ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ

ಜಮ್ಮು-ಕಾಶ್ಮೀರದ ಶ್ರೀನಗರದ ಜನತೆ ಚಳಿಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಚಳಿಗೆ ಜಮ್ಮು-ಕಾಶ್ಮೀರದ ‘ದಾಲ್ ಲೇಕ್’ ಸಂಪೂರ್ಣ ಹೆಪ್ಪುಗಟ್ಟಿ ಹೋಗಿದೆ. ಇಡೀ ಕೆರೆ ಮಂಜು ಗಡ್ಡೆಯಂತೆ ಆಗಿದ್ದು, ಕಣಿವೆ ರಾಜ್ಯದಲ್ಲಿ ಸದ್ಯ ಎದುರಾಗಿರೋ ಪರಿಸ್ಥಿತಿಯನ್ನ ಬಿಂಬಿಸುತ್ತಿದೆ. 4 ಅಂತಸ್ತಿನ ಕಟ್ಟಡ ನೆಲಸಮ 4 ಅಂತಸ್ತಿನ ಕಟ್ಟಡವೊಂದನ್ನು ಇಂಧೋರ್​ ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ. ನಿಗದಿತ ಎತ್ತರಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಾರಣ ಇಂಧೋರ್ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇಂದೋರ್​ನ ಸಂತ ನಗರದಲ್ಲಿ ಈ ಕಟ್ಟಡವಿತ್ತು. ಪಾಲಿಕೆ ಕ್ರಮಕ್ಕೆ […]

ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ
ಸಾಧು ಶ್ರೀನಾಥ್​

Updated on: Dec 30, 2019 | 7:58 AM

ಜಮ್ಮು-ಕಾಶ್ಮೀರದ ಶ್ರೀನಗರದ ಜನತೆ ಚಳಿಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಚಳಿಗೆ ಜಮ್ಮು-ಕಾಶ್ಮೀರದ ‘ದಾಲ್ ಲೇಕ್’ ಸಂಪೂರ್ಣ ಹೆಪ್ಪುಗಟ್ಟಿ ಹೋಗಿದೆ. ಇಡೀ ಕೆರೆ ಮಂಜು ಗಡ್ಡೆಯಂತೆ ಆಗಿದ್ದು, ಕಣಿವೆ ರಾಜ್ಯದಲ್ಲಿ ಸದ್ಯ ಎದುರಾಗಿರೋ ಪರಿಸ್ಥಿತಿಯನ್ನ ಬಿಂಬಿಸುತ್ತಿದೆ.

4 ಅಂತಸ್ತಿನ ಕಟ್ಟಡ ನೆಲಸಮ
4 ಅಂತಸ್ತಿನ ಕಟ್ಟಡವೊಂದನ್ನು ಇಂಧೋರ್​ ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ. ನಿಗದಿತ ಎತ್ತರಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಾರಣ ಇಂಧೋರ್ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇಂದೋರ್​ನ ಸಂತ ನಗರದಲ್ಲಿ ಈ ಕಟ್ಟಡವಿತ್ತು. ಪಾಲಿಕೆ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಡುಗುತ್ತಿದೆ ‘ಉತ್ತರ ಭಾರತ’..!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚಳಿ ದಾಖಲಾಗಿದ್ದು, ಮೈಕೊರೆಯುವ ಚಳಿಯಿಂದ ಜನ ತತ್ತರಿಸಿದ್ದಾರೆ. ನಿನ್ನೆ ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 3.4ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಬೀದಿ ನಾಯಿಗಳ ಕಳ್ಳಸಾಗಣೆ
ತ್ರಿಪುರ-ಮಿಜೋರಾಂ ಗಡಿಯಲ್ಲಿ ಬೀದಿ ನಾಯಿಗಳ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 12 ನಾಯಿಗಳನ್ನು ಮಿಜೋರಾಂಗೆ ಕಳ್ಳಸಾಗಣೆ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮಿಜೋರಾಂನಲ್ಲಿ ನಾಯಿ ಮಾಂಸಕ್ಕೆ ಭಾರಿ ಬೇಡಿಕೆಯಿದ್ದು, ಇದೇ ಕಾರಣಕ್ಕೆ ಕಳ್ಳಸಾಗಾಣೆ ಮಾಡಲು ಯತ್ನಿಸಲಾಗಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us