ಜಾರ್ಖಂಡ್: ಜಾರ್ಖಂಡ್ ರಾಜ್ಯದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ‘ಕರ್ಮ ಪೂಜೆ’ ಕೂಡ ಒಂದು. ಇಲ್ಲಿನ ಬುಡಕಟ್ಟು ಜನಾಂಗದ ಪ್ರಸಿದ್ಧ ಹಬ್ಬವಾದ ಕರ್ಮ ಪೂಜೆ ವೇಳೆ ನೀರಿನ ಹೊಂಡದಲ್ಲಿ ಮುಳುಗಿ ಏಳುವಾಗ 7 ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಾರ್ಖಂಡ್ನ ಲತೇಹಾರ್ ಜಿಲ್ಲೆಯಲ್ಲಿ ಶನಿವಾರ ಈ ದುರಂತ ನಡೆದಿದೆ.
ಲತೇಹಾರ್ನ ಬಕ್ರು ಗ್ರಾಮದಲ್ಲಿ ಕರ್ಮ ಪೂಜೆ ಪ್ರಯುಕ್ತ ಹೊಂಡದಲ್ಲಿ ಮುಳುಗಿ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಹೋದ 7 ಬಾಲಕಿಯರು ಸಾವನ್ನಪ್ಪಿದ್ದಾರೆ. ಈ ಕರ್ಮ ಪೂಜೆ ಪ್ರಕೃತಿಯನ್ನು ಪೂಜಿಸುವ ಹಬ್ಬವಾಗಿದ್ದು, ಬುಡಕಟ್ಟು ಸಮುದಾಯಕ್ಕೆ ವಿಶೇಷವಾದುದಾಗಿದೆ. ಈ ವೇಳೆ ಇನ್ನೂ ಕೆಲವರು ಮುಳುಗಿದ್ದು, ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡಗಳು ಹಲವರನ್ನು ರಕ್ಷಿಸಿವೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, 12ರಿಂದ 20 ವರ್ಷದೊಳಗಿನ 7 ಯುವತಿಯರು ಸಾವನ್ನಪ್ಪಿದ್ದಾರೆ.
ಈ ಘಟನೆ ಕುರಿತು ತನಿಖೆ ನಡೆಸುವಂತೆ ಜಿಲ್ಲೆಯ ಉಪ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ 7 ಜನರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದರು. ಈ ಘಟನೆಯ ಕುರಿತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
Shocked by the loss of young lives due to drowning in Latehar district, Jharkhand. In this hour of sadness, condolences to the bereaved families: PM @narendramodi
— PMO India (@PMOIndia) September 18, 2021
ರಕ್ಷಣಾ ಕಾರ್ಯಾಚರಣೆಗೆ ತೆರಳಿದಾಗ ಸ್ಥಳದಲ್ಲೇ 4 ಬಾಲಕಿಯರು ಸಾವನ್ನಪ್ಪಿದ್ದರು. ಉಳಿದವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು. ಸಾವನಪ್ಪಿದ ಯುವತಿಯರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.
ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಾರ್ಖಂಡ್ನಲ್ಲಿ ನಡೆದ ಕರ್ಮ ಪೂಜೆಯವಿಸರ್ಜನೆ ವೇಳೆ 7 ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವಿಷಯ ಕೇಳಿ ಆಘಾತವಾಯಿತು. ಕೊನೆಯುಸಿರೆಳೆದ ಯುವತಿಯರ ಕುಟುಂಬಸ್ಥರಿಗೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Punjab Congress Crisis: ಪಂಜಾಬ್ ಹೊಸ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ಸೋನಿಯಾ ಗಾಂಧಿ ಹೆಗಲಿಗೆ
ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್ಗೆ ಪ್ರತ್ಯೇಕ ಕೊಠಡಿ ವಿವಾದ; ಜೈ ಶ್ರೀರಾಮ್ ಘೋಷಣೆ ಕೂಗಿ ಬಿಜೆಪಿ ಪ್ರತಿಭಟನೆ
(Jharkhand 7 girls drown in pond during Karma Puja immersion PM Narendra Modi, President Ramnath Kovind condole)
Published On - 7:30 am, Sun, 19 September 21