Hemant Soren: ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಹೇಮಂತ್ ಸೊರೇನ್

ರಾಜ್ಯ ರಾಜಧಾನಿಯಲ್ಲಿ ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆರೋಪದಲ್ಲಿ ಹೇಮಂತ್ ಸೊರೇನ್ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಸಿಎಂ ಸ್ಥಾನದಲ್ಲಿದ್ದ ಚಂಪೈ ಸೊರೇನ್ ರಾಜೀನಾಮೆ ನೀಡಿದ್ದರು. ಆಮೇಲೆ ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಜನವರಿ 31 ರಂದು ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಫೆಡರಲ್ ಏಜೆನ್ಸಿಯಿಂದ ಬಂಧಿಸಲ್ಪಟ್ಟ ಎರಡನೇ ಮುಖ್ಯಮಂತ್ರಿ ಆಗಿದ್ದಾರೆ ಸೊರೇನ್.

Hemant Soren: ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಹೇಮಂತ್ ಸೊರೇನ್
ಹೇಮಂತ್ ಸೊರೇನ್
Follow us
|

Updated on:Jul 08, 2024 | 2:15 PM

ರಾಂಚಿ ಜುಲೈ 08: ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಇಂದು (ಸೋಮವಾರ) 45 ಶಾಸಕರ ಬಹುಮತದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ (trust vote) ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಹೇಮಂತ್ ಸೊರೇನ್ ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಪೊರೆಯಹತ್ ಶಾಸಕ ಪ್ರದೀಪ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ಮೈತ್ರಿಕೂಟವು ಪ್ರಸ್ತುತ ಜೆಎಂಎಂನಿಂದ 27, ಕಾಂಗ್ರೆಸ್‌ನಿಂದ 17 ಮತ್ತು ಆರ್‌ಜೆಡಿಯಿಂದ ಒಬ್ಬರು ಹೀಗೆ 45 ಶಾಸಕರನ್ನು ಹೊಂದಿದೆ. ಅದೇ ವೇಳೆ ಬಿಜೆಪಿ ಒಟ್ಟು 24 ಶಾಸಕರನ್ನು ಹೊಂದಿದೆ.

ಲೋಕಸಭೆ ಚುನಾವಣೆಯ ನಂತರ, ಜಾರ್ಖಂಡ್ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಯಿತು, ಕೆಲವರು ಸಂಸದರಾದರು, ಇತರರು ರಾಜೀನಾಮೆ ನೀಡಿದರು ಅಥವಾ ಹೊರಹಾಕಲ್ಪಟ್ಟರು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲ 76 ಇದೆ. ಸದನದ ಒಟ್ಟು ಸಂಖ್ಯಾಬಲವೂ ಇಳಿಮುಖವಾಗಿದೆ.

ಚಂಪೈ ಸೊರೇನ್ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಜುಲೈ 4 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದರು. “ಇಂದು ಜುಲೈ 4. ಜನವರಿ 31 ರಂದು, ಅದೇ ಸ್ಥಳದಿಂದ, ನನ್ನ ವಿರುದ್ಧ ಪ್ರತಿಪಕ್ಷಗಳು ಹೇಗೆ ಪಿತೂರಿ ನಡೆಸಿವೆ ಎಂಬುದರ ಕುರಿತು ನಾನು ನಿಮಗೆಲ್ಲರಿಗೂ ಸಂದೇಶವನ್ನು ನೀಡಿದ್ದೇನೆ. ಅವರು ಯಶಸ್ವಿಯಾದರು. ಐದು ತಿಂಗಳ ಕಾಲ ಅವರು ನನ್ನನ್ನು ಜೈಲಿನೊಳಗೆ ಬೇರೆ ಬೇರೆ ರೀತಿಯಲ್ಲಿ ಇರಿಸಲು ಪ್ರಯತ್ನಿಸಿದರು. ನಾವು ಕಾನೂನು ಮಾರ್ಗವನ್ನು ಹಿಡಿದಿದ್ದೇವೆ ಮತ್ತು ಜನರು ನಮ್ಮನ್ನು ಬೆಂಬಲಿಸಿದರು ”ಎಂದು ಪ್ರಮಾಣ ವಚನ ಸ್ವೀಕರಿಸುವ ಮೊದಲು ಹೇಮಂತ್ ಸೊರೇನ್ ಹೇಳಿದ್ದರು.

ರಾಜ್ಯ ರಾಜಧಾನಿಯಲ್ಲಿ ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆರೋಪದಲ್ಲಿ ಹೇಮಂತ್ ಸೊರೇನ್ ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದು ಸಂಭವಿಸಿದೆ. ಜನವರಿ 31 ರಂದು ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಫೆಡರಲ್ ಏಜೆನ್ಸಿಯಿಂದ ಬಂಧಿಸಲ್ಪಟ್ಟ ಎರಡನೇ ಮುಖ್ಯಮಂತ್ರಿ ಆಗಿದ್ದಾರೆ ಸೊರೇನ್.

ಬಂಧನಕ್ಕೆ ಕೆಲವೇ ನಿಮಿಷಗಳ ಮೊದಲು, ಹೇಮಂತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಚಂಪೈ ಸೊರೇನ್ ಸಿಎಂ ಆದರು. ಹೇಮಂತ್ ಅವರ ನಿಷ್ಠಾವಂತ ಮತ್ತು ಜಾರ್ಖಂಡ್ ಮಾಜಿ ಸಿಎಂ ತಂದೆ ಶಿಬು ಸೊರೇನ್ ಅವರ ನಿಕಟವರ್ತಿ ಚಂಪೈ ಫೆಬ್ರವರಿ 2 ರಂದು ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ: ಸಂದೇಶಖಾಲಿ ಪ್ರಕರಣ: ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಬಂಗಾಳ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ

ಹೇಮಂತ್ ಸೊರೇನ್ ಜೈಲಿನಲ್ಲಿದ್ದಾಗ, ಅವರ ಪಕ್ಷ, ಜೆಎಂಎಂ ಮೂರು ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತು. 2019 ರಲ್ಲಿ, ಜೆಎಂಎಂ ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು 81 ಸದಸ್ಯರ ಸದನದಲ್ಲಿ ನಲವತ್ತೇಳು ಸ್ಥಾನಗಳೊಂದಿಗೆ ಬಹುಮತವನ್ನು ಪಡೆಯಿತು. ರಾಜ್ಯ ಚುನಾವಣೆಯಲ್ಲಿ ಜೆಎಂಎಂ 30 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಮತ್ತು ಆರ್ ಜೆಡಿ ಕ್ರಮವಾಗಿ 16 ಮತ್ತು ಒಂದು ಸ್ಥಾನವನ್ನು ಪಡೆದುಕೊಂಡವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Mon, 8 July 24

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ