
ನವದೆಹಲಿ: ಇಂಡಿಗೋ ವಿಮಾನದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. 15ನೇ ವರ್ಷದ ಸಂಭ್ರಮದಲ್ಲಿರುವ ಇಂಡಿಗೋ ಏರ್ಲೈನ್ಸ್ ತನ್ನ ಪ್ರಯಾಣಿಕರಿಗೆ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. ಕೇವಲ 915 ರೂ.ಗೆ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಿದೆ. 2021ರ ಸೆಪ್ಟೆಂಬರ್ 1 ಮತ್ತು 2022ರ ಮಾರ್ಚ್ 22ರವರೆಗೆ ಇಂಡಿಗೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ಟಿಕೆಟ್ ಅನ್ನು ಖರೀದಿಸಬಹುದು. ತನ್ನ 15ನೇ ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ಮೂರು ದಿನಗಳ ಕಾಲ ಭರ್ಜರಿ ಸೇಲ್ ಹಾಕಿದೆ.
ಇಂದಿನಿಂದ ಆಗಸ್ಟ್ 6ರವರೆಗೆ ಈ ರಿಯಾಯಿತಿ ದರದ ಟಿಕೆಟ್ ಅನ್ನು ಇಂಡಿಗೋ ಮಾರಾಟ ಮಾಡಲಿದೆ. ಅದೃಷ್ಟಶಾಲಿ ಪ್ರಯಾಣಿಕರಿಗೆ 915 ರೂ. ಟಿಕೆಟ್ ಲಭ್ಯವಾಗಲಿದೆ. ಹೆಚ್ಚುವರಿಯಾಗಿ, ಫಾಸ್ಟ್ ಫಾರ್ವರ್ಡ್, 6 ಇ-ಫ್ಲೆಕ್ಸ್, 6-ಇ ಸೇರಿದಂತೆ 6E ಆಡ್-ಆನ್ಗಳು ಬ್ಯಾಗ್ಪೋರ್ಟ್ ಅನ್ನು 315 ರೂ.ಗಳಲ್ಲಿ ನೀಡಲಾಗುವುದು. ಈ ಆಫರ್ ಡೊಮೆಸ್ಟಿಕ್ ವಿಮಾನ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ, ಯಾವ ಕ್ಲಾಸ್ನಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಆಧಾರದಲ್ಲಿ ಬೆಲೆಯಲ್ಲೂ ಬದಲಾವಣೆಯಾಗಲಿದೆ.
ಏರ್ಲೈನ್ಸ್ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಇಂಡಿಗೋ ವಿಮಾನದ ಟಿಕೆಟ್ ಬುಕ್ ಮಾಡಿದರೆ ಶೇ. 5ರಷ್ಟು ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ. ಹಾಗೇ ಹೆಚ್ಎಸ್ಬಿಸಿ ಕ್ರೆಡಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಶೇ. 5ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಈ ಆಫರ್ ಗರಿಷ್ಟ 30,000 ರೂ.ವರೆಗಿನ ಟಿಕೆಟ್ ಬುಕಿಂಗ್ಗೆ ಕ್ಯಾಶ್ಬ್ಯಾಕ್ ಸಿಗಲಿದೆ ಎಂದು ಇಂಡಿಗೋ ವಿಮಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Indigo plane: ಹುಬ್ಬಳ್ಳಿಯಲ್ಲಿ ಇಳಿಯುವಾಗ ಇಂಡಿಗೋ ವಿಮಾನದ ಟೈರ್ ಪಂಕ್ಚರ್; ಪ್ರಯಾಣಿಕರು ಸುರಕ್ಷಿತ
Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ತುರ್ತು ಭೂಸ್ಪರ್ಶ
(Indigo airfare sale Indigo Special Offers Flight Ticket from 915 Rupees in sale on 15th birthday)