ಕೊಲ್ಕತ್ತಾ: ಕೋಲ್ಕತ್ತಾಗೆ ಹೊರಟಿದ್ದ ವಿಮಾನವು ರಾಂಚಿ ವಿಮಾನ ನಿಲ್ದಾಣದಲ್ಲಿ (Ranchi Airport) ಟೇಕಾಫ್ ಆಗುವಾಗ ತಾಂತ್ರಿಕ ದೋಷವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಆ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡಲಾಯಿತು. 72 ಆಸನಗಳಿದ್ದ ಇಂಡಿಗೋ ವಿಮಾನದಲ್ಲಿ (Indigo Flight) 62 ಪ್ರಯಾಣಿಕರಿದ್ದರು. ಈ ವಿಮಾನ ಬೆಳಗ್ಗೆ ರಾತ್ರಿ 9 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಮತ್ತೆ ಲ್ಯಾಂಡ್ ಆಗಿದ್ದು, ತಡವಾಗಿ ಟೇಕಾಫ್ ಆಗಲಿದೆ ಎಂದು ಇಂಡಿಗೋ ಏರ್ಲೈನ್ಸ್ ಹೇಳಿದೆ.
“ವಿಮಾನದ ಹವಾನಿಯಂತ್ರಣದಲ್ಲಿ ತೊಂದರೆ ಉಂಟಾಗಿದ್ದರಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಆದ್ದರಿಂದ, ರಿಪೇರಿ ಕಾರ್ಯಗಳಿಗಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ” ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಶರ್ಮಾ ಹೇಳಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
ನಿರಂತರ ಸ್ಥಿರ ವಿಮಾನ ಕಾರ್ಯಾಚರಣೆಗಳ ದೃಷ್ಟಿಯಿಂದ ಪೈಲಟ್‌ಗಳ ವೇತನವನ್ನು ಶೇಕಡಾ ಎಂಟು ರಷ್ಟು ಹೆಚ್ಚಿಸಲಾಗಿದೆ ಎಂದು ಇಂಡಿಗೋ ಗುರುವಾರ ಪ್ರಕಟಿಸಿತ್ತು. ಕೊವಿಡ್ ಅಟ್ಟಹಾಸ ಕಡಿಮೆಯಾಗಿದ್ದರಿಂದ ಮಾರ್ಚ್ 27ರಂದು ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಪುನರಾರಂಭಗೊಂಡಿದ್ದವು. ಕಳೆದ ವರ್ಷ ಅಕ್ಟೋಬರ್ 18ರಂದು ದೇಶದಲ್ಲಿ ಪೂರ್ಣ ನಿಯಮಿತ ದೇಶೀಯ ವಿಮಾನಗಳು ಪುನರಾರಂಭಗೊಂಡಿದ್ದವು.
ಇದನ್ನೂ ಓದಿ: ವಾಯುಮಾರ್ಗ ಮಧ್ಯದಲ್ಲಿ ಡಿಕ್ಕಿ ಹೊಡೆದ ಎರಡು ವಿಮಾನಗಳು; ಮೂವರು ಪೈಲಟ್ಗಳು ಮೃತಪಟ್ಟಿದ್ದಾಗಿ ವರದಿ
Published On - 5:46 pm, Sat, 2 April 22