ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ರೈಲು ಹಳಿಗಳ ಸುರಕ್ಷತೆಗಾಗಿ 18 ಸಾವಿರ ಲೊಕೊ ಪೈಲಟ್ ನೇಮಕಾತಿ ಮಾಡಲಿದೆ ರೈಲ್ವೆ

ರೈಲ್ವೆ ಇಲಾಖೆಯು 18,000 ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದರೂ, ಈ ವರ್ಷದ ಮಾರ್ಚ್‌ವರೆಗೆ ಸುರಕ್ಷತಾ ವಿಭಾಗದ ಅಡಿಯಲ್ಲಿ ಮಂಜೂರಾದ 10 ಲಕ್ಷ ಹುದ್ದೆಗಳಲ್ಲಿ ಇಲಾಖೆಯು 1.5 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಹೊಂದಿದೆ ಎಂದು ಸಚಿವಾಲಯ ಆರ್‌ಟಿಐ ಉತ್ತರದಲ್ಲಿ ಬಹಿರಂಗಪಡಿಸಿದೆ.

ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ರೈಲು ಹಳಿಗಳ ಸುರಕ್ಷತೆಗಾಗಿ 18 ಸಾವಿರ ಲೊಕೊ ಪೈಲಟ್ ನೇಮಕಾತಿ ಮಾಡಲಿದೆ ರೈಲ್ವೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Jun 19, 2024 | 4:26 PM

ದೆಹಲಿ ಜೂನ್ 19: ಪಶ್ಚಿಮ ಬಂಗಾಳದ (West Bengal) ಕಾಂಚನಜುಂಗಾ ಎಕ್ಸ್‌ಪ್ರೆಸ್ (Kanchanjunga Express) 10 ಜನರನ್ನು ಬಲಿತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದಲ್ಲಿ ಅಪಘಾತಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೇಯು 18,000 ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್‌ಗಳನ್ನು (Assistant loco pilots) ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ರೈಲ್ವೆ ಮಂಡಳಿಯು ಜನರಲ್ ಮ್ಯಾನೇಜರ್‌ಗಳಿಗೆ ಸುತ್ತೋಲೆ ಹೊರಡಿಸಿದ್ದು, ವಲಯಗಳಾದ್ಯಂತ 18,799 ಸಹಾಯಕ ಲೋಕೋ ಪೈಲಟ್‌ಗಳನ್ನು (ಎಎಲ್‌ಪಿ) ನೇಮಿಸಿಕೊಳ್ಳಲು ನಿರ್ದೇಶಿಸಿದೆ. ಅಂದರೆ ಈಗಿರುವ ಹುದ್ದೆಗಳಿಗಿಂತ 5,696 ಹುದ್ದೆಗಳನ್ನು ಹೆಚ್ಚಿಸಿದೆ. ಹುದ್ದೆಗಳ ಅಧಿಸೂಚನೆ ಮತ್ತು ಅಭ್ಯರ್ಥಿಗಳು ಲಿಖಿತ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವ ಅಗತ್ಯತೆಯಿಂದಾಗಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕನಿಷ್ಠ ಆರು ತಿಂಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಈ ನಿರ್ಧಾರದ ಅನುಷ್ಠಾನವನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು.

1.5 ಲಕ್ಷ ಸುರಕ್ಷತಾ ವರ್ಗದ ಹುದ್ದೆಗಳು ಇನ್ನೂ ಖಾಲಿ ಇವೆ

ರೈಲ್ವೆ ಇಲಾಖೆಯು 18,000 ಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್‌ಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದರೂ, ಈ ವರ್ಷದ ಮಾರ್ಚ್‌ವರೆಗೆ ಸುರಕ್ಷತಾ ವಿಭಾಗದ ಅಡಿಯಲ್ಲಿ ಮಂಜೂರಾದ 10 ಲಕ್ಷ ಹುದ್ದೆಗಳಲ್ಲಿ ಇಲಾಖೆಯು 1.5 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಹೊಂದಿದೆ ಎಂದು ಸಚಿವಾಲಯ ಆರ್‌ಟಿಐ ಉತ್ತರದಲ್ಲಿ ಬಹಿರಂಗಪಡಿಸಿದೆ.

ರೈಲುಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಅಗ್ರ ಗಣ್ಯ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ರೈಲ್ವೆಯು ಈ ನಿಟ್ಟಿನಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದೆ. ಜೊತೆಗೆ ಹಲವಾರು ರಚನಾತ್ಮಕ ಮತ್ತು ವ್ಯವಸ್ಥಿತ ವರ್ಧನೆಗಳನ್ನು ಕಾರ್ಯಗತಗೊಳಿಸುವುದರ ಜೊತೆಗೆ ಸುರಕ್ಷಿತ ಕಾರ್ಯಾಚರಣೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ.

ಸುರಕ್ಷತೆ-ಸಂಬಂಧಿತ ಪೋಸ್ಟ್‌ಗಳು ರೈಲು ಚಾಲಕರು, ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ನಿಯಂತ್ರಕರು, ಲೋಕೋ ಇನ್ ಸ್ಟ್ರಕ್ಟರ್, ರೈಲು ನಿಯಂತ್ರಕರು, ಟ್ರ್ಯಾಕ್ ನಿರ್ವಾಹಕರು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್‌ಮೆನ್, ಎಲೆಕ್ಟ್ರಿಕ್ ಸಿಗ್ನಲ್ ನಿರ್ವಾಹಕರು ಮತ್ತು ಸಿಗ್ನಲಿಂಗ್ ಮೇಲ್ವಿಚಾರಕರು ಮುಂತಾದ ಹುದ್ದೆಗಳನ್ನು ಒಳಗೊಂಡಿವೆ.

ಲೊಕೊ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ವಲಯಗಳಿಗೆ ಆದೇಶ

ನೇಮಕಗೊಳ್ಳುವ ALP ಗಳಿಗೆ ಕರ್ತವ್ಯಕ್ಕೆ ನಿಯೋಜಿಸುವ ಮೊದಲು ವ್ಯಾಪಕ ತರಬೇತಿಯನ್ನು ನೀಡಲಾಗುತ್ತದೆ. ರೈಲ್ವೇ ವಲಯದಲ್ಲಿ ನುರಿತ ಸಿಬ್ಬಂದಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ದೇಶಾದ್ಯಂತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಪೂರೈಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರೈಲ್ವೇ ನೇಮಕಾತಿ ಮಂಡಳಿಯೊಂದಿಗೆ ಸಮನ್ವಯದೊಂದಿಗೆ ಎಎಲ್​​ಪಿಗಳ ಹೆಚ್ಚಿನಖಾಲಿ ಹುದ್ದೆಗಳನ್ನು” ತ್ವರಿತವಾಗಿ ಭರ್ತಿ ಮಾಡಲು ರೈಲ್ವೆ ಮಂಡಳಿಯು ವಲಯಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರವು ವಿವಿಧ ವಲಯ ರೈಲ್ವೆಗಳಿಂದ ಎಎಲ್​​ಪಿಗಳಿಗೆ ಹೆಚ್ಚುವರಿ ವಿನಂತಿಗಳನ್ನು ಅನುಸರಿಸುತ್ತದೆ.

ಇದನ್ನೂ ಓದಿ: Pawan Kalyan: ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಅಧಿಕಾರ ಸ್ವೀಕಾರ

ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್‌ನ ಕೇಂದ್ರ ಸಂಘಟನಾ ಕಾರ್ಯದರ್ಶಿ ವಿ ಬಾಲಚಂದ್ರನ್ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ರೈಲ್ವೆ ಮಂಡಳಿಯು ಈಗ ಇದನ್ನು ಅನುಮೋದಿಸಿದೆ, ಇದು ವ್ಯವಸ್ಥೆಯ ಮೇಲಿನ ಕೆಲವು ಹೊರೆಗಳನ್ನು ನಿವಾರಿಸುತ್ತದೆ. ಪ್ರಸ್ತುತ ಉಳಿದ ಬೇಡಿಕೆಗಳು ಮತ್ತು ಅಂತರ-ರೈಲ್ವೆ ವರ್ಗಾವಣೆಯ ವಿನಂತಿಗಳ ಬೆಳಕಿನಲ್ಲಿ ಪ್ರಸ್ತುತ ಮಾನವಶಕ್ತಿಯ ಅವಶ್ಯಕತೆಗಳನ್ನು ಮರು ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ, ”ಎಂದು ಅವರು ಹೇಳಿದರು.

ಚಾಲಕರ ಸುದೀರ್ಘ ಕೆಲಸದ ಸಮಯವನ್ನು ಕಡಿತಗೊಳಿಸಬೇಕೆಂದು ಲೋಕೋ ಪೈಲಟ್‌ಗಳ ಸಂಘಟನೆಗಳು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ.

ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ

ಸೋಮವಾರ ಬೆಳಗ್ಗೆ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಗೂಡ್ಸ್ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 10 ಜನರು ಸಾವಿಗೀಡಾಗಿದ್ದು 40 ಜನರು ಗಾಯಗೊಂಡಿದ್ದಾರೆ. ಗೂಡ್ಸ್ ರೈಲು ಕೆಂಪು ಸಿಗ್ನಲ್‌ಗಳನ್ನು ಉಲ್ಲಂಘಿಸಿದ್ದರಿಂದ ದುರಂತಕ್ಕೆ ಸಿಸ್ಟಮ್ ವೈಫಲ್ಯ ಕಾರಣ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ ರಾಣಿಪಾತ್ರ ರೈಲು ನಿಲ್ದಾಣ ಮತ್ತು ಚತ್ತರ್ ಹಾಟ್ ಜಂಕ್ಷನ್ ನಡುವೆ ಸಿಗ್ನಲ್ ವೈಫಲ್ಯ ಸಂಭವಿಸಿದೆ ಎಂದು ರೈಲ್ವೆ ಮಂಡಳಿ ಒಪ್ಪಿಕೊಂಡಿದೆ. ರಾಣಿಪಾತ್ರದ ಸ್ಟೇಷನ್ ಮಾಸ್ಟರ್ ಗೂಡ್ಸ್ ರೈಲು ಚಾಲಕನಿಗೆ ಎಲ್ಲಾ ಕೆಂಪು ಸಿಗ್ನಲ್‌ಗಳನ್ನು ದಾಟಲು ಲಿಖಿತ ಅಧಿಕಾರವನ್ನು ನೀಡಿದ್ದಾರೆ ಎಂದು ಅದು ಬಹಿರಂಗಪಡಿಸಿದೆ. ಆದಾಗ್ಯೂ, ಪ್ರೋಟೋಕಾಲ್ ಪ್ರಕಾರ ಚಾಲಕನು ಗಂಟೆಗೆ 10 ಕಿಮೀ ವೇಗದಲ್ಲಿ ಸಾಗಬೇಕು ಮತ್ತು ಪ್ರತಿ ಕೆಂಪು ಸಿಗ್ನಲ್‌ನಲ್ಲಿ ಒಂದು ನಿಮಿಷ ನಿಲುಗಡೆ ಮಾಡಬೇಕಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ