‘ಬೇಜವಾಬ್ದಾರಿ ಹೇಳಿಕೆ’; ಏರ್ ಇಂಡಿಯಾ ಅಪಘಾತದಲ್ಲಿ ಪೈಲಟ್‌ ಪಾತ್ರದ ಬಗ್ಗೆ ಅಮೆರಿಕ ಮಾಧ್ಯಮದ ವರದಿಗೆ ಭಾರತ ಖಂಡನೆ

ಗುಜರಾತಿನ ಅಹಮದಾಬಾದ್​​ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ‘ಪೈಲಟ್‌ಗಳ ಪಾತ್ರವಿದೆ’ ಎಂಬ ಅಮೆರಿಕದ ಮಾಧ್ಯಮಗಳ ವರದಿಯನ್ನು ಭಾರತದ ತನಿಖಾ ಸಂಸ್ಥೆ ತಿರಸ್ಕರಿಸಿದೆ. ಹಾಗೇ, ಏರ್ ಇಂಡಿಯಾ ಅಪಘಾತದ ಬಗ್ಗೆ ವಿದೇಶಿ ಮಾಧ್ಯಮಗಳು "ಬೇಜವಾಬ್ದಾರಿ" ವರದಿ ಮಾಡಿದ್ದಕ್ಕಾಗಿ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಟೀಕಿಸಿದೆ. ಹಿರಿಯ ಪೈಲಟ್ ಇಂಧನ ಪೂರೈಕೆಯನ್ನು ಕಡಿತಗೊಳಿಸಿದ್ದಾರೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಆರೋಪಿಸಿತ್ತು.

‘ಬೇಜವಾಬ್ದಾರಿ ಹೇಳಿಕೆ’; ಏರ್ ಇಂಡಿಯಾ ಅಪಘಾತದಲ್ಲಿ ಪೈಲಟ್‌ ಪಾತ್ರದ ಬಗ್ಗೆ ಅಮೆರಿಕ ಮಾಧ್ಯಮದ ವರದಿಗೆ ಭಾರತ ಖಂಡನೆ
Air India crash

Updated on: Jul 17, 2025 | 7:51 PM

ನವದೆಹಲಿ, ಜುಲೈ 17: ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ (Air India Plane Crash) ವಿಮಾನದಲ್ಲಿದ್ದ 241 ಜನರು ಮೃತಪಟ್ಟು, ಓರ್ವ ಪ್ರಯಾಣಿಕ ಮಾತ್ರ ಪಾರಾಗಿದ್ದರು. ಈ ವಿಮಾನ ಅಪಘಾತದ ಆರಂಭಿಕ ವರದಿಯ ಬಿಡುಗಡೆಯ ನಂತರ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ “ಬೇಜವಾಬ್ದಾರಿಯುತ” ವರದಿ ಮಾಡಿದ್ದಕ್ಕಾಗಿ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಇಂದು ವಿದೇಶಿ ಮಾಧ್ಯಮಗಳನ್ನು ಟೀಕಿಸಿದೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಕಾಯುವಂತೆ ಅವರಿಗೆ ಮನವಿ ಮಾಡಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಒಂದು ವಿಭಾಗವಾದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನೀಡಿದ ಹೇಳಿಕೆಯಲ್ಲಿ, ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಆಯ್ದ ಮತ್ತು ಪರಿಶೀಲಿಸದ ವರದಿಗಳ ಮೂಲಕ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಆರೋಪಿಸಿದೆ. “ತನಿಖೆ ಇನ್ನೂ ನಡೆಯುತ್ತಿರುವಾಗ ಅಂತಹ ಹೇಳಿಕೆಗಳನ್ನು ಬೇಜವಾಬ್ದಾರಿ ಎಂದು ಪರಿಗಣಿಸಲಾಗುತ್ತದೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು

ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ 787 ವಿಮಾನ ಅಪಘಾತದಲ್ಲಿ ಒಟ್ಟು 260 ಜನರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದರು. ಉಳಿದವರು ಹೊರಗಡೆಯಿದ್ದ ಅಮಾಯಕರು.

ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇಂದು ಅಮೆರಿಕ ಮೂಲದ ದಿ ವಾಲ್ ಸ್ಟ್ರೀಟ್ ಜರ್ನಲ್ ಅನ್ನು 260 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಫ್ಲೈಟ್ 171 ಅಪಘಾತದಲ್ಲಿ “ಪೈಲಟ್‌ಗಳ ಪಾತ್ರ” ಇದೆ ಎಂದು ತನ್ನ ಮಾಧ್ಯಮ ವರದಿಯನ್ನು ಮಾಡಿತ್ತು. ಇದನ್ನು ಪರಿಶೀಲಿಸದ, ಬೇಜವಾಬ್ದಾರಿಯುತ ವರದಿ ಎಂದು ಭಾರತ ಟೀಕಿಸಿದೆ.

ಇದನ್ನೂ ಓದಿ: 2018ರಲ್ಲೇ ಏರ್ ಇಂಡಿಯಾಗೆ ಇಂಧನದ ಸ್ವಿಚ್ ಸಮಸ್ಯೆ ಬಗ್ಗೆ ಎಚ್ಚರಿಸಿತ್ತು ಅಮೆರಿಕದ ವಾಯುಯಾನ ಸಂಸ್ಥೆ!

ಕಪ್ಪು ಪೆಟ್ಟಿಗೆಯ ರೆಕಾರ್ಡಿಂಗ್, AI 171 ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟು ವೈದ್ಯರ ಹಾಸ್ಟೆಲ್‌ಗೆ ಅಪ್ಪಳಿಸಿದ ಕೆಲವೇ ಸೆಕೆಂಡುಗಳ ನಂತರ ವಿಮಾನ ಸ್ಫೋಟವಾಗಿತ್ತು. 56 ವರ್ಷದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಆಫ್ ಮಾಡಿದ್ದೇ ಇದಕ್ಕೆ ಕಾರಣ ಎಂದು ಆ ಮಾಧ್ಯಮ ವರದಿ ಮಾಡಿತ್ತು. ಕಾಕ್​ಪಿಟ್​​ನಲ್ಲಿ ರೆಕಾರ್ಡ್ ಆಗಿದ್ದ ಆಡಿಯೋ ಕ್ಲಿಪ್​ನ್ಲಿ ಇನ್ನೋರ್ವ ಪೈಲಟ್ ಸುಮೀತ್ ಅವರಿಗೆ “ಇಂಜಿನ್ ನಿಯಂತ್ರಣ ಸ್ವಿಚ್​ ಆಫ್ ಮಾಡಿದ್ದೇಕೆ?” ಎಂದು ಪ್ರಶ್ನೆ ಮಾಡಿದ್ದು ರೆಕಾರ್ಡ್ ಆಗಿತ್ತು. ಅದಕ್ಕೆ ಉತ್ತರಿಸಿದ್ದ ಸುಮೀತ್ “ನಾನು ಆಫ್ ಮಾಡಿಲ್ಲ” ಎಂದಿದ್ದರು. ಇಂಧನದ ಸ್ವಿಚ್ ಆಟೋಮ್ಯಾಟಿಕ್ ಆಗಿ ಆಫ್ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು. ಇದಕ್ಕೆ ಅಮೆರಿಕ ಮಾಧ್ಯಮ ಈ ಅಪಘಾತಕ್ಕೆ ಪೈಲಟ್​​ಗಳನ್ನೇ ಹೊಣೆಗಾರರನ್ನಾಗಿ ಮಾಡಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ FIP ಮುಖ್ಯಸ್ಥ ಸಿಎಸ್ ರಾಂಧವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ತನಿಖಾ ವರದಿಯು ಯಾವುದೇ ಪೈಲಟ್‌ನ ಮೇಲೆ ದೂಷಿಸಿಲ್ಲ ಎಂದು ಹೇಳಿದ್ದಾರೆ. “ಪೈಲಟ್‌ನ ತಪ್ಪಿನಿಂದಾಗಿ ಇಂಧನ ನಿಯಂತ್ರಣ ಸ್ವಿಚ್ ಆಫ್ ಆಗಿದೆ ಎಂದು ತನಿಖೆಯ ವರದಿಯಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ನಾನು ಅಮೆರಿಕ ಮಾಧ್ಯಮದ ಲೇಖನವನ್ನು ಖಂಡಿಸುತ್ತೇನೆ. ಅದು ಪೈಲಟ್‌ನ ತಪ್ಪು ಎಂದು ಅವರು ಹೇಳಿದ್ದಾರೆ. ಅವರು ವರದಿಯನ್ನು ಸರಿಯಾಗಿ ಓದಿಲ್ಲ. ನಾವು FIP ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ರಾಂಧವ ಹೇಳಿದ್ದಾರೆ.

ರಾಯಿಟರ್ಸ್ ಪ್ರಕಾರ, 56 ವರ್ಷದ ಸುಮೀತ್ ಸಭರ್ವಾಲ್ ಒಟ್ಟು 15,638 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಅದರಲ್ಲಿ 8,596 ಗಂಟೆಗಳು ಬೋಯಿಂಗ್ 787 ಹಾರಾಟದ ಅನುಭವವಾಗಿತ್ತು. 32 ವರ್ಷದ ಕ್ಲೈವ್ ಕುಂದರ್ 3,403 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಅದರಲ್ಲಿ ಅವರು 1,128 ಗಂಟೆಗಳನ್ನು 787 ಬೋಯಿಂಗ್ ಜೆಟ್‌ಗಳಲ್ಲಿ ಸಹ-ಪೈಲಟ್ ಆಗಿ ಹಾರಾಟ ನಡೆಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ