ಮತ್ತಷ್ಟು ತೀವ್ರಗೊಳ್ಳುಲಿದೆ ರೈತರ ಪ್ರತಿಭಟನೆ.. ಗಾಜೀಪುರ್ ಗಡಿಗೆ ಇಂದು ಬರಲಿದ್ದಾರೆ 5 ಸಾವಿರಕ್ಕೂ ಹೆಚ್ಚು ರೈತರು
ಗಾಜೀಪುರ್ ಗಡಿಗೆ ಇಂದು 5 ಸಾವಿರಕ್ಕೂ ಹೆಚ್ಚು ರೈತರು ಬರುವ ಸಾಧ್ಯತೆ ಇದೆ. ನಿನ್ನೆ ಮುಜಾಫುರ್ನಗರದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. ರಾಕೇಶ್ ಟಿಕಾಯತ್ ಬೆಂಬಲಕ್ಕೆ ಮಹಾಪಂಚಾಯತ್ ನಿರ್ಧರಿಸಿದೆ. 10 ಸಾವಿರಕ್ಕೂ ಹೆಚ್ಚು ರೈತರು ಮಹಾಪಂಚಾಯತ್ನಲ್ಲಿ ಸೇರಿದ್ದರು.
ದೆಹಲಿ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಹಿಂಸಾಚಾರದ ನೆಪದಲ್ಲಿ ರೈತರ ತೆರವಿಗೆ ಸರ್ಕಾರ ಮುಂದಾಗಿದೆ. ಆದ್ರೆ ಪ್ರತಿಭಟನಾ ಸ್ಥಳಕ್ಕೆ ಇಂದು ಮತ್ತಷ್ಟು ರೈತರು ಆಗಮಿಸಲಿದ್ದು ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ.
ಗಾಜೀಪುರ್ ಗಡಿಗೆ ಇಂದು 5 ಸಾವಿರಕ್ಕೂ ಹೆಚ್ಚು ರೈತರು ಬರುವ ಸಾಧ್ಯತೆ ಇದೆ. ನಿನ್ನೆ ಮುಜಾಫುರ್ನಗರದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. ರಾಕೇಶ್ ಟಿಕಾಯತ್ ಬೆಂಬಲಕ್ಕೆ ಮಹಾಪಂಚಾಯತ್ ನಿರ್ಧರಿಸಿದೆ. 10 ಸಾವಿರಕ್ಕೂ ಹೆಚ್ಚು ರೈತರು ಮಹಾಪಂಚಾಯತ್ನಲ್ಲಿ ಸೇರಿದ್ದರು. ರೈತರ ಹೋರಾಟಕ್ಕೆ ರಾಷ್ಟ್ರೀಯ ಲೋಕದಳದಿಂದಲೂ ಬೆಂಬಲ ಸಿಕ್ಕಿತ್ತು. ಸದ್ಯ ನಿನ್ನೆ ನಡೆದ ಘರ್ಷಣೆ ಬಳಿಕ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಟಿಕ್ರಿ, ಸಿಂಘು ಬಾರ್ಡರ್ ಪೊಲೀಸ್ ಕೋಟೆಯಂತಾಗಿದೆ. ಧರಣಿ ಸ್ಥಳದಲ್ಲಿ ಹೆಚ್ಚುವರಿಯಾಗಿ ಅರೆ ಸೇನಾಪಡೆ ನಿಯೋಜನೆ ಮಾಡಲಾಗಿದೆ. ಇಂದೂ ಕೂಡ ಗಾಜೀಪುರ್ ಗಡಿಗೆ 5 ಸಾವಿರಕ್ಕೂ ಹೆಚ್ಚು ರೈತರು ಬರುವ ಸಾಧ್ಯತೆ ಇದೆ.
ಒಂದೇ ದಿನದಲ್ಲಿ ತಮ್ಮ ನಿಲುವು ಬದಲಿಸಿದ ಅಣ್ಣಾ ಹಜಾರೆ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಎರಡು ದಿನಗಳ ಹಿಂದೆ ರೈತರಿಗಾಗಿ ಉಪವಾಸ ಕೂರುವುದಾಗಿ ಹೇಳಿದ್ದರು. ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ರು. ಆದ್ರೆ ಬಿಜೆಪಿ ನಾಯಕರು ಭೇಟಿ ಬಳಿಕ ಅಣ್ಣಾ ಹಜಾರೆ ಯು ಟರ್ನ್ ಹೊಡೆದಿದ್ದಾರೆ. ಒಂದೇ ದಿನದಲ್ಲಿ ತಮ್ಮ ನಿಲವು ಬದಲಿಸಿದ್ದು ನೂತನ ಕೃಷಿ ಮಸೂದೆಗಳಿಗೆ ಅಣ್ಣಾ ಹಜಾರೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ.
BJP ಮುಖಂಡರಿಂದ ಅಣ್ಣಾ ಹಜಾರೆ ಮನವೊಲಿಕೆ: ಉದ್ದೇಶಿತ ಪ್ರತಿಭಟನೆ ವಾಪಸ್ ಪಡೆದ ಸಾಮಾಜಿಕ ಹೋರಾಟಗಾರ