ಐಎನ್ಎಸ್ ವಿಕ್ರಾಂತ್‌ನಲ್ಲಿ ಪ್ರಧಾನಿ ಮೋದಿಗಾಗಿ ಆಪರೇಷನ್ ಸಿಂಧೂರ್ ಹಾಡು ಹಾಡಿದ ನೌಕಾಪಡೆಯ ಸಿಬ್ಬಂದಿ
ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಇಂದು) ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಕಾರ್ಯಾಚರಣೆಯ ಕುರಿತು ಹಾಡನ್ನು ಸಹ ಪ್ರಸ್ತುತಪಡಿಸಿದ್ದಾರೆ. ಪ್ರಧಾನಿ ಮೋದಿಗಾಗಿ 'ಕಸಮ್ ಸಿಂಧೂರ್ ಕಿ' ಎಂಬ ಹಾಡನ್ನು ಬರೆದ ನೌಕಾಪಡೆಯ ಸಿಬ್ಬಂದಿ ಒಟ್ಟಾಗಿ ಮೋದಿ ಮುಂದೆ ಆ ಹಾಡನ್ನು ಹಾಡಿದ್ದಾರೆ. ಇದು ಆಪರೇಷನ್ ಸಿಂಧೂರ್ ಕುರಿತಾದ ಹಾಡಾಗಿದೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ, ಅಕ್ಟೋಬರ್ 20: ಈ ಬಾರಿಯ ದೀಪಾವಳಿ (Deepavali) ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಐಎನ್ಎಸ್ ವಿಕ್ರಾಂತ್‌ನಲ್ಲಿ (INS Vikrant) ನೌಕಾಪಡೆಯ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ. ಪ್ರಧಾನಿ ಮೋದಿಗಾಗಿ ‘ಕಸಮ್ ಸಿಂಧೂರ್ ಕಿ’ ಎಂಬ ಹಾಡನ್ನು ಬರೆದ ನೌಕಾಪಡೆಯ ಸಿಬ್ಬಂದಿ ಒಟ್ಟಾಗಿ ಮೋದಿ ಮುಂದೆ ಆ ಹಾಡನ್ನು ಹಾಡಿದ್ದಾರೆ. ಇದು ಆಪರೇಷನ್ ಸಿಂಧೂರ್ ಕುರಿತಾದ ಹಾಡಾಗಿದೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ನಿನ್ನೆ ಸಂಜೆ ಐಎನ್ಎಸ್ ವಿಕ್ರಾಂತ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಆ ಹಾಡು ಸದಾ ನನ್ನ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. ನೌಕಾ ಸಿಬ್ಬಂದಿ ನಿಜವಾಗಿಯೂ ಸೃಜನಶೀಲರು ಮತ್ತು ಬಹುಮುಖ ಪ್ರತಿಭೆಗಳು ಎಂಬುದರಲ್ಲಿ ಅನುಮಾನವಿಲ್ಲ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಮೊದಲ ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿರುವ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಈ ವರ್ಷ ದೀಪಾವಳಿಯನ್ನು ಆಚರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

