ತ್ರಿವರ್ಣ ಧ್ವಜ ಮತ್ತು ಆಜಾದಿಸ್ಯಾಟ್​​​​ ಉಪಗ್ರಹ ಹೊತ್ತು ಆಗಸ್ಟ್ 7ರಂದು ಬಾಹ್ಯಾಕಾಶಕ್ಕೆ ಹಾರಲಿದೆ ಇಸ್ರೋದ ಎಸ್ಎಸ್ಎಲ್​​ವಿ

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಎಸ್ಎಸ್ಎಲ್​​ವಿ ಆಜಾದಿಸ್ಯಾಟ್ ಎಂಬ ಉಪಗ್ರಹವನ್ನೂ ಹೊತ್ತೊಯ್ಯಲಿದೆ. ದೇಶದಾದ್ಯಂತವಿರುವ 75 ಗ್ರಾಮೀಣ ಸರ್ಕಾರಿ ಶಾಲೆಯಲ್ಲಿನ 750 ವಿದ್ಯಾರ್ಥಿನಿಯರು ನಿರ್ಮಿಸಿದ 75 ಪೇಲೋಡ್​​ನ್ನು ಆಜಾದಿ ಸ್ಯಾಟ್ ಹೊಂದಿದೆ.

ತ್ರಿವರ್ಣ ಧ್ವಜ ಮತ್ತು ಆಜಾದಿಸ್ಯಾಟ್​​​​ ಉಪಗ್ರಹ ಹೊತ್ತು ಆಗಸ್ಟ್ 7ರಂದು ಬಾಹ್ಯಾಕಾಶಕ್ಕೆ ಹಾರಲಿದೆ ಇಸ್ರೋದ ಎಸ್ಎಸ್ಎಲ್​​ವಿ
ಎಸ್ಎಸ್ಎಲ್​​ವಿ Image Credit source: ISRO
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 05, 2022 | 2:20 PM

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹೊತ್ತಲ್ಲಿ ಬಾಹ್ಯಾಕಾಶದಲ್ಲಿಯೂ ನಾವು ತಿರಂಗ ಹಾರಿಸಲಿದ್ದೇವೆ ಎಂದು 2018 ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದರು. ಬಾಹ್ಯಾಕಾಶದಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಆ ಕನಸು ನನಸಾಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಸ್ಟ್ 7ರಂದು ಅತ್ಯಂತ ಚಿಕ್ಕ ರಾಕೆಟ್,  ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (Small Satellite Launch Vehicle (SSLV) ಉಡ್ಡಯನ ಮಾಡಲಿದ್ದು ಇದು ಬಾಹ್ಯಾಕಾಶಕ್ಕೆ ರಾಷ್ಟ್ರಧ್ವಜವನ್ನು ಕೊಂಡೊಯ್ಯಲಿದೆ. ಆದಾಗ್ಯೂ, ರಾಷ್ಟ್ರಧ್ವಜವನ್ನು ಹೊತ್ತ ಗಗನ್​​ಯಾನ್​​ನಲ್ಲಿ ಮಾನವಸಹಿತ ಬಾಹ್ಯಾಕಾಶ ಮಿಷನ್ ಅನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದರೂ, ಆ ಯೋಜನೆ ವಿಳಂಬವಾಗಿದೆ. ಇಸ್ರೋದ ಎಸ್ಎಸ್ಎಲ್​​ವಿ ಸ್ವ ನಿರ್ಮಿತ ಉಪಗ್ರಹ ಮತ್ತು 500 ಕೆಜಿಗಿಂತ ಕಡಿಮೆ ತೂಕದಪ ಪೇಲೋಡ್​​ನ್ನು ಭೂಮಿಯ ಕೆಳಗಿನ ಕಕ್ಷೆಗೆ ಕೊಂಡೊಯ್ಯುವ ಸಾಧನೆ ಮಾಡುತ್ತಿದೆ. ಅಧಿಕೃತ ಉಡಾವಣೆ ಆಗಸ್ಟ್ 7 ರಂದು ಬೆಳಿಗ್ಗೆ 9:18 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ (Azaadi Ka Amrit Mahotsav) ಸಂದರ್ಭದಲ್ಲಿ ಎಸ್ಎಸ್ಎಲ್​​ವಿ ಆಜಾದಿಸ್ಯಾಟ್ (AzaadiSAT) ಎಂಬ ಉಪಗ್ರಹವನ್ನೂ ಹೊತ್ತೊಯ್ಯಲಿದೆ. ದೇಶದಾದ್ಯಂತವಿರುವ 75 ಗ್ರಾಮೀಣ ಸರ್ಕಾರಿ ಶಾಲೆಯಲ್ಲಿನ 750 ವಿದ್ಯಾರ್ಥಿನಿಯರು ನಿರ್ಮಿಸಿದ 75 ಪೇಲೋಡ್​​ನ್ನು ಆಜಾದಿ ಸ್ಯಾಟ್ ಹೊಂದಿದೆ. ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಮತ್ತು ಯುವತಿಯರಿಗೆ ಬಾಹ್ಯಾಕಾಶ ಸಂಶೋಧನೆಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಲು ಅವಕಾಶಗಳನ್ನು ಸೃಷ್ಟಿಸಲು ಈ ಯೋಜನೆಯನ್ನು ವಿಶೇಷವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ವರ್ಷಾಚರಣೆಗಾಗಿ ಸಿದ್ಧಪಡಿಸಲಾಗಿತ್ತು.

ಎಸ್ಎಸ್ಎಲ್ ಅಂದಾಜು 120 ಟನ್ ತೂಕ ಹೊಂದಿದ್ದು, ಸುಮಾರು 500 ಕೆಜಿಯಷ್ಟು ತೂಕವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಬಲ್ಲದು. 34 ಮೀಟರ್ ಎತ್ತರವಿರುವ ಈ ಲಾಂಚರ್ ಇಸ್ರೋದ ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಲಾಂಚರ್ ಎಂದು ಪರಿಗಣಿಸಲಾಗಿದೆ.

ಈ ಹೊಸ ಉಪಗ್ರಹವು ಗೇಮ್ ಚೇಂಜರ್ ಎಂದು ಹೇಳಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಇದು ಸಣ್ಣ ಉಪಗ್ರಹ ಉಡ್ಡಯನ ಮಾರುಕಟ್ಟೆಗೆ ಪ್ರವೇಶಿಸುವ ಭಾರತದ ಕನಸನ್ನು ನನಸಾಗಿಸುತ್ತದೆ.

ಅತ್ಯಂತ ಕಡಿಮೆ ಸಮಯದಲ್ಲಿ ಬೇಡಿಕೆಯ ಮೇಲೆ ಉಡಾವಣೆ ಮಾಡಬಹುದಾದ, ಕಡಿಮೆ ವೆಚ್ಚದ ರಾಕೆಟ್ ಅನ್ನು ದೊಡ್ಡ ಪ್ರಮಾಣದ ಉತ್ಪಾದನೆಗೆ ವಿನ್ಯಾಸಗೊಳಿಸಲಾಗಿದೆ. ಅದರ ಯಶಸ್ವಿ ಉಡಾವಣೆಯೊಂದಿಗೆ, ಎಸ್ಎಸ್ಎಲ್​​ವಿ ಬಾಹ್ಯಾಕಾಶ ವಲಯ ಮತ್ತು ಇತರ ಖಾಸಗಿ ಭಾರತೀಯ ಕಂಪನಿಗಳ ನಡುವೆ ವಿಶೇಷವಾಗಿ ಸಣ್ಣ ಉಪಗ್ರಹಗಳಿಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸಹಯೋಗವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಸ್ಪೇಸ್ ಕಿಡ್ಸ್ ಇಂಡಿಯಾ ಎಂಬ ವಿದ್ಯಾರ್ಥಿಗಳ ತಂಡವು ಈ ಪೇಲೋಡ್ ತಯಾರಿಸಿದೆ. ಈ ಪೇಲೋಡ್ ಯುಎಚ್ಎಫ್- ವಿಎಚ್ಎಫ್ ಟ್ರಾನ್ಸ್ ಪೋಂಡರ್ ಹೊಂದಿದ್ದು ಇವು ಹಾಮ್ ರೇಡಿಯೊ ಫ್ರೀಕ್ವೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಾಮ್ ರೇಡಿಯೊ ಫ್ರೀಕ್ವೆನ್ಸಿ ಅಮೆಚೂರ್ ಆಡಿಯೊ ಆಪರೇಟರ್​​ಗಳಿಗೆ ದನಿ ಮತ್ತು ಡೇಟಾ ವಿನಿಮಯ ಮಾಡಲು ಸಹಾಯ ಮಾಡುತ್ತದೆ. ಘನರೂಪದಲ್ಲಿರುವ ಪಿಐಎನ್ ಡಯೋಡ್ ಬೇಸ್ ರೇಡಿಯೇಷವ್ ಕೌಂಟರ್ ಕಕ್ಷೆಯ ಐಯೋನೈಸಿಂಗ್ ರೇಡಿಯೇಷನ್ ಅಳೆಯುತ್ತದೆ. ಇದರಲ್ಲಿ ದೂರ ವ್ಯಾಪ್ತಿಯ ಟ್ರಾನ್ಸ್ ಪೋಂಡರ್ ಮತ್ತು ಸೆಲ್ಫಿಕ್ಯಾಮೆರಾಇದೆ ಎಂದು ಇಸ್ರೋ ಹೇಳಿದೆ. ಸ್ಪೇಸ್ ಕಿಡ್ಸ್ ಇಂಡಿಯಾ ಅಭಿವೃದ್ಧಿ ಪಡಿಸಿದ ಗ್ರೌಂಡ್ ಸ್ಟೇಷನ್ ಸಿಸ್ಟಂ ಇದ್ದು ಇದು ಉಪಗ್ರಹದಿಂದ ಡೇಟಾವನ್ನು ಪಡೆಯಲು ಸಹಕರಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Fri, 5 August 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ