AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊನ್ನೆ ತೀರಿಹೋದ ಮುಸ್ಲಿಂ ಬುದ್ಧಿಜೀವಿ ಮೌಲಾನಾ ವಾಹಿದುದ್ದೀನ್​ ಖಾನ್​ಗೆ ಇಂದು ಆರ್​ಎಸ್​​ಎಸ್​ ಶ್ರದ್ಧಾಂಜಲಿ, ಏಕೆ?

ಮೊನ್ನೆ ಏಪ್ರಿಲ್ 21 ರಂದು ಕೊರೊನಾಕ್ಕೆ ಬಲಿಯಾದ ಇಸ್ಲಾಮಿಕ್ ಬುದ್ಧಿಜೀವಿ, ಚಿಂತಕ ಎಲ್ಲಕ್ಕೂ ಮಿಗಿಲಾಗಿ ನಿಜವಾದ ಮಾನವತಾವಾದಿಯಾಗಿದ್ದ ಮೌಲಾನಾ ವಾಹಿದುದ್ದೀನ್ ಖಾನ್ ಅವರ ಸಾವು ಬಹಳ ಜನರ ಗಮನಕ್ಕೆ ಬರಲೇ ಇಲ್ಲ. ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವೀಟ್ ಮಾಡಿ ಶೃದ್ಧಾಂಜಲಿ ಅರ್ಪಿಸಿದ್ದನ್ನು ನೋಡಿದ ಕೆಲ ಹಿಂದುಗಳು ಇವರ ಬಗ್ಗೆ ಗೂಗಲ್​ನಲ್ಲಿ ಹುಡುಕಾಡಿದರೆ ಇನ್ನು ಕೆಲವರು ಇಂಗ್ಲೀಷ್ ದಿನ ಪತ್ರಿಕೆಗಳಲ್ಲಿ ಅವರ ಬಗ್ಗೆ ಬರೆದ ಲೇಖನ ಓದಿ ಕಣ್ಣು ತೇವ […]

ಮೊನ್ನೆ ತೀರಿಹೋದ ಮುಸ್ಲಿಂ ಬುದ್ಧಿಜೀವಿ ಮೌಲಾನಾ ವಾಹಿದುದ್ದೀನ್​ ಖಾನ್​ಗೆ ಇಂದು ಆರ್​ಎಸ್​​ಎಸ್​ ಶ್ರದ್ಧಾಂಜಲಿ, ಏಕೆ?
ಮೌಲಾನಾ ವಾಹಿದುದ್ದೀನ್​ ಖಾನ್​
Follow us
ಡಾ. ಭಾಸ್ಕರ ಹೆಗಡೆ
|

Updated on:Apr 23, 2021 | 6:41 PM

ಮೊನ್ನೆ ಏಪ್ರಿಲ್ 21 ರಂದು ಕೊರೊನಾಕ್ಕೆ ಬಲಿಯಾದ ಇಸ್ಲಾಮಿಕ್ ಬುದ್ಧಿಜೀವಿ, ಚಿಂತಕ ಎಲ್ಲಕ್ಕೂ ಮಿಗಿಲಾಗಿ ನಿಜವಾದ ಮಾನವತಾವಾದಿಯಾಗಿದ್ದ ಮೌಲಾನಾ ವಾಹಿದುದ್ದೀನ್ ಖಾನ್ ಅವರ ಸಾವು ಬಹಳ ಜನರ ಗಮನಕ್ಕೆ ಬರಲೇ ಇಲ್ಲ. ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವೀಟ್ ಮಾಡಿ ಶೃದ್ಧಾಂಜಲಿ ಅರ್ಪಿಸಿದ್ದನ್ನು ನೋಡಿದ ಕೆಲ ಹಿಂದುಗಳು ಇವರ ಬಗ್ಗೆ ಗೂಗಲ್​ನಲ್ಲಿ ಹುಡುಕಾಡಿದರೆ ಇನ್ನು ಕೆಲವರು ಇಂಗ್ಲೀಷ್ ದಿನ ಪತ್ರಿಕೆಗಳಲ್ಲಿ ಅವರ ಬಗ್ಗೆ ಬರೆದ ಲೇಖನ ಓದಿ ಕಣ್ಣು ತೇವ ಮಾಡಿಕೊಂಡು ಅರ್ಪಿಸಿ ಮನಸ್ಸಿನಲ್ಲಿಯೇ ಶೃದ್ಧಾಂಜಲಿ ಅರ್ಪಿಸಿದರು.

ಹೊಸಬಾಳೆ ಹೇಳಿದ್ದೇನು? ರಾಷ್ಟ್ರವೂ ನಿಜವಾದ ಇಸ್ಲಾಮಿಕ್ ಬುದ್ಧಿಜೀವಿಯೊಬ್ಬರನ್ನು ಕಳೆದುಕೊಂಡಿದೆ. ಧರ್ಮ (religion) ವನ್ನು ಸರಿಯಾಗಿ ಮತ್ತು ಸಮಂಜಸವಾಗಿ ವ್ಯಾಖ್ಯಾನಿಸಿ ಸಾಮರಸ್ಯ ಮತ್ತು ಭಾತೃತ್ವವನ್ನು ಸದಾ ಹರಡುತ್ತಿದ್ದ ಅವರಿಗೆ ಆರ್​ಎಸ್ಎಸ್​​ ತನ್ನ ಶೃದ್ಧಾಂಜಲಿಯನ್ನು ಅರ್ಪಿಸುತ್ತದೆ. ಆರ್​ಎಸ್​ಎಸ್​ ಅಧಿಕೃತ ಟ್ವಿಟರ್ ಖಾತೆ ಮೂಲಕ ಇದು ಬಂದಿದ್ದರಿಂದ ಆರ್​ಎಸ್​ಎಸ್​ ಮತ್ತು ಬಿಜೆಪಿಯ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ಈ ವರ್ಷದ ಜನೇವರಿ ತಿಂಗಳಿನಲ್ಲಿ 96 ವರ್ಷದ ಖಾನ್ ಕೇಂದ್ರ ಸರಕಾರ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು.

ಮುಸ್ಲಿಂ ವಿರೋಧಿ ಎಂದು ಬಿಂಬಿಸಲ್ಪಡುವ ಬಿಜೆಪಿ ಮತ್ತು ಆರ್​ಎಸ್​ಎಸ್​ಗೆ  ಖಾನ್ ಬಗ್ಗೆ ಪ್ರೀತಿ ಏಕೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ನೇರವಾಗಿ ಹೇಳಬೇಕೆಂದರೆ, ಬಾಬ್ರಿ ಮಸೀದಿಯ ಮೇಲಿನ ತಮ್ಮ ಹಕ್ಕನ್ನು ಮುಸ್ಲಿಂರು ಬಿಟ್ಟುಕೊಡಬೇಕೆಂದು ಹೇಳಿ ಬಹಳ ವಿವಾದಕ್ಕೆ ಈಡಾಗಿದ್ದರು. ಇದೇ ಕಾರಣಕ್ಕೆ ಅವರು ಆರ್​ಎಸ್​ಎಸ್​ಗೆ ಹತ್ತಿರವಾಗಿದ್ದಿರಬಹುದು.  ಅಷ್ಟೇ ಅಲ್ಲ, ಹಿಂದುಗಳು ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿ ಮೇಲಿನ ಹಠವನ್ನು ಬಡಬೇಕೆಂದೂ ಅವರು ವಾದಿಸಿದ್ದರು. ಪ್ರಾಯಶಃ, ಮುಸ್ಲಿಂ ಬುದ್ಧಿ ಜೀವಿಯಾಗಿ, ಪಿ.ಸಿ. ಶಾಬಾದಿಮಠ ಇಂಗ್ಲೀಷ್-ಕನ್ನಡ ಕಿಸೆ ಪದಕೋಶದ ಆಕಾರದಲ್ಲಿ ಕುರಾನ್​ನ್ನು ಭಾರತೀಯ  ಭಾಷೆಗಳಲ್ಲಿ ಅಚ್ಚು ಹಾಕಿ ಲಕ್ಷಂತರ ಜನರಿಗೆ ಹಂಚಿದ ಮೌಲಾನಾ ಅವರ ಈ ಕೆಲಸವನ್ನು ತುಂಬಾ ಜನ ಮರೆತು ಬಿಟ್ಟಿರಬಹುದು.

ಖಾನ್ ವೈಶಿಷ್ಟ್ಯವೇನು? ಆಗಾಗ್ಗೆ ವಿವಾದಾಸ್ಪದ ಹೇಳಿಕೆ ನೀಡುತ್ತಿದ್ದ ಅವರು ಶಾಂತಿಗಾಗಿ ತಹತಹಿಸುತ್ತಿದ್ದರು ಅದಕ್ಕೆ ಸಂಪೂರ್ಣ ಬದ್ಧವಾಗಿದ್ದರು. ಆಜಮ್ಗಡ್ದಲ್ಲಿ ಹುಟ್ಟಿ ಮದರಸಾದಲ್ಲಿ ಶಿಕ್ಷಣ ಪೂರೈಸಿ ತಮ್ಮ ಕೆಲಸ ಪ್ರಾರಂಭಿಸಿದ್ದ ಅವರು ಗಾಂಧಿಜಿಯ ಅಹಿಂಸೆ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು. ದೇಶದ ಪ್ರಗತಿಗೆ, ಸಮಾಜದಲ್ಲಿ ವಿಜ್ಞಾನ ಮತ್ತು ವೈಚಾರಿಕತೆ ಆಳವಾಗಿ ಬೇರೂರಿರಬೇಕೆಂದು ನಂಬಿದ್ದರು. ಇದೇ ಹೊತ್ತಿನಲ್ಲಿ ವೈವಿಧ್ಯತೆಯನ್ನು ಇಸ್ಲಾಂ ಧರ್ಮದ ಅಧ್ಯಯನಕ್ಕೆ ಬೆಸೆಯಲು ಪ್ರಯತ್ನಸಿದ್ದರು. ಅವರಿಗೆ ಶಾಂತಿಯನ್ನು ಬೇಷರತ್ತಾಗಿ ಅನುಸರಿಸಬೇಕಾಗಿತ್ತು. ಶಾಂತಿ ಸ್ಥಾಪನೆಯಾದ ನಂತರವೇ ಅದು ಇತರ ಗುರಿಗಳನ್ನು ಸಾಧಿಸುವ ಅವಕಾಶಗಳು ತೆರೆಯುತ್ತವೆ ಎಂಬುದನ್ನು ಅವರು ಆಲವಾಗಿ ನಂಬಿದ್ದರು. ಅವರು ಸ್ಥಾಪಿಸಿದ ಶಾಂತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವು ತನ್ನ ಸದಸ್ಯರನ್ನು ಶಾಂತಿಯ ರಾಯಭಾರಿಗಳಾಗುವಂತೆ ಪ್ರಾಮಾಣಿಕವಾಗಿ ಪ್ರೋತ್ಸಾಹಿಸಿತು. ಬಾಬರಿ ಮಸೀದಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ ನಂತರ ಮೌಲಾನಾ ವಿವಾದಕ್ಕೆ ಸಿಲುಕಿದರು. ಈ ಸಮಸ್ಯೆಗೆ ಪರಿಹಾರವೆಂದರೆ ಮಸೀದಿಯ ಸ್ಥಳಾಂತರ ಎಂದು ಅವರು ಮೊದಲೇ ವಾದಿಸಿದ್ದರು. ಅವರಿಗೆ ಹನಿಫಿ ಸ್ಕೂಲ್ ಆಫ್ ನ್ಯಾಯಶಾಸ್ತ್ರವು ದೊಡ್ಡದಾಗಿತ್ತು. ಇಡೀ ವಿಶ್ವವೇ ಒಂದು ಮಸೀದಿ, ಪ್ರಾರ್ಥನೆಗೆ ಜಾಗ ಹುಡುಕಬೇಕಿಲ್ಲ ಎಂಬ ಅವರ ವಾದವನ್ನು ತುಂಬಾ ಜನ ಒಪ್ಪಿಕೊಂಡಿರಲಿಲ್ಲ.

ಇದನ್ನೂ ಓದಿ: 

ಚಿಕ್ಕಬಳ್ಳಾಪುರದಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆ; ಶ್ರೀರಾಮನವಮಿ ಪ್ರಯುಕ್ತ ಆಂಜನೇಯ ಹಾಗೂ ಬಾಬಯ್ಯನಿಗೆ ವಿಶೇಷ ಪೂಜೆ

ಪ್ರಧಾನಿ ಮೋದಿ ಕಿವಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಹೇಳಿದ್ದೇನು? ಕುತೂಹಲ ಸೃಷ್ಟಿಸಿದ ಫೋಟೋ.. ಓವೈಸಿ ಊಹೆಯೂ ಸುಳ್ಳಾಯ್ತ !

(Islamic scholar Maulana Wahiduddin Khan dies to Covid RSS pay tributes to him today)

Published On - 6:22 pm, Fri, 23 April 21

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ