Defence Exports: ದಾಖಲೆ ಮಟ್ಟದಲ್ಲಿ ರಕ್ಷಣಾ ರಫ್ತು; ರಾಜನಾಥ್ ಸಿಂಗ್, ಮೋದಿ ಹರ್ಷ

ದೇಶದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ತಿಳಿಸಿದ್ದಾರೆ. 2022-2023ನೇ ಸಾಲಿನಲ್ಲಿ ಭಾರತ 15,920 ಕೋಟಿ ರೂ. ಮೌಲ್ಯದ ರಕ್ಷಣಾ ಸಲಕರಣೆಗಳನ್ನು ರಫ್ತು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Defence Exports: ದಾಖಲೆ ಮಟ್ಟದಲ್ಲಿ ರಕ್ಷಣಾ ರಫ್ತು; ರಾಜನಾಥ್ ಸಿಂಗ್, ಮೋದಿ ಹರ್ಷ
ಸಾಂದರ್ಭಿಕ ಚಿತ್ರ

Updated on: Apr 01, 2023 | 3:05 PM

ಮುಖ್ಯಾಂಶಗಳು

  • ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ದೇಶದ ರಕ್ಷಣಾ ರಫ್ತು.
  • ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ.
  • ಹರ್ಷ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ.

ನವದೆಹಲಿ: ದೇಶದ ರಕ್ಷಣಾ ರಫ್ತು (Defence Export) ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶನಿವಾರ ತಿಳಿಸಿದ್ದಾರೆ. 2022-2023ನೇ ಸಾಲಿನಲ್ಲಿ ಭಾರತ 15,920 ಕೋಟಿ ರೂ. ಮೌಲ್ಯದ ರಕ್ಷಣಾ ಸಲಕರಣೆಗಳನ್ನು ರಫ್ತು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದು, ಇದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದ್ದಾರೆ. ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 2022-2023ನೇ ಹಣಕಾಸು ವರ್ಷದಲ್ಲಿ 15,920 ಕೋಟಿ ಮೊತ್ತದ ರಕ್ಷಣಾ ಸಲಕರಣೆಗಳ ರಫ್ತು ಮಾಡಲಾಗಿದೆ. ಇದೊಂದು ಗಮನಾರ್ಹ ಸಾಧನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ‘ಸ್ಫೂರ್ತಿದಾಯಕ ನಾಯಕತ್ವ’ದಲ್ಲಿ ದೇಶದ ರಕ್ಷಣಾ ರಫ್ತುಗಳು ಗಮನಾರ್ಹವಾಗಿ ಹೆಚ್ಚಾಗುತ್ತಾ ಇರಲಿವೆ ಎಂದು ಅವರು ಹೇಳಿದ್ದಾರೆ. ಅಧಿಕೃತ ದತ್ತಾಂಶಗಳ ಪ್ರಕಾರ 2021-22ರಲ್ಲಿ ದೇಶದ ರಕ್ಷಣಾ ರಫ್ತು 12,814 ಕೋಟಿ ಆಗಿತ್ತು.

2020-21ರಲ್ಲಿ ಭಾರತವು 8,434 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್​ವೇರ್​ ರಫ್ತು ಮಾಡಿತ್ತು. ಇದು 2019-20ರಲ್ಲಿ 9,115 ಕೋಟಿ ರೂ, 2018-19ರಲ್ಲಿ 10,745 ಕೋಟಿ ರೂ, 2017-18ರಲ್ಲಿ 4,682 ಕೋಟಿ ರೂ, 2016-17ರಲ್ಲಿ 1,521 ಕೋಟಿ ರೂ. ಆಗಿತ್ತು.

2024-25ರ ವೇಳೆಗೆ 35,000 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್​ವೇರ್ ರಫ್ತು ಮಾಡುವ ಗುರಿಯನ್ನು ಭಾರತ ಹಾಕಿಕೊಂಡಿದೆ.

ಇದನ್ನೂ ಓದಿ: Narendra Modi: ಬೆಂಗಳೂರಿಗರ ಪರಿಸರ ಪ್ರೀತಿಗೆ ಕನ್ನಡದಲ್ಲೇ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

ರಕ್ಷಣಾ ರಫ್ತಿಗೆ ಸಂಬಂಧಿಸಿ ರಾಜನಾಥ್ ಸಿಂಗ್ ಮಾಡಿರುವ ಟ್ವೀಟ್​​ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


‘ಅತ್ಯುತ್ತಮ! ‘ಮೇಕ್ ಇನ್ ಇಂಡಿಯಾ’ ಕಡೆಗೆ ಭಾರತದ ಪ್ರತಿಭೆಗಳ ಸ್ಪಷ್ಟ ಅಭಿವ್ಯಕ್ತಿ ಮತ್ತು ಉತ್ಸಾಹ ಇದರಿಂದ ಕಂಡುಬರುತ್ತದೆ. ಕಳೆದ ಕೆಲವು ವರ್ಷಗಳಿಂದ ರಕ್ಷಣಾ ವಲಯದಲ್ಲಿನ ಸುಧಾರಣೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿರುವುದನ್ನು ಇದು ತೋರಿಸಿದೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಇದೆ’ ಎಂದು ಟ್ವೀಟ್​ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us