ಐಎನ್ಎಸ್ ವಿಕ್ರಾಂತ್ನಿಂದ ಪಾಕಿಸ್ತಾನದ ನಿದ್ರೆ ಹಾರಿಹೋಯಿತು; ನೌಕಾಪಡೆಗೆ ಪ್ರಧಾನಿ ಮೋದಿ ಮೆಚ್ಚುಗೆ
ಏಪ್ರಿಲ್ ತಿಂಗಳಲ್ಲಿ ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು ಎಂದು ದೀಪಾವಳಿಯಲ್ಲಿ ನೌಕಾಪಡೆ ಸಿಬ್ಬಂದಿಯನ್ನು ಕುರಿತು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಅರೇಬಿಯನ್ ಸಮುದ್ರದಲ್ಲಿ ನೌಕಾಪಡೆಯನ್ನು ಜಾಗರೂಕತೆಯಿಂದ ಇರಿಸಲಾಗಿತ್ತು. ಈ ವೇಳೆ ನೌಕಾಪಡೆಯ ಕೇಂದ್ರಬಿಂದು ಐಎನ್ಎಸ್ ವಿಕ್ರಾಂತ್ ಜೊತೆ 8ರಿಂದ 10 ಯುದ್ಧನೌಕೆಗಳನ್ನು ನಿಯೋಜಿಸಲಾಗಿತ್ತು.

ನವದೆಹಲಿ, ಅಕ್ಟೋಬರ್ 20: ಈ ವರ್ಷದ ದೀಪಾವಳಿಯನ್ನು (Deepavali) ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನದಲ್ಲಿ ಭಯವನ್ನುಂಟುಮಾಡಿತು, ಅದು ಅವರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು” ಎಂದು ಹೇಳಿದ್ದಾರೆ.
“ಐಎನ್ಎಸ್ ವಿಕ್ರಾಂತ್ ಹೆಸರೇ ಪಾಕಿಸ್ತಾನದ ನಿದ್ರೆಯನ್ನು ಕಸಿದುಕೊಂಡಿತು. ಅದರ ಹೆಸರೇ ಶತ್ರುಗಳ ಧೈರ್ಯವನ್ನು ಅಲುಗಾಡಿಸಬಹುದಾದರೆ ಅದರ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ. ಯುದ್ಧನೌಕೆ ಭಾರತದ ಕಡಲ ಶಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿದೆ. ಐಎನ್ಎಸ್ ವಿಕ್ರಾಂತ್‌ನಲ್ಲಿರುವ ದೇಶದ ಧೈರ್ಯಶಾಲಿ ನೌಕಾ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸುವುದು ತಮ್ಮ ಸೌಭಾಗ್ಯ“ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
At the majestic flightdeck of INS Vikrant, with the MiG-29 fighters. pic.twitter.com/SRjeSpP4sg
— Narendra Modi (@narendramodi) October 20, 2025
ಇದನ್ನೂ ಓದಿ: Video: ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
Celebrating Diwali with our brave Navy personnel on board the INS Vikrant. https://t.co/5J9XNHwznH
— Narendra Modi (@narendramodi) October 20, 2025
ಭಾರತದ ಮಿಲಿಟರಿ ಪರಾಕ್ರಮವನ್ನು ಎತ್ತಿ ತೋರಿಸಿದ ಮೋದಿ, “ಭಾರತೀಯ ನೌಕಾಪಡೆ ಸೃಷ್ಟಿಸಿದ ಭಯ, ಭಾರತೀಯ ವಾಯುಪಡೆ ಪ್ರದರ್ಶಿಸಿದ ಅದ್ಭುತ ಕೌಶಲ್ಯ ಮತ್ತು ಭಾರತೀಯ ಸೇನೆಯ ಶೌರ್ಯ ಈ ಮೂರು ಪಡೆಗಳು ಒಟ್ಟಾಗಿ ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ್‌ನಲ್ಲಿ ಬಹಳ ಬೇಗ ಶರಣಾಗುವಂತೆ ಮಾಡಿದವು” ಎಂದು ಮೋದಿ ಹೇಳಿದ್ದಾರೆ.
From the Air Power Demo at INS Vikrant! pic.twitter.com/XvrFL9peOK
— Narendra Modi (@narendramodi) October 20, 2025
“ಐಎನ್ಎಸ್ ವಿಕ್ರಾಂತ್ ಆತ್ಮನಿರ್ಭರ ಭಾರತ ಮತ್ತು ಮೇಡ್ ಇನ್ ಇಂಡಿಯಾದ ಅತ್ಯುನ್ನತ ಸಂಕೇತ” ಎಂದು ಪ್ರಧಾನಿ ಮೋದಿ ಬಣ್ಣಿಸಿದರು. “ನೀವು ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ಮತ್ತು ನಿಮ್ಮ ಛಲದ ಮೂಲಕ ಆಪರೇಷನ್ ಸಿಂಧೂರ್ ಅನ್ನು ವಿವರಿಸುವುದನ್ನು ನಾನು ನೋಡಿದಾಗ ಯುದ್ಧಭೂಮಿಯಲ್ಲಿ ನಿಂತಿರುವಾಗ ಸೈನಿಕನ ಅನುಭವ ಹೇಗಿರುತ್ತದೆ ಎಂಬುದು ನನಗೆ ಅರ್ಥವಾಯಿತು. ನಮ್ಮ ನೌಕಾಪಡೆಯ ಧೈರ್ಯಶಾಲಿ ಸೈನಿಕರಾದ ನಿಮ್ಮೊಂದಿಗೆ ಈ ಪವಿತ್ರ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ” ಎಂದು ಪ್ರಧಾನಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Mon, 20 October 25




