ಜಾರ್ಖಂಡ್: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಸೀಲಿಂಗ್ ಸೀಳಿಕೊಂಡು ದೊಪ್ಪೆಂದು ಓಟಿ ಟೇಬಲ್ ಮೇಲೆ ಬಿದ್ದ ನಾಯಿ
ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ವೇಳೆ ಮೇಲಿಂದ ನಾಯಿಯೊಂದು ಬಿದ್ದು ಆತಂಕ ಸೃಷ್ಟಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಶಸ್ತ್ರ ಚಿಕಿತ್ಸೆ ವೇಳೆ ಸೀಲಿಂಗ್ ಸೀಳಿಕೊಂಡು ನಾಯಿ(Dog)ಯೊಂದು ಓಟಿ ಟೇಬಲ್ ಮೇಲೆ ಬಿದ್ದು ಗಾಬರಿ ಹುಟ್ಟಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಪುಣ್ಯ ರೋಗಿಯ ಮೈಮೇಲೆ ಬಿದ್ದಿಲ್ಲ ಎಂದು ವೈದ್ಯರು ತೃಪ್ತಿಪಟ್ಟುಕೊಂಡಿದ್ದಾರೆ. ಧನ್‌ಬಾದ್‌ನ ರೈಲ್ವೆ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ನರ್ಸ್ ಒಬ್ಬರು ಗಾಯಗೊಂಡಿದ್ದು ಶಸ್ತ್ರಚಿಕಿತ್ಸೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.

ಜಾರ್ಖಂಡ್, ಜುಲೈ 11: ಶಸ್ತ್ರ ಚಿಕಿತ್ಸೆ ವೇಳೆ ಸೀಲಿಂಗ್ ಸೀಳಿಕೊಂಡು ನಾಯಿ(Dog)ಯೊಂದು ಓಟಿ ಟೇಬಲ್ ಮೇಲೆ ಬಿದ್ದು ಗಾಬರಿ ಹುಟ್ಟಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಪುಣ್ಯ ರೋಗಿಯ ಮೈಮೇಲೆ ಬಿದ್ದಿಲ್ಲ ಎಂದು ವೈದ್ಯರು ತೃಪ್ತಿಪಟ್ಟುಕೊಂಡಿದ್ದಾರೆ. ಧನ್‌ಬಾದ್‌ನ ರೈಲ್ವೆ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ನರ್ಸ್ ಒಬ್ಬರು ಗಾಯಗೊಂಡಿದ್ದು ಶಸ್ತ್ರಚಿಕಿತ್ಸೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.
ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಮೂಳೆ ಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಡಾ. ಪಿ.ಆರ್ ಠಾಕೂರ್ ಶಸ್ತ್ರ ಚಿಕಿತ್ಸೆ ಮಾಡುವಾಗ ಇದ್ದಕ್ಕಿದ್ದಂತೆ ದೊಡ್ಡ ಶಬ್ದವೊಂದು ಕೇಳಿಬಂದಿತ್ತು. ಸೀಲಿಂಗ್ನಿಂದ ನಾಯಿಯೊಂದು ಓಟಿ ಟೇಬಲ್ ಮೇಲೆ ಬಿದ್ದಿತ್ತು. ಈ ಘಟನೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದ ನರ್ಸ್ ಗಾಯಗೊಂಡಿದ್ದು, ಶಸ್ತ್ರ ಚಿಕಿತ್ಸೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು.
ನರ್ಸ್ ಅಂಜಲಿಯ ಭುಜ ಹಾಗೂ ಕುತ್ತಿಗೆಗೆ ಗಾಯಗಳಾಗಿವೆ. ರೋಗಿಯನ್ನು ಬೇರೆವಾರ್ಡ್ಗೆ ಶಿಫ್ಟ್ ಮಾಡಲಾಯಿತು. ಗಾಯಗೊಂಡ ನರ್ಸ್‌ಗೆ ತುರ್ತು ಚಿಕಿತ್ಸೆ ನೀಡಲಾಯಿತು. ಈ ಘಟನೆಯಂದ ನರ್ಸ್, ವೈದ್ಯರು, ರೋಗಿ ಎಲ್ಲರೂ ಗಾಬರಿಗೊಂಡಿದ್ದಾರೆ.
ಎಂಜಿನಿಯರ್ ಈ ಬಗ್ಗೆ ಪರಿಶೀಲಿಸಿದಾಗ ವೆಂಟಿಲೇಷನ್ಗಾಗಿ ಬಿಟ್ಟಿದ್ದ ಜಾಗದಿಂದ ನಾಯಿಗಳು ಬಂದು ಸೀಲಿಂಗ್ ಮೇಲೆ ಆಶ್ರಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಾಯಿಯ ತೂಕ ತಡೆಯಲಾಗದೆ ಸೀಲಿಂಗ್ ಮುರಿದುಬಿದ್ದಿದೆ. ಆಪರೇಷನ್ ಥಿಯೇಟರ್ ಗೋಡೆಯ ಪಕ್ಕದಲ್ಲಿದ್ದ ಕಸದ ರಾಶಿಯ ಮೇಲೆ ನಾಯಿ ಹತ್ತಿ ಈ ಸೀಲಿಂಗ್ ಮೇಲೆ ಬಂದು ಮಲಗುತ್ತಿದ್ದವು. ಒಂದು ನಾಯಿ ಬಿದ್ದ ನಂತರವೂ, ಇತರ ನಾಯಿಗಳು ಬೊಗಳುವ ಶಬ್ದವು ಮೇಲೆ ಇನ್ನೂ ಕೇಳಿಬರುತ್ತಿತ್ತು.
ಮತ್ತಷ್ಟು ಓದಿ: ಕಾರು ಲಾಕ್ ಮಾಡಿ ದೇವಸ್ಥಾನದ ಪೂಜೆಗೆ ಹೋದ ಮಾಲೀಕ; ಉಸಿರುಗಟ್ಟಿ ಕಾರೊಳಗೆ ನಾಯಿ ಸಾವು
ಪೂರ್ವ ಮಧ್ಯ ರೈಲ್ವೆಯ ಧನ್ಬಾದ್ ವಿಭಾಗವು ತನ್ನ ವಜ್ರಮಹೋತ್ಸವ ಆಚರಣೆಗೆ ಮುಂದಾಗುತ್ತಿರುವಂತೆಯೇ, ಈ ಘಟನೆಯು ಈ ಕಟ್ಟಡದ ಶಿಥಿಲಾವಸ್ಥೆಯ ಬಗ್ಗೆ ಬೆರಳು ಮಾಡಿ ತೋರಿಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




