ಯೋಗ, ಸೂರ್ಯ ನಮಸ್ಕಾರದಲ್ಲಿ 2 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಆಂಧ್ರಪ್ರದೇಶ
ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಆಂಧ್ರ ಪ್ರದೇಶ ಯೋಗ ಮತ್ತು ಸೂರ್ಯ ನಮಸ್ಕಾರದಲ್ಲಿ ಎರಡು ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದೆ. ಈ ಕಾರ್ಯಕ್ರಮವನ್ನು ಅದ್ಭುತ ಯಶಸ್ಸು ಎಂದು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಜಗತ್ತಿನಾದ್ಯಂತ ಜನರು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.

ವಿಶಾಖಪಟ್ಟಣಂ, ಜೂನ್ 21: 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ಸಂದರ್ಭದಲ್ಲಿ ಆಂಧ್ರಪ್ರದೇಶವು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಗಳಿಸಿದೆ ಎಂದು ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ಅದ್ಭುತ ಯಶಸ್ಸು ಎಂದು ಶ್ಲಾಘಿಸಿದ ಅವರು, ಜಗತ್ತಿನಾದ್ಯಂತ ಜನರು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವುದರಿಂದ ಇತಿಹಾಸ ಸೃಷ್ಟಿಯಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಪ್ರಾಚೀನ ಯೋಗವನ್ನು ಮಾಡಲು ಇಲ್ಲಿ 3.3 ಲಕ್ಷ ಜನರು ಸೇರಿದ್ದಾರೆ. ಇದು ಒಂದೇ ಸ್ಥಳದಲ್ಲಿ ಹೆಚ್ಚಿನ ಜನರು ಯೋಗ ಮಾಡುವ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಇಂದಿನ ಯೋಗದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಗಿನ್ನೆಸ್ ವಿಶ್ವ ದಾಖಲೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಇಂದು ಆಂಧ್ರದಲ್ಲಿ ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳಲ್ಲಿ ಸೂರ್ಯ ನಮಸ್ಕಾರ ಮಾಡಿದರು. ಇಂದು ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ‘ಯೋಗಾಂಧ್ರ’ ಎಂಬ ಸಾಮೂಹಿಕ ಯೋಗ ಅಧಿವೇಶನದಲ್ಲಿ 22,000ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತು.
#WATCH | On #InternationalYogaDay2025 program in Visakhapatnam, Andhra Pradesh CM N. Chandrababu Naidu says, “I am very proud of today’s event, it was a great event for a noble cause. Now, Yoga is a game-changer. We got two Guinness World Records and 21 World Book of Records. We… pic.twitter.com/2JjW6H4ZjU
— ANI (@ANI) June 21, 2025
ಇದನ್ನೂ ಓದಿ: ಯೋಗ ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ: ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಮಾತು
ವಿದ್ಯಾರ್ಥಿಗಳು ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ 108 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರಗಳನ್ನು ಮಾಡಿ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದರು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. “11ನೇ ಅಂತಾರಾಷ್ಟ್ರೀಯ ಯೋಗ ದಿನವು ಅದ್ಭುತ ಯಶಸ್ಸನ್ನು ಕಂಡಿತು. ನಾವು ಇತಿಹಾಸವನ್ನು ಸೃಷ್ಟಿಸಿದ್ದೇವೆ. ಇದು ಸೂಪರ್ ಹಿಟ್ ಆಗಿದೆ” ಎಂದು ಅವರು ಹೇಳಿದರು.
With 5 lakhs participants Andhra is set to enter Guinness World Records for the world’s largest open-air yoga gathering
Narendra Modi ji doing Yoga among common people as leads in celebrating International Yoga day from Visakhapatnam, Andhra Pradesh.
#InternationalYogaDay pic.twitter.com/w0uUov1qiG
— Sheetal Chopra 🇮🇳 (@SheetalPronamo) June 21, 2025
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮಕ್ಕಾಗಿ ರಾಜ್ಯವು ಸುಮಾರು 2 ಕೋಟಿ ನೋಂದಣಿಗಳನ್ನು ನಿರೀಕ್ಷಿಸಿದ್ದರೂ, ಈ ಸಂಖ್ಯೆ 2.45 ಕೋಟಿಗೆ ಏರಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ: 73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿ ಯೋಗಪಟುಗಳನ್ನು ದಂಗಾಗಿಸಿದ ತಮಿಳುನಾಡು ರಾಜ್ಯಪಾಲ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಶಕ್ತಿಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ಲಾಘಿಸಿದರು. ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನ ಮತ್ತು ಯುವಕರ ಪರಿವರ್ತಕ ಪಾತ್ರವನ್ನು ಅವರು ಒತ್ತಿ ಹೇಳಿದರು. “ತಂತ್ರಜ್ಞಾನವು ಪ್ರಬುದ್ಧವಾಗಿದೆ. ನೀವು ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ನೀವು ಅದ್ಭುತಗಳನ್ನು ಮಾಡಬಹುದು” ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ