AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲುಗಳಲ್ಲಿ ಸಾಮಾನ್ಯ ಬೋಗಿ ಟಿಕೆಟ್​ ಬುಕ್ಕಿಂಗ್​​ಗೆ ಮತ್ತೆ ಬಂತು UTS ಆ್ಯಪ್

ಬುಕಿಂಗ್​ ಕೌಂಟರ್​ಗಳಲ್ಲಿ ಟಿಕೆಟ್​ ಪಡೆಯಲು ಕೆಲವೊಮ್ಮೆ ನೂಕು ನುಗ್ಗಲು ಉಂಟಾಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಲು ಈ ಆ್ಯಪ್​ ಸಹಕಾರಿ.

ರೈಲುಗಳಲ್ಲಿ ಸಾಮಾನ್ಯ ಬೋಗಿ ಟಿಕೆಟ್​ ಬುಕ್ಕಿಂಗ್​​ಗೆ ಮತ್ತೆ ಬಂತು UTS ಆ್ಯಪ್
ಭಾರತೀಯ ರೈಲ್ವೆ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 25, 2021 | 10:04 PM

ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಎಲ್ಲಾ ಕಡೆಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಇನ್ನು ಹಣ ಪಾವತಿ ಮಾಡಲು ಅನೇಕ ಕಡೆಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಆಫ್​ಲೈನ್​ಗಿಂತ ಆನ್​ಲೈನ್ ಮೂಲಕವೇ ವ್ಯವಹಾರ ಮಾಡಲು ಬೇಕಾಗುವ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಇಂಡಿಯನ್​ ರೈಲ್ವೆ ಕೂಡ ಆನ್​ಲೈನ್​ ಟಿಕೆಟ್​ ಬುಕ್ಕಿಂಗ್​ಗೆ ಹೆಚ್ಚು ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಾಮಾನ್ಯ ಬೋಗಿಯ ಟಿಕೆಟ್​ ಬುಕ್​ ಮಾಡಲು UTS ಆ್ಯಪ್​ ಅನ್ನು ಮತ್ತೆ ಆ್ಯಕ್ಟಿವೇಟ್​ ಮಾಡಿದೆ.

ಬುಕಿಂಗ್​ ಕೌಂಟರ್​ಗಳಲ್ಲಿ ಟಿಕೆಟ್​ ಪಡೆಯಲು ಕೆಲವೊಮ್ಮೆ ನೂಕು ನುಗ್ಗಲು ಉಂಟಾಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಲು ಈ ಆ್ಯಪ್​ ಸಹಕಾರಿ. ಏಕೆಂದರೆ, ಸಾಮಾನ್ಯ ಬೋಗಿಗಳ ಟಿಕೆಟ್​ಗಳನ್ನು ನೀವು ಈ ಆ್ಯಪ್​ ಮೂಲಕವೇ ಖರೀದಿಸಬಹುದು. ಹೀಗಾಗಿ, ಸರತಿ ಸಾಲಿನಲ್ಲಿ ನಿಲ್ಲಬೇಕು ಎನ್ನುವ ಗೋಳು ತಪ್ಪುತ್ತದೆ. ಕೊರೊನಾ ವೈರಸ್​ ಬರುವುದಕ್ಕೂ ಮದೊಲು ಈ ಸೇವೆ ಚಾಲ್ತಿಯಲ್ಲಿತ್ತು. ಆದರೆ, ಕೊರೊನಾದಿಂದ ಉಂಟಾದ ಲಾಕ್​ಡೌನ್​ ವೇಳೆ ರೈಲು ಸೇವೆ ಸಂಪೂರ್ಣವಾಗಿ ನಿಂತಿತ್ತು. ಈಗೆ ರೈಲುಗಳ ಓಡಾಟ ಪುನಃ ಆರಂಭವಾಗಿದೆ. ಹೀಗಾಗಿ ಈ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

ಏನು ಮಾಡಬೇಕು?

  1. ಮೊದಲು ಪ್ಲೇಸ್ಟೋರ್​ಗೆ ಹೋಗಿ ಯುಟಿಎಸ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು..
  2. ನಂತರ ನಿಮ್ಮ ಇಮೇಲ್​ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಬೇಕು.
  3. ರೈಲ್ವೆ ನಿಲ್ದಾಣದಿಂದ 25ರಿಂದ 30 ಮೀಟರ್‌ ದೂರದಲ್ಲಿದ್ದರೆ ಮಾತ್ರ ಪ್ರಯಾಣಿಕರು ಯುಟಿಎಸ್‌ ಮೊಬೈಲ್‌ ಆ್ಯಪ್‌ ಬಳಸಬಹುದು ಮತ್ತು ಒಂದು ಬಾರಿ ನಾಲ್ಕು
  4. ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು.
  5. ಟಿಕೆಟ್‌ಗಳು ಮಾತ್ರವಲ್ಲದೆ ಪ್ಲಾಟ್‌ಫಾರ್ಮ್‌ ಟಿಕೆಟ್‌ಗಳು ಮತ್ತು ತಿಂಗಳ ಪಾಸ್‌ಗಳನ್ನು ಸಹ ಖರೀದಿಸಬಹುದು.
  6. ಟಿಕೆಟ್ ಪರೀಕ್ಷಕರು ಕೇಳಿದಾಗ, ಇ-ಟಿಕೆಟ್​ಗಳನ್ನು ನೀವು ತೋರಿಸಿದರೆ ಸಾಕಾಗುತ್ತದೆ.

ಇದನ್ನೂ ಓದಿ: KPSC 2021 FDA Admit Card: ಎಫ್​ಡಿಎ ಹಾಲ್​ ಟಿಕೆಟ್​ ಬಿಡುಗಡೆ; ಆನ್​ಲೈನ್​​ನಲ್ಲಿ ಡೌನ್​ ಮಾಡೋದು ಹೇಗೆ? ಇಲ್ಲಿದೆ ವಿವರ