Coronavirus cases in India: ಭಾರತದಲ್ಲಿ 35,875 ಹೊಸ ಕೊವಿಡ್ ಪ್ರಕರಣ ಪತ್ತೆ, 369 ಮಂದಿ ಸಾವು

Covid-19: ಬುಧವಾರದ ದತ್ತಾಂಶವು 39,114 ಹೆಚ್ಚುವರಿ ಚೇತರಿಕೆಗಳನ್ನು ತೋರಿಸಿದೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳು 32,264,051 ಆಗಿದ್ದು ಒಟ್ಟು ಪ್ರಕರಣದ 97.48 ಶೇಕಡಾ ಆಗಿದೆ. ಈ ಅವಧಿಯಲ್ಲಿ 369 ಜನರು ಸಾವಿಗೀಡಾಗಿದ್ದು, ಒಟ್ಟು ದಾಖಲಾದ ಸಾವುಗಳು 441,411 ಕ್ಕೆ ತಲುಪಿದೆ.

Coronavirus cases in India: ಭಾರತದಲ್ಲಿ 35,875 ಹೊಸ ಕೊವಿಡ್ ಪ್ರಕರಣ ಪತ್ತೆ, 369 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Sep 08, 2021 | 10:44 AM

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 37,875 ಹೊಸ ಕೊವಿಡ್ -19 ಪ್ರಕರಣಗಳನ್ನು ಮತ್ತು 369 ಸಾವು ವರದಿಯಾಗಿದೆ. ಇದರೊಂದಿಗೆ, ದೇಶದ ಕೊವಿಡ್ ಪ್ರಕರಣಗಳ ಸಂಖ್ಯೆ 3.3 ಕೋಟಿಗೆ (3,30,96,718) ತಲುಪಿದೆ., ಆದರೆ ಸಾವಿನ ಸಂಖ್ಯೆ 4.41 ಲಕ್ಷಕ್ಕಿಂತ ಹೆಚ್ಚಾಗಿದೆ (4,41,411). ಏತನ್ಮಧ್ಯೆ, ಇದೇ ಅವಧಿಯಲ್ಲಿ 39,114 ರೋಗಿಗಳು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ, ಸಕ್ರಿಯ ಪ್ರಕರಣಗಳು ಪ್ರಸ್ತುತ ಸುಮಾರು 3.91 ಲಕ್ಷಗಳಷ್ಟಿದೆ (3,91,256). ಕೇರಳದಲ್ಲಿ ನಿನ್ನೆ 25,772 ಪ್ರಕರಣಗಳು ಮತ್ತು 189 ಸಾವುಗಳು ದಾಖಲಾಗಿವೆ.

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮಂಗಳವಾರ ಕೊವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆ ಈಗಾಗಲೇ ಬಂದಿದೆ ಎಂದು ಹೇಳಿ ಕೆಲವು ಗಂಟೆಗಳ ನಂತರ ಸ್ಪಷ್ಟೀಕರಣ ನೀಡಿದ್ದಾರೆ “ಮೂರನೇ ಅಲೆ ಬರುತ್ತಿಲ್ಲ, ಅದು ಈಗಾಗಲೇ ಇಲ್ಲಿದೆ” ಎಂದು ಅವರು ಸಮಾರಂಭವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನಾಗಪುರದಲ್ಲಿ ಮಾತನಾಡಿದ ಅವರು ಇದನ್ನು ಈಗಾಗಲೇ ಘೋಷಿಸಲಾಗಿದೆ ಮತ್ತು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಹೇಳಿದರು. ನಂತರ ಅವರ ಕಚೇರಿಯು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದು ಕೊವಿಡ್ -19 ರ ಮೂರನೇ ಅಲೆ “ಮುಂಬೈನ ಹೊಸ್ತಿಲಲ್ಲಿದೆ” ಎಂದು ಹೇಳಿತು.


ಏತನ್ಮಧ್ಯೆ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ಭಾನುವಾರ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ. ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಭಾನುವಾರ ಲಾಕ್‌ಡೌನ್ ಮತ್ತು ರಾತ್ರಿ ಕರ್ಫ್ಯೂ ಹಿಂಪಡೆಯುವ ನಿರ್ಧಾರವನ್ನು ಕೊವಿಡ್ ಪರಿಶೀಲನಾ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ಕೊವಿಡ್ -19 ಪ್ರಕರಣಗಳ ಕುರಿತು ಆರೋಗ್ಯ ಸಚಿವಾಲಯ,ಲಸಿಕೆ ಶಿಬಿರಗಳು ಯಶಸ್ವಿಯಾಗಿವೆ
ಕಳೆದ 24 ಗಂಟೆಗಳಲ್ಲಿ ಭಾರತವು 37,875 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 39,114 ಚೇತರಿಕೆ ಮತ್ತು ಸಾವಿನ ಸಂಖ್ಯೆ 369 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಒಟ್ಟು ಕೊವಿಡ್ -19 ಸಂಖ್ಯೆಯನ್ನು 3,30,96,718 ಮತ್ತು ಸಾವಿನ ಸಂಖ್ಯೆ 4,41,411 ಕ್ಕೆ ಏರಿಸಿದೆ .


ಬುಧವಾರದ ದತ್ತಾಂಶವು 39,114 ಹೆಚ್ಚುವರಿ ಚೇತರಿಕೆಗಳನ್ನು ತೋರಿಸಿದೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳು 32,264,051 ಆಗಿದ್ದು ಒಟ್ಟು ಪ್ರಕರಣದ 97.48 ಶೇಕಡಾ ಆಗಿದೆ. ಈ ಅವಧಿಯಲ್ಲಿ 369 ಜನರು ಸಾವಿಗೀಡಾಗಿದ್ದು, ಒಟ್ಟು ದಾಖಲಾದ ಸಾವುಗಳು 441,411 ಕ್ಕೆ ತಲುಪಿದೆ. ಇದು ಒಟ್ಟು ಪ್ರಕರಣದ ಶೇಕಡಾ 1.33 ರಷ್ಟಿದೆ. ಸಕ್ರಿಯ ರೋಗಿಗಳ ಸಂಖ್ಯೆ ಸತತ ಎರಡನೇ ದಿನಕ್ಕೆ 400,000 ಕ್ಕಿಂತ ಕಡಿಮೆ ಆಗಿದೆ.

ಸೆಪ್ಟೆಂಬರ್ 7 ರಂದು ಪರೀಕ್ಷಿಸಿದ 1,753,745 ಮಾದರಿಗಳಲ್ಲಿ 31,222 ಧನಾತ್ಮಕ ಫಲಿತಾಂಶವನ್ನು ನೀಡಿದ್ದರಿಂದ ದೈನಂದಿನ ಪಾಸಿಟಿವಿಟಿ ದರ ಶೇ 2.16% ಆಗಿದೆ. ಕಳೆದ ಒಂಬತ್ತು ದಿನಗಳಿಂದ, ದಿನನಿತ್ಯದ ಧನಾತ್ಮಕ ದರವು ಶೇಕಡಾ 3 ಕ್ಕಿಂತ ಕಡಿಮೆ ಇದೆ.

ರಾಷ್ಟ್ರೀಯ ವ್ಯಾಕ್ಸಿನೇಷನ್ ವ್ಯಾಪ್ತಿಯು 700 ಮಿಲಿಯನ್ ಗಡಿಯನ್ನು ದಾಟಿದೆ,ಕಳೆದ 24 ಗಂಟೆಗಳಲ್ಲಿ ಭಾರತವು 70,75,43,018 ಲಸಿಕೆಗಳನ್ನು ಯಶಸ್ವಿಯಾಗಿ ನೀಡಿದೆ.

ಇದನ್ನೂ ಓದಿ: ಕೇರಳದಲ್ಲಿ 25,772 ಹೊಸ ಕೊವಿಡ್ ಪ್ರಕರಣ ಪತ್ತೆ; ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್​​ಡೌನ್ ಇರಲ್ಲ: ಪಿಣರಾಯಿ ವಿಜಯನ್

ಇದನ್ನೂ ಓದಿ: Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

(India reports 37,875 new Covid-19 cases and 369 deaths in last 24 hours as per health ministry data)