ಒಡಿಶಾದಲ್ಲಿ ನಿರ್ಮಾಣವಾಯ್ತು ಭಾರತದ ಮೊದಲ ಅಕ್ಕಿ ಎಟಿಎಂ
ಎಟಿಎಂನಿಂದ ಹಣ ತೆಗೆಯುವುದನ್ನು ನೀವು ನೋಡಿರುತ್ತೀರಿ, ಇನ್ಮುಂದೆ ಎಟಿಎಂನಿಂದ ಅಕ್ಕಿಯೂ ಬರುತ್ತೆ. ಒಡಿಶಾದಲ್ಲಿ ದೇಶದ ಮೊದಲ ಅಕ್ಕಿ ಎಟಿಎಂಗೆ ಚಾಲನೆ ದೊರೆತಿದೆ. ಇದನ್ನು ಪಡಿತರ ಚೀಟಿ ಫಲಾನುಭವಿಗಳಿಗಾಗಿ ಸಿದ್ಧಪಡಿಸಲಾಗಿದೆ.
ಭಾರತದ ಮೊದಲ ಅಕ್ಕಿ ಎಟಿಎಂಗೆ ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಭುವನೇಶ್ವರದಲ್ಲಿ ಚಾಲನೆ ನೀಡಿದ್ದಾರೆ. ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಅಳವಡಿಸಲಾಗಿರುವ ಈ ಯಂತ್ರವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅಕ್ಕಿ ವಿತರಣೆಯನ್ನು ಸರಳೀಕರಿಸಲು ವಿನ್ಯಾಸಗೊಳಿಸಲಾಗಿದೆ.
ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್ಸ್ಕ್ರೀನ್ನಲ್ಲಿ ನಮೂದಿಸಿದಾಗ 25ಕೆಜಿವರೆಗೆ ಅಕ್ಕಿಯನ್ನು ವಿತರಿಸಲು ಅನುಮತಿ ಸಿಗಲಿದೆ ನಂತರ ಬಯೋಮೆಟ್ರಿಕ್ ದೃಢೀಕರಣವಿರಲಿದೆ. ಅಕ್ಕಿ ವಿತರಣೆಯ ಈ ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ವಿತರಣಾ ಕೇಂದ್ರಗಳಲ್ಲಿ ಫಲಾನುಭವಿಗಳು ದೀರ್ಘಕಾಲ ಸರತಿಯಲ್ಲಿ ನಿಂತು ಕಾಯುವ ಅಗತ್ಯವಿರುವುದಿಲ್ಲ.
ಸಬ್ಸಿಡಿ ಅಕ್ಕಿಯ ಕಳ್ಳತನ ಹಾಗೂ ಬ್ಲ್ಯಾಕ್ ಮಾರ್ಕೆಟ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ಇದೆ. ನಾವು ಫಲಾನುಭವಿಗಳಿಗೆ ಅಕ್ಕಿ ಎಟಿಎಂ ಅನ್ನು ಪರೀಕ್ಷಿಸಿದ್ದೇವೆ. ಇದು ಭಾರತದ ಮೊದಲ ಅಕ್ಕಿ ಎಟಿಎಂ ಆಗಿದ್ದು, ಪ್ರಾಯೋಗಿಕವಾಗಿ ಉದ್ಘಾಟನೆಯಾಗಿದೆ.
ಮತ್ತಷ್ಟು ಓದಿ: Pralhad Joshi: ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆ ಮುಂದುವರಿಯಲಿದೆ; ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಫಲಾನುಭವಿಗಳು ಸರಿಯಾದ ತೂಕದಲ್ಲಿ ಅಕ್ಕಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ ಇದರಲ್ಲಿ ಯಾವುದೇ ಮೋಸಕ್ಕೂ ಅವಕಾಶವಿರುವುದಿಲ್ಲ.
ಅಕ್ಕಿ ಎಟಿಎಂ ಅನ್ನು ಆರಂಭದಲ್ಲಿ ಭುವನೇಶ್ವರದಲ್ಲಿ ಪರಿಚಯಿಸಲಾಗುವುದು ಮತ್ತು ಅಂತಿಮವಾಗಿ ಒಡಿಶಾದ ಎಲ್ಲಾ 30 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಮಾದರಿಯನ್ನು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ಇತರ ರಾಜ್ಯಗಳಿಗೆ ವಿಸ್ತರಿಸಬಹುದು. ವಿವಿಧ ರಾಜ್ಯಗಳ ಜನರು ಈ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಮ್ಮ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Fri, 9 August 24