ಸಮುದ್ರದಲ್ಲಿ ನೌಕಾಪಡೆ ಶಕ್ತಿ ಹೆಚ್ಚಿಸಲು ಫ್ರಾನ್ಸ್‌ನಿಂದ 26 ರಫೇಲ್ ವಿಮಾನ ಖರೀದಿಸಲಿದೆ ಭಾರತ

ಭಾರತ ಈ ಮೂಲಕ ಸಮುದ್ರದಲ್ಲಿ ತನ್ನ ಭದ್ರತಾ ಶಕ್ತಿಯನ್ನು ಹೆಚ್ಚಿಸಲಿದೆ. ಭಾರತೀಯ ನೌಕಾಪಡೆಗೆ ಹೆಚ್ಚುವರಿಯಾಗಿ 26 ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಈಗಾಗಲೇ ಭಾರತ ಫ್ರಾನ್ಸ್​​​ ಜತೆಗೆ 26 ರಫೇಲ್ ಯುದ್ಧ ವಿಮಾನ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ರಫೇಲ್ ಒಪ್ಪಂದಕ್ಕೆ ಜುಲೈನಲ್ಲಿ ಭಾರತ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು. ಈ ಒಪ್ಪಂದದ ಮೂಲಕ ರಫೇಲ್ ಯುದ್ಧ ವಿಮಾನಗಳು ಭಾರತೀಯ ನೌಕಾಪಡೆಯ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಹೇಳಿದೆ.

ಸಮುದ್ರದಲ್ಲಿ ನೌಕಾಪಡೆ ಶಕ್ತಿ ಹೆಚ್ಚಿಸಲು ಫ್ರಾನ್ಸ್‌ನಿಂದ 26 ರಫೇಲ್ ವಿಮಾನ ಖರೀದಿಸಲಿದೆ ಭಾರತ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 28, 2023 | 1:25 PM

ಭಾರತದ ಮತ್ತು ಫ್ರಾನ್ಸ್​​​ ಆತ್ಮೀಯ ಸ್ನೇಹವನ್ನು ಹೊಂದಿರುವ ರಾಷ್ಟ್ರಗಳು, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಮುದಾಯವಾಗಿ, ಉತ್ತಮ ಸಂಬಂಧವನ್ನು ಹೊಂದಿದೆ. ಇದಕ್ಕಿಂತ ಹೆಚ್ಚಾಗಿ ಸೇನೆಯಲ್ಲಿ ಅತ್ಯುತ್ತಮ ಸ್ನೇಹವನ್ನು ಹೊಂದಿದೆ. ಭದ್ರತೆ ವ್ಯವಸ್ಥೆಯಲ್ಲಿ ಫ್ರಾನ್ಸ್​​​ ಮತ್ತು ಭಾರತ ಒಪ್ಪಂದನ್ನು ಕೂಡ ಮಾಡಿಕೊಂಡಿದೆ. ಇದೀಗ ಭಾರತ ಈ ಮೂಲಕ ಸಮುದ್ರದಲ್ಲಿ ತನ್ನ ಭದ್ರತಾ ಶಕ್ತಿಯನ್ನು ಹೆಚ್ಚಿಸಲಿದೆ. ಭಾರತೀಯ ನೌಕಾಪಡೆಗೆ ಹೆಚ್ಚುವರಿಯಾಗಿ 26 ರಫೇಲ್ ಯುದ್ಧ ವಿಮಾನಗಳು (Rafale Marine aircraft) ಸೇರ್ಪಡೆಯಾಗಲಿವೆ. ಈಗಾಗಲೇ ಭಾರತ ಫ್ರಾನ್ಸ್​​​ ಜತೆಗೆ 26 ರಫೇಲ್ ಯುದ್ಧ ವಿಮಾನ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ರಫೇಲ್ ಒಪ್ಪಂದಕ್ಕೆ ಜುಲೈನಲ್ಲಿ ಭಾರತ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು. ಈ ಒಪ್ಪಂದದ ಮೂಲಕ ರಫೇಲ್ ಯುದ್ಧ ವಿಮಾನಗಳು ಭಾರತೀಯ ನೌಕಾಪಡೆಯ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಹೇಳಿದೆ.

ಇನ್ನು ಈ ರಫೇಲ್​​​ ಖರೀದಿಯ ನಿರ್ಧಾರದ ಬಗ್ಗೆ ಕೇಂದ್ರ ರಕ್ಷಣಾ ಸಚಿವಾಲಯ ಫ್ರಾನ್ಸ್​​ ಸರ್ಕಾರಕ್ಕೆ ತಿಳಿಸಿದೆ. ಭಾರತೀಯ ನೌಕಪಡೆ ಮತ್ತು ಭಾರತ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿ, ಅದಷ್ಟು ಬೇಗ ಸ್ವೀಕರಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್​​​ ಸಿಂಗ್ ಇತ್ತಿಚೇಗೆ ಪ್ಯಾರಿಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಫೇಲ್ ನೌಕಾಪಡೆಯ ವಿಮಾನ ಖರೀದಿ ವಿಚಾರ ಪ್ರಸ್ತಾಪಿಸಿದ್ದರು. ಈ 26 ವಿಮಾನಗಳನ್ನು ಭಾರತೀಯ ನೌಕಾಪಡೆಗೆ ಸೇರಿಸಿದ ನಂತರ, ಸಮುದ್ರದಲ್ಲಿ ನಮ್ಮ ಶಕ್ತಿ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಇನ್ನು ಫ್ರಾನ್ಸ್​​​​ ಈ ಬಗ್ಗೆ ಖಚಿತಪಡಿಸಿದ ನಂತರ ಅದರ ವೆಚ್ಚ ಮತ್ತು ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಈ ಒಪ್ಪಂದ ಪ್ರಕಾರ ಭಾರತೀಯ ನೌಕಾಪಡೆಯು ನಾಲ್ಕು ತರಬೇತುದಾರ ವಿಮಾನಗಳೊಂದಿಗೆ 22 ಏಕ-ಆಸನದ ರಫೇಲ್ ಸಾಗರ ವಿಮಾನಗಳನ್ನು ಪಡೆಯಲಿದೆ. ಈಗಾಗಲೇ ವಿಮಾನವಾಹಕ ನೌಕೆಗಳು INS ವಿಕ್ರಮಾದಿತ್ಯ ಮತ್ತು ವಿಕ್ರಾಂತ್ MiG-29ನ್ನು ನಿರ್ವಹಿಸುತ್ತವೆ. ಆದರೆ ಇನ್ನೂ ಎರಡೂ ವಾಹಕಗಳ ಕಾರ್ಯಾಚರಣೆಗೆ ರಫೇಲ್ ಅಗತ್ಯವಿದೆ. ಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಗೆ ಮುನ್ನ ರಕ್ಷಣಾ ಸ್ವಾಧೀನ ಮಂಡಳಿಯು ಸುಮಾರು 5.5 ಶತಕೋಟಿ ಯುರೋ ಮೌಲ್ಯದ ವಿಮಾನ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ