ಪೂಂಚ್​​ನಲ್ಲಿ 12ನೇ ದಿನಕ್ಕೆ ಕಾಲಿಟ್ಟ ಉಗ್ರರ ವಿರುದ್ಧದ ಕಾರ್ಯಾಚರಣೆ; ಸೇನೆಯಿಂದ ಗುಂಡಿನ ದಾಳಿ

| Updated By: Lakshmi Hegde

Updated on: Oct 22, 2021 | 11:46 AM

ಪೂಂಚ್​ನ ದಟ್ಟಾರಣ್ಯದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನಚಕಮಕಿ, ಫೈಟಿಂಗ್​ ತುಂಬ ತೀವ್ರತರನಾಗಿದೆ. ಹಾಗಂತ ಸೇನಾ ಪಡೆಗಳು ಇನ್ನೂ ಮೃತರಾದ ಉಗ್ರರ ಸಂಖ್ಯೆಯನ್ನು ನಿಖರವಾಗಿ ಬಹಿರಂಗಪಡಿಸಿಲ್ಲ.

ಪೂಂಚ್​​ನಲ್ಲಿ 12ನೇ ದಿನಕ್ಕೆ ಕಾಲಿಟ್ಟ ಉಗ್ರರ ವಿರುದ್ಧದ ಕಾರ್ಯಾಚರಣೆ; ಸೇನೆಯಿಂದ ಗುಂಡಿನ ದಾಳಿ
ಉಗ್ರರು ಅಡಗಿರುವ ಕಾಡನ್ನು ಸುತ್ತುವರಿದ ಸೈನಿಕರು (ಪಿಟಿಐ ಚಿತ್ರ)
Follow us on

ಜಮ್ಮು-ಕಾಶ್ಮೀರದ ಪೂಂಚ್ (J&K’s Poonch)​​ನ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ವಿಪರೀತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಕಳೆದ 12 ದಿನಗಳಿಂದಲೂ ಈ ಭಾಗದಲ್ಲಿ ಉಗ್ರರು ಅಡಗಿದ್ದು, ಅವರನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇತ್ತೀಚಿನ ದಿನಗಳಲ್ಲೇ ಇದು ಅತ್ಯಂತ ಹೆಚ್ಚು ಕಾಲ ನಡೆಯುತ್ತಿರುವ ಉಗ್ರರ ವಿರುದ್ಧದ ಎನ್​ಕೌಂಟರ್​ ಆಗಿದೆ. ದಟ್ಟಾರಣ್ಯದಲ್ಲಿ ಅಡಗಿರುವ ಉಗ್ರರು ಒಂದೇ ಸಮ ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ.  ಈಗಾಗಲೇ ಏಳು ಯೋಧರು ಮತ್ತು ಇಬ್ಬರು ಅಧಿಕಾರಿಗಳು ಉಗ್ರರ ದಾಳಿಯಿಂದ ಮೃತಪಟ್ಟಿದ್ದಾರೆ. 

ಉಗ್ರರು ಮತ್ತು ಸೇನೆ ನಡುವೆ ದಾಳಿ-ಪ್ರತಿದಾಳಿ ಶುರುವಾಗಿಯೇ 11 ದಿನ ಕಳೆದು, ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್​ 10ರಂದು ರಾತ್ರಿ ಕಿರಿಯ ನಿಯೋಜಿತ ಅಧಿಕಾರಿ (JCO) ಸೇರಿ 5 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಪೂಂಚ್​​ನ ದೇರಾ ವಾಲಿ ಗಲಿ ಪ್ರದೇಶದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಭಾರತೀಯ ಸೇನೆ ಕೂಡ ಭದ್ರತೆಯನ್ನು ಹೆಚ್ಚಿಸಿದ್ದು, ಈಗಾಗಲೇ ಸೈನಿಕರು ಅರಣ್ಯವನ್ನು ಸುತ್ತುವರಿದು ದಾಳಿ ಮಾಡುತ್ತಿದ್ದಾರೆ.

ಪೂಂಚ್​ನ ದಟ್ಟಾರಣ್ಯದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನಚಕಮಕಿ, ಫೈಟಿಂಗ್​ ತುಂಬ ತೀವ್ರತರನಾಗಿದೆ. ಹಾಗಂತ ಸೇನಾ ಪಡೆಗಳು ಇನ್ನೂ ಮೃತರಾದ ಉಗ್ರರ ಸಂಖ್ಯೆಯನ್ನು ನಿಖರವಾಗಿ ಬಹಿರಂಗಪಡಿಸಿಲ್ಲ. ಒಮ್ಮೆ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿದ ಬಳಿಕವೇ ಸೇನೆ ಸಂಪೂರ್ಣ ವಿವರ ಬಹಿರಂಗಪಡಿಸಲಿದೆ ಎಂದು ಹೇಳಲಾಗಿದೆ. ಇನ್ನು ಅರಣ್ಯದಲ್ಲಿ ಅಡಗಿರುವ ಉಗ್ರರು ಪಾಕಿಸ್ತಾನದ ಕಮಾಂಡೋಗಳಿಂದ ತರಬೇತಿ ಪಡೆದಿದ್ದಾರೆ ಎಂಬುದು ಅವರು ಹೋರಾಡುತ್ತಿರುವ ಮಾದರಿಯಲ್ಲೇ ಗೊತ್ತಾಗುತ್ತದೆ ಎಂದು ಸೇನಾಮೂಲಗಳು ತಿಳಿಸಿದ್ದಾಗಿ ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: FATF: ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ, ಎಫ್ಎಟಿಎಫ್‌ನ ಗ್ರೇ ಲಿಸ್ಟ್​ನಲ್ಲಿ ಪಾಕ್ ಮುಂದುವರಿಕೆ

PM Modi Speech: ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆಗೆ 100 ಕೋಟಿ ಲಸಿಕೆ ನೀಡಿಕೆ ಉತ್ತರ ನೀಡಿದೆ; ಪ್ರಧಾನಿ ಮೋದಿ