ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರದ (Kupwara) ಮಚ್ಚಲ್ ಸೆಕ್ಟರ್ನಲ್ಲಿ ಸೇನಾ ವಾಹನ (Army Vehicle) ಆಳವಾದ ಕಂದಕಕ್ಕೆ ಜಾರಿ ಮೂವರು ಭಾರತೀಯ ಸೇನಾ (Indian Army) ಸಿಬ್ಬಂದಿ ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ. ದಟ್ಟ ಮಂಜಿನಿಂದಾಗಿ ಆಪರೇಷನ್ ಟಾಸ್ಕ್ನಲ್ಲಿದ್ದ ಈ ಮೂವರು ಯೋಧರು ಪ್ರಯಾಣಿಸುತ್ತಿದ್ದ ವಾಹನ ಆಯ ತಪ್ಪಿ ಕಣಿವೆಗೆ ಬಿದ್ದಿದೆ. ಈ ಮೂವರೂ ಡೋಗ್ರಾ ರೆಜಿಮೆಂಟ್ನ 14ನೇ ಬೆಟಾಲಿಯನ್ಗೆ ಸೇರಿದವರೆಂದು ತಿಳಿದುಬಂದಿದೆ.
ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಈ ಬಗ್ಗೆ ಸೇನಾಪಡೆ ಟ್ವೀಟ್ ಮೂಲಕ ಖಚಿತಪಡಿಸಿದೆ.
J&K | During a regular op task in the forward area in Machhal sector, a party of 1 JCO(Junior Commissioned Officer)& 2 OR(Other ranks)slipped into a deep gorge, when snow on the track gave way. Mortal remains of all three bravehearts have been retrieved: Chinar Corps, Indian Army
— ANI (@ANI) January 11, 2023
“ಫಾರ್ವರ್ಡ್ ಏರಿಯಾದಲ್ಲಿ ಆಪರೇಷನ್ ಕಾರ್ಯದ ಸಂದರ್ಭದಲ್ಲಿ ಈ ವಾಹನ ಕಿರಿಯ ಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ. ಒಬ್ಬರು ಜೆಸಿಒ ಮತ್ತು ಇಬ್ಬರು ಓಆರ್ ಇದ್ದ ವಾಹನ ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಹಿಮ ತುಂಬಿಕೊಂಡಿತ್ತು. ಇದರಿಂದ ವಾಹನ ಆಳವಾದ ಕಮರಿಗೆ ಜಾರಿತು. ಎಲ್ಲಾ ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ” ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.
Published On - 10:18 am, Wed, 11 January 23