Swachh Survekshan Awards 2021: ಸತತ 5ನೇ ಬಾರಿಗೆ ಇಂದೋರ್​ಗೆ ಸ್ವಚ್ಛ ನಗರಿ ಪಟ್ಟ; ಮೈಸೂರಿಗೆ ನಿರಾಸೆ

Cleanest City Awards: ಸತತ ಐದನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟ ಅಲಂಕರಿಸಿದೆ. ಸ್ವಚ್ಛ ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸ್​ಘಡ ಮೊದಲ ಸ್ಥಾನ ಪಡೆದಿದೆ.

Swachh Survekshan Awards 2021: ಸತತ 5ನೇ ಬಾರಿಗೆ ಇಂದೋರ್​ಗೆ ಸ್ವಚ್ಛ ನಗರಿ ಪಟ್ಟ; ಮೈಸೂರಿಗೆ ನಿರಾಸೆ
ಪ್ರಾತಿನಿಧಿಕ ಚಿತ್ರ
Follow us
| Updated By: shivaprasad.hs

Updated on:Nov 20, 2021 | 12:05 PM

ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ಇಂದು (ನವೆಂಬರ್ 20) ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು ಘೋಷಿಸಿದ್ದಾರೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸನ್ನು ಹೊತ್ತಿದ್ದ ಮೈಸೂರಿಗೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೆಯಲ್ಲಿ ಛತ್ತೀಸ್​ಘಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.

ಪಿಟಿಐ ಹಂಚಿಕೊಂಡಿರುವ ಟ್ವೀಟ್:

ಪ್ರಶಸ್ತಿಯ ಕುರಿತು ಎಎನ್​ಐ ಹಂಚಿಕೊಂಡ ಟ್ವೀಟ್:

ಸ್ವಚ್ಛ ಗಂಗಾ ನದಿ ಪಾತ್ರದ ಊರಾಗಿ ವಾರಣಾಸಿ ಆಯ್ಕೆ: ಗಂಗಾ ನದಿ ಪಾತ್ರದಲ್ಲಿರುವ ಸ್ವಚ್ಛ ಊರುಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.

ಸ್ವಚ್ಛ ರಾಜ್ಯವಾಗಿ ಛತ್ತೀಸ್​ಘಡ ಆಯ್ಕೆ: ಕೇಂದ್ರ ಸರ್ಕಾರ ಸ್ವಚ್ಛ ರಾಜ್ಯಕ್ಕೆ ನಡೆಸಿದ ಸರ್ವೆಯಲ್ಲಿ ಛತ್ತೀಸ್​ಘಡ ಪ್ರಥಮ ಸ್ಥಾನ ಪಡೆದಿದೆ.

ಇದನ್ನೂ ಓದಿ:

ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡಲು ಮುಂದಾದ ರಾಜಸ್ಥಾನದ ಮೂವರು ಮಂತ್ರಿಗಳು

Published On - 11:56 am, Sat, 20 November 21