲಿ 37,593 ಹೊಸ ಕೊವಿಡ್ ಪ್ರಕರಣ ಪತ್ತೆ, 648 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 25, 2021 | 10:42 AM

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು 648 ಸಾವುಗಳು ವರದಿಯಾಗಿವೆ. ಮಂಗಳವಾರ ಕೇರಳದಲ್ಲಿ 24,296 ಕೊವಿಡ್ ಪಾಸಿಟಿವ್ ಪ್ರಕರಣಗಳು ಮತ್ತು 173 ಸಾವುಗಳು ದಾಖಲಾಗಿವೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ ಇದುವರೆಗೆ 59.55 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಭಾರತದ ಒಟ್ಟು ಕೊವಿಡ್ -19 ಪ್ರಕರಣಗಳು 32.51 ಮಿಲಿಯನ್ ತಲುಪಿದೆ ಸಾವಿನ ಸಂಖ್ಯೆ 4,35,758ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳಿವೆ.

ಆಗಸ್ಟ್ 24 ರವರೆಗೆ ಒಟ್ಟು 51,11,84,547 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 17,92,755 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಮಹಾರಾಷ್ಟ್ರ: ಥಾಣೆಯಲ್ಲಿ 189 ಹೊಸ ಕೊವಿಡ್ -19 ಪ್ರಕರಣಗಳು 10 ಸಾವುಗಳು 189 ಹೊಸ ಕೊರೊನಾವೈರಸ್ ಪ್ರಕರಣಗಳ ಸೇರ್ಪಡೆಯೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,49,905 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳು ಮಂಗಳವಾರ ವರದಿಯಾಗಿವೆ ಎಂದು ಅವರು ಹೇಳಿದರು.

ಓಣಂ ನಂತರ ಕೇರಳದಲ್ಲಿ ಕೊವಿಡ್ ಪ್ರಕರಣ ಏರಿಕೆ

ಕೇರಳದಲ್ಲಿ ಮಂಗಳವಾರ 24,296 ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಮೇ 28 ರ ನಂತರ ರಾಜ್ಯದಲ್ಲಿ 28,798 ಪ್ರಕರಣಗಳನ್ನು ದಾಖಲಿಸಿದಾಗ ಎರಡನೇ ಬಾರಿಗೆ 24,000 ಗಡಿ ದಾಟಿದೆ. ಮೇ 27 ರಂದು ರಾಜ್ಯದಲ್ಲಿ 24,166 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಅಂದಿನಿಂದ, ರಾಜ್ಯವು ಎರಡು ಬಾರಿ ಮೇ 29 (23,513) ಮತ್ತು ನಂತರ ಆಗಸ್ಟ್ 3 (23,676) ರಂದು 24,000 ಗಡಿ ಸಮೀಪಿಸಿತು. ಮೇ 29 ರ ನಂತರ, 22,129 ಹೊಸ ಪ್ರಕರಣಗಳನ್ನು ವರದಿ ಮಾಡಿದಾಗ ರಾಜ್ಯವು ಜುಲೈ 27 ರಂದು 20,000 ಗಡಿ ದಾಟಿತು ಮತ್ತು ಅಂದಿನಿಂದ, ಇದು ಪ್ರತಿ ದಿನ 20,000 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ, 1.34 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಪರೀಕ್ಷಾ ಧನಾತ್ಮಕ ದರ (TPR) 18.04%ಕ್ಕೆ ಏರಿದೆ. ಇಲ್ಲಿಯವರೆಗೆ, 3.04 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ರಾಜ್ಯ ಹೇಳಿದೆ.

ಸೋಮವಾರದಿಂದ 19,349 ಜನರು ಕೊರೊನಾವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ, ಒಟ್ಟು ಚೇತರಿಕೆಗಳನ್ನು 36.72 ಲಕ್ಷಕ್ಕೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1.59 ಲಕ್ಷಕ್ಕೆ ತೆಗೆದುಕೊಂಡಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಜಿಲ್ಲೆಗಳಲ್ಲಿ ಎರ್ನಾಕುಲಂನಲ್ಲಿ ಮಂಗಳವಾರ 3,149 ಪ್ರಕರಣಗಳು ದಾಖಲಾಗಿದ್ದು ತ್ರಿಶೂರ್ (3,046), ಕೊಯಿಕ್ಕೋಡ್ (2,875), ಮಲಪ್ಪುರಂ (2,778), ಪಾಲಕ್ಕಾಡ್ (2,212), ಕೊಲ್ಲಂ (1,762), ಕೊಟ್ಟಾಯಂ (1,474), ತಿರುವನಂತಪುರಂ (1,435), ಕಣ್ಣೂರು (1,418), ಆಲಪ್ಪುಳ (1,107) ಮತ್ತು ಪತ್ತನಂತಿಟ್ಟ (1,031) ಪ್ರಕರಣ ದಾಖಲಾಗಿದೆ. ಕೇರಳದ ಓಣಂ ಹಬ್ಬ ಮುಗಿಯುತ್ತಿದ್ದಂತೆ ಮುಂದಿನ ನಾಲ್ಕು ವಾರಗಳು ರಾಜ್ಯಕ್ಕೆ ನಿರ್ಣಾಯಕ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಒಂದು ದಿನ ಮೊದಲೇ ಎಚ್ಚರಿಕೆ ನೀಡಿದ್ದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಶೀಲನಾ ಸಭೆ ನಡೆಸಿದ್ದು ಈ ಹಿಂದೆ ಇದ್ದ ಭಾನುವಾರ ಲಾಕ್‌ಡೌನ್‌ಗಳನ್ನು ಮರಳಿ ತರಲು ನಿರ್ಧರಿಸಲಾಯಿತು. ಲಸಿಕೆ ದರ ಕಡಿಮೆ ಇರುವ ಪ್ರದೇಶಗಳಲ್ಲಿ ಕೊವಿಡ್ -19 ಪರೀಕ್ಷೆಗಳನ್ನು ಹೆಚ್ಚಿಸಲು ಅವರು ಕೇಳಿದರು ಎಂದು ಮಾತೃಭೂಮಿ ವರದಿ ಮಾಡಿದೆ. ವ್ಯಾಕ್ಸಿನೇಷನ್ ದರವನ್ನು ಹೆಚ್ಚಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು. ಸಚಿವೆ ವೀಣಾ ಅವರು ಆರೋಗ್ಯ ಇಲಾಖೆಯ ತುರ್ತು ಸಭೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸೆಪ್ಟೆಂಬರ್ ವೇಳೆಗೆ ಕನಿಷ್ಠ ಮೊದಲ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಆಟಗಾರರಿಗೆ ನಿವೇಶನ ಹಂಚಿಕೆಗೆ ಸಬೂಬು ಹೇಳುವುದು ಸರಿಯಲ್ಲ, ಮೊದಲು ಸೈಟ್​ ನೀಡಿ: ಹೈಕೋರ್ಟ್

ಇದನ್ನೂ ಓದಿ:  ಭಾರತಕ್ಕೆ ಕೊರೊನಾ ಇನ್ನು ಸ್ಥಳೀಯ ಜಾಡ್ಯ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

(India records 37,593 new Covid-19 cases 648 deaths in the last 24 hours as per Heath ministry)

Published On - 10:32 am, Wed, 25 August 21

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್