ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ: ನಿರ್ಮಲಾ ಸೀತಾರಾಮನ್

ಸಭೆಯ ಭಾಗವಾಗಿ ಅಯೋಜಿಸಲಾಗಿದ್ದ ‘ಊಟದ ಮೇಲೆ ಸಂಭಾಷಣೆ’ ಬಹಳ ಯಶಸ್ವೀ ಎನಿಸಿತು ಮತ್ತು ಎಲ್ಲರೂ ಅದನ್ನು ಕೊಂಡಾಡಿದರು ಎಂದು ಹಣಕಾಸು ಸಚಿವೆ ಹೇಳಿದರು.

ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್, ಶಣಕಾಸು ಸಚಿವೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 25, 2023 | 8:36 PM

ಬೆಂಗಳೂರು: ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ (ಎಫ್ ಎಮ್ ಸಿಬಿಜಿ) (FMCBG) ಸಭೆ ಇಂದು ನಗರದಲ್ಲಿ ಮುಕ್ತಾಯಗೊಂಡ ಬಳಿಕ ಭಾತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಭೆಯ ಆಗುಹೋಗುಗಳನ್ನು ಕುರಿತ ಪತ್ರಿಕಾ ಗೋಷ್ಟಿಯೊಂದನ್ನು (presser) ನಡೆಸಿದರು. ಮೂರು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಏನು ನಡೆಯುತ್ತಿದೆ ಅಂತ ನಿಮಗೆ ಗೊತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ ನಿರ್ಮಲಾ ಅವರು, ಎಫ್ ಎಮ್ ಸಿಬಿಜಿ ಸಭೆಯ ನಂತರ ನಡೆಯುತ್ತಿರುವ ಏಕೈಕ ಮಾಧ್ಯಮದೊಂದಿಗಿನ ಸಂವಾದ (media interaction) ಇದಾಗಿದೆ ಎಂದು ಹೇಳಿದರು. ಸಭೆಯನ್ನು ಆಯೋಜಿಸಿದ ಉದ್ದೇಶದ ಬಗ್ಗೆ ಮಾತಾಡಿದ ನಿರ್ಮಲಾ ಅವರು, ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳಿಂದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುವುದಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ:  G20 FCBD Meet: ಬೆಂಗಳೂರಿನಲ್ಲಿ 2ನೇ ಜಿ20 ಸಭೆ; ವಸುದೈವ ಕುಟುಂಬದ ಮಹತ್ವ ಸಾರಿದ ಅನುರಾಗ್ ಠಾಕೂರ್

ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳು ಸೇರಿದಂತೆ ಸುಮಾರು 500 ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಸಚಿವೆ ಹೇಳಿದರು. ಕೇವಲ 4 ರಾಷ್ಟ್ರಗಳು-ಚೀನಾ, ಮೆಕ್ಸಿಕೋ, ರಷ್ಯಾ ಮತ್ತು ಟರ್ಕಿಯ ಹಣಕಾಸು ಸಚಿವರು ಹಾಗೂ ಗವರ್ನರ್ ಗಳು ಸಬೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರು ಹೇಳಿದರು. ಮುಂದುವರಿದು ಮಾತಾಡಿದ ಸಚಿವೆ, ಭಾರತವು ದಕ್ಷಿಣ ವಿಶ್ವದ ಧ್ವನಿ ಆಗಬಯಸುತ್ತದೆ ಎಂದು ಹೇಳಿದರು. ಜಿ20 ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲೇ ತನ್ನ ನೆರೆರಾಷ್ಟ್ರಗಳೊದದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಂಡಿರುವ ಭಾರತ ಎಫ್ ಎಮ್ ಸಿಬಿಜಿ ಸಭೆಯಲ್ಲಿ ಅತಿಥಿ ರಾಷ್ಟ್ರಗಳಾಗಿ ಭಾಗವಹಿಹಸಲು ಅವುಗಳನ್ನು ಆಹ್ವಾನಿಸಿತ್ತು ಮತ್ತು ಆ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದರು ಎಂದರು.

ಎಫ್ ಎಮ್ ಸಿಬಿಜಿ ಸಭೆಗೆ ಮೊದಲು ವಿಡಿಯೋ ಸಂದೇಶದ ಮೂಲಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು; ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳು ಆಯಾ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯ ಕಸ್ಟೋಡಿಯನ್ ಗಳಾಗಿದ್ದಾರೆ ಎಂದು ಹೇಳಿ ಭಾರತ ವಸುದೈವ ಕುಟುಂಬಕಂ ತತ್ವದಲ್ಲಿ ಸಂಪೂರ್ಣ ನಂಬಿಕೆಯಿರಿಸಿದೆ ಎಂದು ಹೇಳಿದ್ದರು ಅಂತ ನಿರ್ಮಲಾ ಸೀತಾರಾಮನ್ ಮಾಧಮದವರಿಗೆ ತಿಳಿಸಿದರು.

ಇದನ್ನೂ ಓದಿ: ಭಾರತೀಯ ದ್ವೀಪ ಪ್ರದೇಶದಲ್ಲಿ ಹಾರುವ ಬಲೂನ್ ರೀತಿಯ ವಸ್ತು ಪತ್ತೆ: ವರದಿ

ಸಭೆಯ ಭಾಗವಾಗಿ ಅಯೋಜಿಸಲಾಗಿದ್ದ ‘ಊಟದ ಮೇಲೆ ಸಂಭಾಷಣೆ’ ಬಹಳ ಯಶಸ್ವೀ ಎನಿಸಿತು ಮತ್ತು ಎಲ್ಲರೂ ಅದನ್ನು ಕೊಂಡಾಡಿದರು ಎಂದು ಹಣಕಾಸು ಸಚಿವೆ ಹೇಳಿದರು. ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಚನ್ನಪಟ್ಣಂದ ಗೊಂಬೆ, ಆಟಿಕೆಗಳು, ಕೈಯಿಂದ ನೇಯ್ಗೆ ಮಾಡಿದ ಸೀರೆಗಳು ಹಾಗೂ ಇನ್ನಿತರ ವಸ್ತಗಳನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದ ಸಚಿವೆ, ದುರ್ಬಲ ರಾಷ್ಟ್ರಗಳು ಈ ಶೃಂಗಸಭೆಯಿಂದ ಪರಿಹಾರಗಳನ್ನು ಎದುರು ನೋಡುತ್ತಿವೆ ಎಂದರು. ಮುಂದಿನ ಎಫ್ ಎಮ್ ಸಿಬಿಜಿ ಸಭೆ ವಾಷಿಂಗಟನ್ ನಲ್ಲಿ ಏಪ್ರಿಲ್ ತಿಂಗಳು ನಡೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ