
ನವದೆಹಲಿ, ಮೇ 17: ಆಪರೇಷನ್ ಸಿಂಧೂರವನ್ನು ಆರಂಭಿಸಿದಾಗಲೇ ಪಾಕಿಸ್ತಾನಕ್ಕೆ (Pakistan) ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ನಾವು ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತೇವೆಯೇ ವಿನಃ ಪಾಕಿಸ್ತಾನದ ಸೇನಾ ಶಿಬಿರಗಳ ಮೇಲಾಗಲಿ, ವಾಯುನೆಲೆಗಳ ಮೇಲಾಗಲಿ ದಾಳಿ ನಡೆಸುವುದಿಲ್ಲ ಎಂದು ಅವರಿಗೆ ತಿಳಿಸಿದ್ದೆವು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಹೇಳಿದ್ದರು. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ದಾಳಿಯ ಆರಂಭದಲ್ಲೇ ಪಾಕಿಸ್ತಾನಕ್ಕೆ ಎಚ್ಚರಿಸಿದ್ದು ದೊಡ್ಡ ಅಪರಾಧ. ಈ ಆದೇಶ ನೀಡಿದ್ದು ಯಾರು? ಇದರಿಂದ ನಮ್ಮ ವಾಯುಪಡೆಯ ಎಷ್ಟು ವಿಮಾನಗಳು ನಾಶವಾದವು? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ ನಾವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವಾಗ ಆಪರೇಷನ್ ಸಿಂಧೂರ ಶುರುವಾಗಿತ್ತು. ದಾಳಿ ಆರಂಭಿಸುವುದಕ್ಕೂ ಮೊದಲೇ ನಾವು ಎಚ್ಚರಿಕೆ ನೀಡಿಲ್ಲ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಆಪರೇಷನ್ ಸಿಂಧೂರ್ ಆರಂಭಗೊಂಡ ನಂತರದ ಹಂತದಲ್ಲಿ ಪಾಕಿಸ್ತಾನಕ್ಕೆ ನಾವು ಮಾಹಿತಿ ನೀಡಿದ್ದೆವು ಎಂದು ಸಚಿವ ಜೈಶಂಕರ್ ಹೇಳಿದ್ದು. ಅದನ್ನು ರಾಹುಲ್ ಗಾಂಧಿ ತಪ್ಪಾಗಿ ಬಿಂಬಿಸುತ್ತಿದ್ದಾರೆ. ತ್ಯಗಳ ಈ ಸಂಪೂರ್ಣ ತಪ್ಪು ನಿರೂಪಣೆಯನ್ನು ಬಹಿರಂಗಗೊಳಿಸಲಾಗುತ್ತಿದೆ” ಎಂದು ಹೇಳಿದೆ.
EAM Dr S Jaishankar had stated that we had warned Pakistan at the start, which is clearly the early phase after Operation Sindoor’s commencement. This is being falsely represented as being before the commencement. This utter misrepresentation of facts is being called out: XP… pic.twitter.com/RqLMc9qfGC
— ANI (@ANI) May 17, 2025
ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕಿಸ್ತಾನದೊಳಗೆ 100 ಕಿಮೀ ದೂರದವರೆಗೆ ಉಗ್ರರ ಶಿಬಿರಗಳ ಧ್ವಂಸ; ಆಪರೇಷನ್ ಸಿಂಧೂರ್ ಬಗ್ಗೆ ಅಮಿತ್ ಶಾ
ಮೇ 11ರಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಘಾಯ್ ಮತ್ತು ನೌಕಾಪಡೆಯ ಪ್ರತಿರೂಪ ವೈಸ್ ಅಡ್ಮಿರಲ್ ಎ ಎನ್ ಪ್ರಮೋದ್ ಅವರೊಂದಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ, ವಾಯು ಕಾರ್ಯಾಚರಣೆಯ ಮಹಾನಿರ್ದೇಶಕ ಏರ್ ಮಾರ್ಷಲ್ ಎ ಕೆ ಭಾರ್ತಿ ಅವರು, ಚಾಲ್ತಿಯಲ್ಲಿರುವ ಯುದ್ಧ ಪರಿಸ್ಥಿತಿಯಿಂದಾಗಿ ಭಾರತವು ಆಪರೇಷನ್ ಸಿಂಧೂರ್‌ನಲ್ಲಿ ಯಾವುದಾದರೂ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ನಷ್ಟಗಳು ಯುದ್ಧದ ಭಾಗವಾಗಿರುತ್ತದೆ. ಭಾರತೀಯ ಸೇನೆಯು ತನ್ನ ಎಲ್ಲಾ ಗುರಿಗಳನನ್ನು ಸಾಧಿಸಿದೆ. ಎಲ್ಲಾ IAF ಪೈಲಟ್‌ಗಳು ಮನೆಗೆ ಮರಳಿದ್ದಾರೆ ಎಂದು ಅವರು ಹೇಳಿದ್ದರು.
Informing Pakistan at the start of our attack was a crime.
EAM has publicly admitted that GOI did it.
1. Who authorised it?
2. How many aircraft did our airforce lose as a result? pic.twitter.com/KmawLLf4yW— Rahul Gandhi (@RahulGandhi) May 17, 2025
ಇದನ್ನೂ ಓದಿ: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರದ ವಿಷಯ ತಿಳಿಸಿದ್ದು ಅಪರಾಧ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಆಪರೇಷನ್ ಸಿಂಧೂರ:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ 26 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿತು. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ದಾಳಿಯೇ ಆಪರೇಷನ್ ಸಿಂಧೂರ್. ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದವು. ಅದರ ನಂತರ ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಡ್ರೋನ್ ದಾಳಿಗಳನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿತು. 26 ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ 10ರಂದು 8 ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ