AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕಪ್ ನಂತರ ಇನ್ನೊಂದು ಸಂಬಂಧದ ನಿರೀಕ್ಷೆಯಲ್ಲಿದ್ದೀರಾ? ಈ ಸಲಹೆಗಳು ನಿಮಗಾಗಿ

ಹಿಂದೆ ನಡೆದ ಘಟನೆಗಳು, ವ್ಯಕ್ತಿಯೊಂದಿಗಿನ ಒಡನಾಟ ಎಲ್ಲವನ್ನು ಮರೆತು ಮತ್ತೊಬ್ಬರೊಂದಿಗೆ ಜೀವನ ಮುಂದುವರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ಮುಂದುವರಿಯಬಹುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಸೂಕ್ತ ಸಲಹೆ ಇಲ್ಲಿದೆ ಗಮನಿಸಿ.

ಬ್ರೇಕಪ್ ನಂತರ ಇನ್ನೊಂದು ಸಂಬಂಧದ ನಿರೀಕ್ಷೆಯಲ್ಲಿದ್ದೀರಾ? ಈ ಸಲಹೆಗಳು ನಿಮಗಾಗಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 13, 2021 | 8:00 AM

Share

ಜೀವನದಲ್ಲಿ ಅನೇಕ ಬಾರಿ ನಾವು ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಅಥವಾ ಅಂತಹ ಕೆಲವು ಸಂದರ್ಭಗಳು ಉದ್ಭವಿಸುತ್ತವೆ. ಇದರಿಂದಾಗಿ ನಾವು ಪ್ರೀತಿಸುವ ವ್ಯಕ್ತಿಯಿಂದಲೇ ದೂರವಾಗಬೇಕಾಗುತ್ತದೆ. ಇದಕ್ಕೆ ಇತ್ತೀಚೆಗೆ ಬ್ರೇಕಪ್ ಎಂಬ ನಾಮಫಲಕವನ್ನು ನೀಡಲಾಗುತ್ತದೆ. ಹಾಗಿದ್ದರೆ ಒಮ್ಮೆ ಬ್ರೇಕಪ್ (Love breakup) ಆದ ಮೇಲೆ ಅವರನ್ನೇ ನೆನೆದು ಕೊರಗಬೇಕೆ ಅಥವಾ ಸರಿಯಾದ ಸಂಗಾತಿಯ ಆಯ್ಕೆಯಲ್ಲಿ ಮತ್ತೆ ಮುಂದುವರಿಯಬೇಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹೀಗಾಗಿ ಮುಂದಿನ ಜೀವನ ಸುಖಕರವಾಗಿರಲು ಹಳೆಯ ಘಟನೆಗಳನ್ನು ಮರೆತು ಮುನ್ನಡೆಯುವುದು ಸೂಕ್ತ. ಹಿಂದೆ ನಡೆದ ಘಟನೆಗಳು, ವ್ಯಕ್ತಿಯೊಂದಿಗಿನ ಒಡನಾಟ ಎಲ್ಲವನ್ನು ಮರೆತು ಮತ್ತೊಬ್ಬರೊಂದಿಗೆ ಜೀವನ ಮುಂದುವರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ಮುಂದುವರಿಯಬಹುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಸೂಕ್ತ ಸಲಹೆ ಇಲ್ಲಿದೆ ಗಮನಿಸಿ.

1. ಕ್ಷಮಿಸುವ ಗುಣ ಎದುರಿಗಿರುವವರು ಮೋಸ ಮಾಡಿದ್ದರೆ ಆ ಮೋಸದ ಬಗ್ಗೆ ಯೋಚಿಸಿದಾಗಲೆಲ್ಲ ನಿಮಗೆ ಹೆಚ್ಚು ನೋವಾಗುತ್ತದೆ. ನೀವು ಅವರನ್ನು ನಿಜವಾಗಿಯೂ ಪ್ರೀತಿಸಿದ್ದರೆ ಅವರ ತಪ್ಪನ್ನು ಕ್ಷಮಿಸಿ. ನಂತರ ಆ ವ್ಯಕ್ತಿಯು ನಿಮಗೆ ಯೋಗ್ಯನಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಜೀವನದಲ್ಲಿ ನೀವು ಅವನಿಗಿಂತ ಅಥವಾ ಅವಳಿಗಿಂತ ಉತ್ತಮರು. ಮೋಸ ಮಾಡುವುದು ಅವರ ಸ್ವಭಾವ, ನಿಮ್ಮದಲ್ಲ ಎಂದು ಭಾವಿಸಿ. ಕ್ಷಮಿಸಿದ ನಂತರ ಮನಸ್ಸಿನಲ್ಲಿ ಯಾವುದೇ ರೀತಿಯ ವಿಷಾದವಿರುವುದಿಲ್ಲ ಮತ್ತು ಆ ವ್ಯಕ್ತಿಯನ್ನು ನಾವು ಮರೆಯುವುದು ಸುಲಭ. ಇದರ ಹೊರತಾಗಿ, ಯಾರಾದರೂ ನಿಮ್ಮಿಂದ ಯಾವುದೇ ಸಂದರ್ಭದಲ್ಲಿ ಬೇರ್ಪಟ್ಟಿದ್ದರೂ, ಆಗ ಏನಾಯಿತೋ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂದು ನೀವೇ ಮನವರಿಕೆ ಮಾಡಿಕೊಳ್ಳಬೇಕು. ಇದರಿಂದ ಮಿಂಚಿ ಹೋದ ಕಾಲದ ಬಗ್ಗೆ ನೀವು ಯೋಚಿಸಿ ಸಮಯ ಹಾಳು ಮಾಡುತ್ತಿದ್ದೀರಾ ಎಂಬುವುದು ನಿಮಗೆ ಕ್ರಮೇಣ ಅರ್ಥವಾಗುತ್ತದೆ.

2. ನಿಮ್ಮನ್ನು ನೀವು ಪ್ರೀತಿಸಿ ನಾವು ಯಾರನ್ನಾದರೂ ಪ್ರೀತಿಸಿದಾಗ ನಾವು ಎಲ್ಲವನ್ನೂ ಅವರಿಗೆ ಅರ್ಪಿಸುತ್ತೇವೆ. ಆ ಮೂಲಕ ನಮ್ಮನ್ನು ನಾವು ಮರೆತುಬಿಡುತ್ತೇವೆ. ಇದು ಸಂಪೂರ್ಣವಾಗಿ ತಪ್ಪು. ನಿಮ್ಮನ್ನು ಮೊದಲು ಪ್ರೀತಿಸಲು ಕಲಿಯಿರಿ. ಜೀವನದಲ್ಲಿ ನಿಮಗೆ ಯಾವುದು ಮುಖ್ಯ ಎಂದು ತಿಳಿಯಲು ಪ್ರಯತ್ನಿಸಿ. ನಿಮಗೆ ಏನು ಬೇಕು? ನಿಮ್ಮ ಖುಷಿ ಯಾವುದರಲ್ಲಿದೆ ಎಂದು ಅರ್ಥ ಮಾಡಿಕೊಳ್ಳಿ

3. ಸ್ನೇಹಿತರೊಂದಿಗೆ ಅತಿಹೆಚ್ಚು ಬೆರೆಯಿರಿ ನೀವು ಬ್ರೇಕಪ್​ನಿಂದ ಹೊರಬರಲು ಸಾಧ್ಯವಾದಷ್ಟು ಜನರೊಂದಿಗೆ ಮಾತನಾಡಿ. ಇದು ನಿಮಗೆ ಸಾಕಷ್ಟು ನೆಮ್ಮದಿ ನೀಡುತ್ತದೆ. ಸ್ನೇಹಿತರನ್ನು ಭೇಟಿಯಾಗುವುದು ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸುತ್ತದೆ ಮತ್ತು ನೀವು ನಿಮ್ಮ ನೋವಿನಿಂದ ಹೊರಬರಲು ಸಹಾಯ ಮಾಡುವ ಎಲ್ಲಾ ರೀತಿಯ ಹೊಸ ಅನುಭವಗಳನ್ನು ಪಡೆಯುತ್ತೀರಿ. ನಿಮ್ಮ ಮನಸ್ಸು ಕೂಡ ವಿಚಲಿತವಾಗಿರುತ್ತದೆ.

4. ಡೇಟಿಂಗ್ ಮಾಡುವ ಮುನ್ನ ಎಚ್ಚರ ಒಬ್ಬರನ್ನು ಇಷ್ಟಪಟ್ಟ ಮೇಲೆ ಅವರ ಬಗ್ಗೆ ಇನ್ನಷ್ಟು ತಿಳಿಯಲು ಇತ್ತೀಚೆಗೆ ಡೇಟಿಂಗ್ ಹೋಗುವುದು ಹೊಸ ಟ್ರೆಂಡ್ ಆಗಿದೆ. ಹೀಗಾಗಿಯೇ ಡೇಟಿಂಗ್ ಹೋಗುವ ಮೊದಲು ಹೀಗೆ ಇರುತ್ತೇನೆ ಅಥವಾ ಹೀಗೆ ಮಾತನಾಡುತ್ತೇನೆ ಎಂಬ ನಿಯಮವನ್ನು ಮುಂಚಿತವಾಗಿ ಮಾಡಿಕೊಳ್ಳಬೇಡಿ. ಆದಷ್ಟು ಮುಕ್ತವಾಗಿರಿ.

ಇದನ್ನೂ ಓದಿ: ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ

Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ