ಬಿಜೆಪಿಯಲ್ಲಿ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಯಾರಿದ್ದಾರೆ? ಮುಂದಿನ ಪ್ರಧಾನಿ ಯಾರು?-ನವಾಬ್ ಮಲ್ಲಿಕ್ ಪ್ರಶ್ನೆ
ಇದೇ ಸಮಾರಂಭದಲ್ಲಿ ಭಾಗವಹಿಸಿದ್ದ ಶಿವಸೇನೆ ಸಂಸದ ಸಂಜಯ್ ರಾವತ್ ಕೂಡ ಎನ್ಸಿಪಿ ನಾಯಕ ಶರದ್ ಪವಾರ್ರನ್ನು ಹೊಗಳಿದ್ದಾರೆ. ಶರದ್ ಪವಾರ್ ಬಿಜೆಪಿಯನ್ನು ತುಂಬ ಚೆನ್ನಾಗಿ ಅರಿತುಕೊಂಡವರು ಎಂದು ಹೇಳಿದ್ದರು.
ಮುಂಬೈ: ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಪಕ್ಷಗಳು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತವೆ ಅಂತಾದರೆ ಕೇಂದ್ರದಲ್ಲೂ ಯಾಕೆ ಮಾಡಬಾರದು. 2024ರ ಲೋಕಸಭಾ ಚುನಾವಣೆಯಲ್ಲಿ ಕೂಡ ಈ ಪಕ್ಷಗಳು ಒಟ್ಟಾಗಬೇಕು. ಕೇಂದ್ರದಲ್ಲಿ ಶರದ್ ಪವಾರ್ ನೇತೃತ್ವದ ಸರ್ಕಾರ ರಚನೆ ಮಾಡಬೇಕು ಎಂದು ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಹೇಳಿದ್ದಾರೆ.
ಶರದ್ ಪವಾರ್ 81ನೇ ಜನ್ಮನದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಏಳುವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದಾರೆ. ಆದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಧಾನಿ ಅಭ್ಯರ್ಥಿ ಯಾರು? ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಅಲ್ಲಿ ಯಾರಿದ್ದಾರೆ? ಎಂದು ಪ್ರಶ್ನಿಸಿದರು.
Mumbai | In the last 7 years, questions were raised like–Is there any alternative to PM Modi? Who will be an alternative to BJP? If Shiv Sena, Congress & NCP can form a govt under the leadership of (NCP Chief) Sharad Pawar in Maharashtra…: NCP leader Nawab Malik (12.12) pic.twitter.com/MJnArK2Nl3
— ANI (@ANI) December 12, 2021
ಇನ್ನು ಇದೇ ಸಮಾರಂಭದಲ್ಲಿ ಭಾಗವಹಿಸಿದ್ದ ಶಿವಸೇನೆ ಸಂಸದ ಸಂಜಯ್ ರಾವತ್ ಕೂಡ ಎನ್ಸಿಪಿ ನಾಯಕ ಶರದ್ ಪವಾರ್ರನ್ನು ಹೊಗಳಿದ್ದಾರೆ. ಶರದ್ ಪವಾರ್ ಬಿಜೆಪಿಯನ್ನು ತುಂಬ ಚೆನ್ನಾಗಿ ಅರಿತುಕೊಂಡವರು. ಬಿಜೆಪಿ ಈ ದೇಶದ ಒಗ್ಗಟ್ಟನ್ನು ಎಂದಿಗೂ ಬಯಸುವುದಿಲ್ಲ ಎಂದು ಕಳೆದ 25ವರ್ಷಗಳ ಹಿಂದೆಯೇ ಅವರು ಹೇಳಿದ್ದಾರೆ. ಆದರೆ ನಮಗೆ ಈ ಸತ್ಯ 2019ರಲ್ಲಿ ಅರ್ಥವಾಯಿತು. ಬಿಜೆಪಿಯನ್ನು ಅರ್ಥ ಮಾಡಿಕೊಳ್ಳಲು ಶಿವಸೇನೆಗೆ ತುಂಬ ದಿನ ಬೇಕಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ನಂತರ ಇನ್ನೊಂದು ಸಂಬಂಧದ ನಿರೀಕ್ಷೆಯಲ್ಲಿದ್ದೀರಾ? ಈ ಸಲಹೆಗಳು ನಿಮಗಾಗಿ
Published On - 8:14 am, Mon, 13 December 21