ನಮ್ಮ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟ ಉಗ್ರರ ಕೃತ್ಯ -ಇಸ್ರೇಲ್‌ ಅಧಿಕಾರಿ

ತಮ್ಮ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಉಗ್ರರ ಕೃತ್ಯ ಎಂದು ಇಸ್ರೇಲ್‌ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಜೊತೆಗೆ, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವೆಂದೂ ಸ್ಪಷ್ಟನೆ ಕೊಟ್ಟಿದ್ದಾರೆ.

ನಮ್ಮ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟ ಉಗ್ರರ ಕೃತ್ಯ -ಇಸ್ರೇಲ್‌ ಅಧಿಕಾರಿ
‘ನಮ್ಮ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟ ಉಗ್ರರ ಕೃತ್ಯ’
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jan 30, 2021 | 4:54 PM

ದೆಹಲಿ: ತಮ್ಮ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಉಗ್ರರ ಕೃತ್ಯ ಎಂದು ಇಸ್ರೇಲ್‌ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಜೊತೆಗೆ, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವೆಂದೂ ಸ್ಪಷ್ಟನೆ ಕೊಟ್ಟಿದ್ದಾರೆ.

ಸದ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶೇಷ ತನಿಖಾ ತಂಡದಿಂದ FIR ದಾಖಲಾಗಿದೆ. UAPA ಮತ್ತು IPC ಸೆಕ್ಷನ್‌ 120Bರ ಅಡಿ FIR ದಾಖಲಾಗಿದೆ.

ಅಂದ ಹಾಗೆ, ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ನಡೆದಿರುವ ಈ ಕೃತ್ಯ ಇದೇ ಮೊದಲಲ್ಲ. 2012ರಲ್ಲೂ ಇಸ್ರೇಲ್​ ಕಚೇರಿಯನ್ನ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. 2012ರ ಫೆಬ್ರವರಿ 12ರಂದು ಇದೇ ರೀತಿ ಬಾಂಬ್ ಸ್ಫೋಟ ಸಂಭವಿಸಿತ್ತು.

ಇಸ್ರೇಲ್ ರಾಯಭಾರ ಕಚೇರಿ ಸಿಬ್ಬಂದಿಯ ಕಾರಿಗೆ ಬಾಂಬ್ ಅಂಟಿಸಿ ಅಪರಿಚಿತರು ಸ್ಫೋಟಿಸಿದ್ದರು. ರಾಯಭಾರ ಕಚೇರಿಯಿರುವ ಇದೇ ಔರಂಗ್​ಜೇಬ್ ರಸ್ತೆಯಲ್ಲಿ 2012ರಲ್ಲಿ ಸ್ಫೋಟ ಸಂಭವಿಸಿತ್ತು. ಆಗ ಇಸ್ರೇಲ್ ರಾಯಭಾರ ಕಚೇರಿ ಕಾರು ಬೆಂಕಿಗಾಹುತಿಯಾಗಿತ್ತು. ಇದೀಗ, ಮತ್ತೆ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು ಇಸ್ರೇಲ್​ನ ವೈರಿ ರಾಷ್ಟ್ರಗಳು ಬಾಂಬ್​ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ.

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ: ಗಣರಾಜ್ಯೋತ್ಸವದ ಬೀಟಿಂಗ್​ ರೀಟ್ರೀಟ್​ ಕಾರ್ಯಕ್ರಮದ ಸಮೀಪವೇ ನಡೆದ ಬ್ಲಾಸ್ಟ್​

ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ IED ಸ್ಫೋಟ: ವಾಹನದಲ್ಲಿ ಬಂದು ಬಾಂಬ್​ ಎಸೆದು ಹೋಗಿರುವ ಶಂಕೆ

Published On - 8:36 pm, Fri, 29 January 21