ಸಾಮಾನ್ಯ ಇಂಟರ್ನೆಟ್​ ಬಳಕೆದಾರರಿಗಿಂತಲೂ ಭಾರತೀಯ ಭಾಷೆಗಳ ಸುದ್ದಿ ಬಳಕೆದಾರಿಗೇ ಹೆಚ್ಚು ಮೌಲ್ಯ; ವರದಿ

ಸಾಮಾನ್ಯ ಇಂಟರ್ನೆಟ್​ ಬಳಕೆದಾರರಿಗಿಂತಲೂ ಭಾರತೀಯ ಭಾಷೆಗಳ ಸುದ್ದಿಯ ಬಳಕೆದಾರಿಗೇ ಹೆಚ್ಚು ಮೌಲ್ಯ ಇದೆ ಎಂದು ಪ್ರಕಾಶಕರು, ಜಾಹೀರಾತುದಾರರು ಭಾವಿಸಿರುವುದಾಗಿ ಕ್ಯಾಂಟರ್​ ದತ್ತಾಂಶ ವಿಶ್ಲೇಷಣಾ ಸಂಸ್ಥೆಯ ಸಂಶೋಧನಾ ವರದಿಯಿಂದ ತಿಳಿದುಬಂದಿದೆ ಎಂದು ಗೂಗಲ್ ನ್ಯೂಸ್ ಗುರುವಾರ ತಿಳಿಸಿದೆ.

ಸಾಮಾನ್ಯ ಇಂಟರ್ನೆಟ್​ ಬಳಕೆದಾರರಿಗಿಂತಲೂ ಭಾರತೀಯ ಭಾಷೆಗಳ ಸುದ್ದಿ ಬಳಕೆದಾರಿಗೇ ಹೆಚ್ಚು ಮೌಲ್ಯ; ವರದಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 04, 2023 | 10:35 PM

ನವದೆಹಲಿ: ಸಾಮಾನ್ಯ ಇಂಟರ್ನೆಟ್​ ಬಳಕೆದಾರರಿಗಿಂತಲೂ ಭಾರತೀಯ ಭಾಷೆಗಳ (Indian language) ಸುದ್ದಿಯ ಬಳಕೆದಾರಿಗೇ ಹೆಚ್ಚು ಮೌಲ್ಯ ಇದೆ ಎಂದು ಪ್ರಕಾಶಕರು, ಜಾಹೀರಾತುದಾರರು ಭಾವಿಸಿರುವುದಾಗಿ ಕ್ಯಾಂಟರ್​ (Kantar) ದತ್ತಾಂಶ ವಿಶ್ಲೇಷಣಾ ಸಂಸ್ಥೆಯ ಸಂಶೋಧನಾ ವರದಿಯಿಂದ ತಿಳಿದುಬಂದಿದೆ ಎಂದು ಗೂಗಲ್ ನ್ಯೂಸ್ ಗುರುವಾರ ತಿಳಿಸಿದೆ. ಭಾರತೀಯ ಭಾಷೆಗಳು – ಭಾರತದ ಡಿಜಿಟಲ್ ಸುದ್ದಿ ಗ್ರಾಹಕರನ್ನು ಅರ್ಥಮಾಡಿಕೊಳ್ಳುವುದು, ಭಾರತದಲ್ಲಿ ಪ್ರಾದೇಶಿಕ ಭಾಷೆ ಸಂಬಂಧಿತ ಆನ್‌ಲೈನ್ ಸುದ್ದಿ ಗ್ರಾಹಕರ ವಿಭಿನ್ನ ಸುದ್ದಿ ವಿಷಯ ಬಳಕೆಯ ಆದ್ಯತೆಗಳು ಮತ್ತು ನಡವಳಿಕೆಗಳ ಮೇಲೆ ಸಂಶೋಧನೆ ನಡೆಸಲಾಗಿದೆ.

ಮೌಲ್ಯಯುತ ಗ್ರಾಹಕರನ್ನು ಪತ್ತೆಹಚ್ಚಿ ಅವರಿಗೆ ಪೂರಕವಾದ ಆಫರ್​ಗಳನ್ನು ನೀಡಲು ಪ್ರಕಾಶಕರು ಮತ್ತು ಜಾಹೀರಾತುದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ಸಂಶೋಧನೆ ಮಾಡಲಾಗಿದೆ ಎಂದು ಗೂಗಲ್ ನ್ಯೂಸ್ ತಿಳಿಸಿದೆ.

ಈ ವರದಿ ಸಿದ್ಧಪಡಿಸುವುದಕ್ಕಾಗಿ 2022 ರ ನವೆಂಬರ್​ನಿಂದ 2023 ರ ಮಾರ್ಚ್ ವರೆಗೆ 14 ರಾಜ್ಯಗಳಾದ್ಯಂತ 43 ಮಹಾ ನಗರಗಳಲ್ಲಿ, 16 ನಗರಗಳಲ್ಲಿ 64 ಕ್ಕೂ ಹೆಚ್ಚು ಚರ್ಚೆಗಳನ್ನು ಮತ್ತು 4600 ಕ್ಕೂ ಹೆಚ್ಚು ವೈಯಕ್ತಿಕ ಸಂದರ್ಶನಗಳನ್ನು ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಕನ್ನಡ ಸೇರಿ 8 ಭಾಷೆಗಳ ಮೇಲೆ ಸಂಶೋಧನೆ

ಕನ್ನಡ, ಬಂಗಾಳಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳನ್ನು ಒಳಗೊಂಡಂತೆ ಸಂಶೋಧನೆ ನಡೆಸಲಾಗಿದ್ದು, 15 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಮತ್ತು ಸ್ತ್ರೀಯರನ್ನು ಆಯ್ದುಕೊಳ್ಳಲಾಗಿತ್ತು. ಇವರ ಮೂಲಕ ಡಿಜಿಟಲ್ ಸುದ್ದಿ ಗ್ರಾಹಕರ ಒಳನೋಟಗಳನ್ನು ತಿಳಿಯಲು ಪ್ರಯತ್ನಿಸಲಾಗಿತ್ತು.

ಇಂಗ್ಲಿಷ್ ಭಾಷೆಯ ಸುದ್ದಿ ಗ್ರಾಹಕರಿಗೆ ಹೋಲಿಸಿದರೆ ಭಾರತೀಯ ಭಾಷೆಯ ಸುದ್ದಿ ಗ್ರಾಹಕರು ಸಾಂಪ್ರದಾಯಿಕವಾಗಿ ಯಾವಾಗಲೂ ಕಡಿಮೆ ಶ್ರೀಮಂತರು ಮತ್ತು ಸಂಕೀರ್ಣ ವಿಷಯಗಳ ಬಗ್ಗೆ ಕಡಿಮೆ ಆಸಕ್ತಿ ಹೊಂದಿರುತ್ತಾರೆ. ಈ ಅಧ್ಯಯನವು ಈವರೆಗಿನ ನಂಬಿಕೆಗಳನ್ನು ಅಲ್ಲಗಳೆದಿದ್ದು, ಭಾಷಾ ಸುದ್ದಿ ಗ್ರಾಹಕರು ಕೂಡ ಹೊಸತನಕ್ಕೆ ತೆರೆದುಕೊಂಡಿದ್ದಾರೆ. ಡಿಜಿಟಲ್ ಪಾವತಿ ಮಾಡುವ ಇಚ್ಛೆಯನ್ನೂ ಪ್ರದರ್ಶಿಸಿದ್ದಾರೆ. ಇದು ಪ್ರಕಾಶಕರು ಮತ್ತು ಜಾಹೀರಾತುದಾರರಿಗೆ ಅಗಾಧ ಅವಕಾಶವನ್ನು ಸೃಷ್ಟಿಸಬಹುದು ಎಂದು ಕ್ಯಾಂಟರ್​​, ಬಿ2ಬಿ ಆ್ಯಂಡ್ ಟೆಕ್ನಾಲಜಿಯ ನಿರ್ದೇಶಕ ಬಿಶ್ವಪ್ರಿಯ ಭಟ್ಟಾಚಾರ್ಯ ಹೇಳಿದ್ದಾರೆ.

ಅನೇಕ ಭಾರತೀಯ ಭಾಷೆಗಳಿಗೆ ಕಂಟೆಂಟ್​​ಗಳನ್ನು ಅನುವಾದಿಸಬಹುದಾದ ಈ ಜಗತ್ತಿನಲ್ಲಿ, ಭೌಗೋಳಿಕತೆಯಿಂದ ನಿರ್ಬಂಧಿತವಲ್ಲದ ಭಾರತೀಯ ಭಾಷೆಗಳ ಕಂಟೆಂಟ್​​​ಗಳೊಂದಿಗೆ ಅವಕಾಶವು ವಿಸ್ತಾರಗೊಂಡಿದೆ. ಡಿಜಿಟಲ್ ಸುದ್ದಿ ಪ್ರಕಾಶಕರು ಸೇರಿದಂತೆ ಕಂಟೆಂಟ್ ವ್ಯವಹಾರಗಳು ಭಾರತೀಯ ಭಾಷೆಯ ಡಿಜಿಟಲ್ ಸುದ್ದಿ ಗ್ರಾಹಕರ ಸಮೂಹದೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳುವ ಮೂಲಕ ಹೊಸ ಬೆಳವಣಿಗೆಯ ಮಾರ್ಗಗಳನ್ನು ತೆರೆಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗೂಗಲ್ ಇಂಡಿಯಾದ ಉಪಾಧ್ಯಕ್ಷ ಸಂಜಯ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Google: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್

ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ನ್ಯೂಸ್ ಲ್ಯಾಂಡ್‌ಸ್ಕೇಪ್‌ನಲ್ಲಿ ಬದಲಾವಣೆಗಳು ಮುಂದುವರಿದಂತೆ, ಅಂತರ್ಜಾಲದಲ್ಲಿ ಬಳಕೆಗೆ ಅಗಾಧ ಆಯ್ಕೆಯಾಗಿ ಪ್ರಾದೇಶಿಕ ಭಾಷೆಯ ಕಂಟೆಂಟ್​​ ಹೊರಹೊಮ್ಮುತ್ತಿದೆ. ಗೂಗಲ್​​ನಲ್ಲಿ, ಹೂಡಿಕೆ, ಕೌಶಲಾಭಿವೃದ್ಧಿ ಮತ್ತು ಒಳನೋಟಗಳ ಮೂಲಕ ಡಿಜಿಟಲ್‌ಗೆ ಈ ಬದಲಾವಣೆಯನ್ನು ಸುಲಭಗೊಳಿಸಲು ಉದ್ಯಮದೊಂದಿಗೆ ಆಳವಾಗಿ ಸಹಭಾಗಿತ್ವ ಹೊಂದಲು ನಾವು ಬದ್ಧರಾಗಿದ್ದೇವೆ ಎಂದು ಗೂಗಲ್​​ನ ಇಂಡಿಯಾ ನ್ಯೂಸ್ ಪಾರ್ಟನರ್​ಶಿಪ್​​ನ ಮುಖ್ಯಸ್ಥ ದುರ್ಗಾ ರಘುನಾಥ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 pm, Thu, 4 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್