ಪರಪ್ಪನ ಅಗ್ರಹಾರ ಜೈಲಿನಿಂದ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆ

ಐದು ವರ್ಷಗಳ ಜೈಲು ಶಿಕ್ಷಯೆ ಬಳಿಕ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆ
ಜೈಲಿನಿಂದ ಬಿಡುಗಡೆಯಾದ ಸುಧಾಕರನ್
Edited By: sandhya thejappa

Updated on: Oct 16, 2021 | 12:21 PM

ಆನೇಕಲ್: ಸುಮಾರು ಐದು ವರ್ಷಗಳ ಬಳಿಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalitha) ದತ್ತುಪುತ್ರ ಸುಧಾಕರನ್ (Sudhakaran) ಇಂದು (ಅ.16) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಐದು ವರ್ಷಗಳ ಜೈಲು ಶಿಕ್ಷೆಯ ನಂತರ ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸುಧಾಕರನ್ ರಿಲೀಸ್​ ಆಗುತ್ತಿದ್ದಂತೆ ಬೆಂಬಲಿಗರು ಸುಧಾಕರನ್ ಪರವಾಗಿ ಘೋಷಣೆ ಕೂಗಿ ಬರಮಾಡಿಕೊಂಡಿದ್ದಾರೆ. ಇನ್ನು ಜೈಲಿನಿಂದ ಬಿಡುಗಡೆಗೊಂಡ ಸುಧಾಕರನ್ ಸ್ವಾಗತಕ್ಕಾಗಿ ಬೆಂಬಲಿಗರು ತಮಿಳುನಾಡಿನಿಂದ ಆಗಮಿಸಿದ್ದರು.

ಚಿನ್ನಮ್ಮ ಶಶಿಕಲಾ ನಟರಾಜನ್​ ಜೊತೆಯೇ ಸುಧಾಕರನ್ ಬಿಡುಗಡೆ ಆಗಬೇಕಿತ್ತು. ಆದರೆ ದಂಡ ಕಟ್ಟೋಕೆ‌ ಆಗದ ಹಿನ್ನೆಲೆ ಒಂದು ವರ್ಷ ಹೆಚ್ಚು ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು.

ಅಕ್ರಮ ಆಸ್ತಿ ಸಂಪಾದಿಸದ್ದ ಆರೋಪದ ಮೇಲೆ ಶಶಿಕಲಾ ನಟರಾಜನ್​ಗೆ ಜೈಲು ವಾಸ ನೀಡಲಾಗಿತ್ತು. ಸುಮಾರು ನಾಲ್ಕು ವರ್ಷಗಳ ನಂತರ ಅಂದರೆ ಇದೇ ವರ್ಷ ಜನವರಿ 27ಕ್ಕೆ ಇವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿತ್ತು. ಶಶಿಕಲಾ ರಿಲೀಸ್ ಆದ ದಿನವೇ ಜಯಲಲಿತಾ ದತ್ತುಪುತ್ರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ ದಂಡ ಕಟ್ಟದ ಕಾರಣ ಬಿಡುಗಡೆಯಾಗಿರಲಿಲ್ಲ.

ಇನ್ನು ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿತ್ತು. 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಫೆಬ್ರವರಿ 10ಕ್ಕೆ ಸುಧಾಕರನ್ ಆಸ್ತಿಗೆ  ಮುಟ್ಟುಗೋಲು ಹಾಕಿತ್ತು.

ಇದನ್ನೂ ಓದಿ

ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಭಾರಿ ಮಳೆಗೆ ವಿಪ್ರೊ ಕಂಪನಿಯ ಕಾಂಪೌಂಡ್ ಕುಸಿತ!

Published On - 11:59 am, Sat, 16 October 21

TV9 Web

TV9 Kannada

Read More
Loading...
Unable to load recommendations.
Follow Us