ಮದ್ಯ ಕುಡಿಸಿ, ಪ್ರಿಯಕರನ ಸಹಾಯದಿಂದ ಗಂಡನ ರುಂಡ ಕತ್ತರಿಸಿದ ಮಹಿಳೆ
ಪ್ರಿಯಕರನ ಜತೆ ಸೇರಿ ಮಹಿಳೆಯೊಬ್ಬಳು ಪತಿಯ ರುಂಡವನ್ನೇ ಕತ್ತರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲು ಪತಿಯ ಶಿರಚ್ಛೇದ ಮಾಡಿ ಬಳಿಕ ದೇಹವನ್ನು ವಿಲೇವಾರಿ ಮಾಡಿದ್ದಾಳೆ. ಆಕೆಯ ಪ್ರಿಯಕರ ಕೊಲೆಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇಂದೋರ್‌ನ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಪ್ರಕರಣಕ್ಕೆ ಹೋಲುವ ಪ್ರಕರಣ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬೆಳಕಿಗೆ ಬಂದಿದೆ.

ಉನ್ನಾವೋ, ಜುಲೈ 11: ಮಹಿಳೆಯೊಬ್ಬಳು ಗಂಡನಿಗೆ ಮದ್ಯ ಕುಡಿಸಿ ಪ್ರಿಯಕರನ ಸಹಾಯದಿಂದ ಪತಿಯ ರುಂಡವನ್ನು ಕತ್ತರಿಸಿ ಬರ್ಬರ ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಮೊದಲು ಪತಿಯ ಶಿರಚ್ಛೇದ ಮಾಡಿ ಬಳಿಕ ದೇಹವನ್ನು ವಿಲೇವಾರಿ ಮಾಡಿದ್ದಾಳೆ. ಆಕೆಯ ಪ್ರಿಯಕರ ಕೊಲೆಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಇಂದೋರ್‌ನ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಪ್ರಕರಣಕ್ಕೆ ಹೋಲುವ ಪ್ರಕರಣ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬೆಳಕಿಗೆ ಬಂದಿದೆ. ಸೋನಮ್ ಮದುವೆಯಾಗಿ ಕೆಲವೇ ದಿನದಲ್ಲಿ ಪತಿಯನ್ನು ಹನಿಮೂನ್ಗೆಂದು ಕರೆದೊಯ್ದು ಅಲ್ಲಿ ಪ್ರಿಯಕರನಿಂದ ಹತ್ಯೆ ಮಾಡಿಸಿದ್ದಳು.
ಉನ್ನಾವೋ ಘಟನೆಯಲ್ಲಿ ಮಹಿಳೆಯ ಪ್ರಿಯಕರ ಇತ್ತೀಚೆಗೆ ವಿದೇಶದಿಂದ ಹಿಂದಿರುಗಿದ್ದ. ಆತ ತನ್ನ ಸ್ನೇಹಿತ ಮತ್ತು ಮಹಿಳೆಯೊಂದಿಗೆ ಸೇರಿ ಈ ಕೊಲೆಯನ್ನು ಮಾಡಿದ್ದಾನೆ. ಉನ್ನಾವೋದ ಬದರ್ಕಾ ಪ್ರದೇಶದ ತುರ್ಕಿಹಾ ಬದರ್ಕಾ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇಮ್ರಾನ್ ಎಂಬ ವ್ಯಕ್ತಿಯ ಪತ್ನಿ ಶೀಬಾ ತನ್ನ ಪ್ರಿಯಕರ ಫರ್ಮಾನ್ ಜೊತೆ ಸೇರಿ ಆತನನ್ನು ಕೊಂದಿದ್ದಾಳೆ.
ಮತ್ತಷ್ಟು ಓದಿ: ಮಗು ತನ್ನದಲ್ಲವೆಂಬ ಅನುಮಾನ ಪ್ರೇಯಸಿ, ಮಗು ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ
ಶೀಬಾ ಕಳೆದ ಮೂರು ವರ್ಷಗಳಿಂದ ಫರ್ಮಾನ್ ಜೊತೆ ಸಂಬಂಧ ಹೊಂದಿದ್ದರು. ಫರ್ಮಾನ್ ಕೇವಲ 25 ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ತನ್ನ ಸ್ನೇಹಿತ ರಫೀಕ್ ಜೊತೆ ಮರಳಿದ್ದ.
ಇಮ್ರಾನ್ ಮದ್ಯದ ಚಟ ಹೊಂದಿದ್ದ. ಪ್ರತಿದಿನ ಕುಡಿದು ಮನೆಗೆ ಬಂದು ಮನೆಯಲ್ಲಿ ಶೀಬಾ ಜೊತೆ ಜಗಳವಾಡುತ್ತಿದ್ದ. ಇ-ರಿಕ್ಷಾ ಓಡಿಸಿ ಕುಟುಂಬವನ್ನು ಸಲಹುತ್ತಿದ್ದ. ಆದರೆ ಬರುವ ಅಲ್ಪ ಹಣದಲ್ಲಿ ಶೀಬಾಳ ಬೇಕು ಬೇಡಗಳನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಫರ್ಮಾನ್ ಸೌದಿಯಿಂದ ಹಿಂತಿರುಗಿದ ನಂತರ, ಅವನು ಶೀಬಾಳನ್ನು ಭೇಟಿಯಾಗಿದ್ದ. ಇದು ಇಮ್ರಾನ್ಗೂ ತಿಳಿಯಿತು.
ಇಮ್ರಾನ್ ಶೀಬಾಳನ್ನು ಹೊಡೆದು ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದ. ಶೀಬಾ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಅದಕ್ಕೆ ಫರ್ಮಾನ್ ಸ್ನೇಹಿತ ರಫೀಕ್ ಸಹಾಯ ಮಾಡಿದ್ದ.
ಇಮ್ರಾನ್‌ಗೆ ಮದ್ಯ ಕುಡಿಸಿ ಬೈಕ್‌ನಲ್ಲಿ ಕರೆದುಕೊಂಡು ಹೋದರು.ಕುತ್ತಿಗೆಯನ್ನು ತಲೆಯಿಂದ ಬೇರ್ಪಡಿಸಿ ಶವವನ್ನು ನಗರದ ಚರಂಡಿಯಲ್ಲಿ ಎಸೆದಿದ್ದರು. ಇದೀಗ ಅವರಿಬ್ಬರನ್ನು ಬಂಧಿಸಿ ಇಮ್ರಾನ್ ಶಿರ ಹಾಗೂ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ರಫೀಕ್ ತಲೆಮರೆಸಿಕೊಂಡಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




