ಆಪರೇಷನ್ ಸಿಂಧೂರ್ ವೇಳೆ ಭಾರತ ನಷ್ಟ ಅನುಭವಿಸಿದೆ ಎಂಬುದಕ್ಕೆ ನಿಮ್ಮ ಬಳಿ ಫೋಟೊ ಇದ್ದರೆ ಕೊಡಿ: ಅಜಿತ್ ದೋವಲ್
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಹೇಳಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರೆ. ಭಾರತವು ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳನ್ನು ನಾಶಪಡಿಸಿದೆ.ಅದು ಗಡಿ ಪ್ರದೇಶದಿಂದ ದೂರ ಇದೆ. ನಾವು ಅದನ್ನು ಬಿಟ್ಟು ಬೇರೆಲ್ಲಿಯೂ ದಾಳಿ ಮಾಡಿಲ್ಲ. ಯಾರು ಎಲ್ಲಿದ್ದಾರೆಂಬ ಮಾಹಿತಿ ನಿಖರವಾಗಿತ್ತು ಎಂದರು. ಇಡೀ ಕಾರ್ಯಾಚರಣೆಯನ್ನು ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.

ನವದೆಹಲಿ, ಜುಲೈ 11: ಭಾರತವು ಪಾಕಿಸ್ತಾನದ ಮೇಲೆ ನಡೆಸಿರುವ ಆಪರೇಷನ್ ಸಿಂಧೂರ್(Operation Sindoor) ಕಾರ್ಯಾಚರಣೆ ವೇಳೆ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್ ದೋವಲ್ ಹೇಳಿದ್ದಾರೆ. ಚೆನ್ನೈನ ಐಐಟಿ ಮದ್ರಾಸ್ನ 62ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದರು. ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಸ್ವಾವಲಂಬನೆಯನ್ನು ಒತ್ತಿ ಹೇಳಿದ್ದಾರೆ.
ವಿದೇಶಿ ಮಾಧ್ಯಮಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ತುಂಬಾ ನಷ್ಟ ಅನುಭವಿಸಿದೆ, ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆ ಎಂದು ವರದಿಗಳನ್ನು ಬಿತ್ತರಿಸಿದ್ದವು. ಆದರೆ ಅದು ಹೌದು ಎನ್ನುವಂಥಾ ಒಂದು ಫೋಟೊವಿದ್ದರೆ ನಮಗೆ ಕೊಡಿ ಎಂದು ಅಜಿತ್ ದೋವಲ್ ಕೇಳಿದ್ದಾರೆ.
ನಿರ್ದಿಷ್ಟವಾಗಿ ನ್ಯೂಯಾರ್ಕ್ ಟೈಮ್ಸ್ ಅನ್ನು ಹೆಸರಿಸಿದ ಅಜಿತ್ ಧೋವಲ್, ಕೆಲವು ಆಯ್ದ ಚಿತ್ರಗಳನ್ನು ಆಧರಿಸಿ ಪಾಕಿಸ್ತಾನದ 13 ವಾಯುನೆಲೆಗಳ ಬಗ್ಗೆ ಹಲವು ವಿಷಯಗಳನ್ನು ಹೇಳಿವೆ. ಆದರೆ ಮೇ 10 ರ ಮೊದಲು ಮತ್ತು ನಂತರದ ಪಾಕಿಸ್ತಾನದ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿ. ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ನಿರ್ಮಿಸಿರುವ ಯುದ್ಧ ವಿಮಾನದಿಂದಲೇ ಭಾರತದ ರಫೇಲ್ ವಿಮಾನವನ್ನು ಹೊಡೆದುರಿಳಿಸಲಾಗಿದೆ ಎಂದು ಚೀನಾ ಹೇಳುತ್ತಾ ಬಿಟ್ಟಿ ಪ್ರಚಾರ ಪಡೆಯಲು ಸಾಕಷ್ಟು ಪ್ರಯತ್ನಿಸಿತ್ತು.
ಅಜಿತ್ ದೋವಲ್ ಭಾಷಣ ವಿಡಿಯೋ
#WATCH | Chennai, Tamil Nadu | At the 62nd Convocation of IIT Madras, NSA Ajit Doval says, “You belong to a country, to a civilisation which has been beleaguered, bled, dishonoured for thousand years. Our ancestors have suffered a lot…I do not know how much of the humiliation,… pic.twitter.com/aRQOtvcphM
— ANI (@ANI) July 11, 2025
ಭಾರತವು ಪಾಕಿಸ್ತಾನದೊಳಗೆ ನುಗ್ಗಿ 9 ಉಗ್ರರ ನೆಲೆಗಳನ್ನು ನಾಶಪಡಿಸಿದೆ.ಅದು ಗಡಿ ಪ್ರದೇಶದಿಂದ ದೂರ ಇದೆ. ನಾವು ಅದನ್ನು ಬಿಟ್ಟು ಬೇರೆಲ್ಲಿಯೂ ದಾಳಿ ಮಾಡಿಲ್ಲ. ಯಾರು ಎಲ್ಲಿದ್ದಾರೆಂಬ ಮಾಹಿತಿ ನಿಖರವಾಗಿತ್ತು ಎಂದರು.
ಇಡೀ ಕಾರ್ಯಾಚರಣೆಯನ್ನು ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಯಾವುದೇ ತಪ್ಪಿಗೆ ಅವಕಾಶವಿಲ್ಲ, ಯಾವುದೇ ಅನಿರೀಕ್ಷಿತ ಹಾನಿಯನ್ನುಂಟು ಮಾಡಿಲ್ಲ.ಈ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಹಾನಿಯುಂಟಾಗಿದೆ ಎಂದು ತೋರಿಸುವ ಒಂದು ಚಿತ್ರವಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ. ತಂತ್ರಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧ ಯಾವಾಗಲೂ ಮುಖ್ಯ ಎಂದು ದೋವಲ್ ಹೇಳಿದರು.
ಮತ್ತಷ್ಟು ಓದಿ: ಸಿಂಧೂ ಜಲ ಒಪ್ಪಂದ, ಭಾರತದ ಎದುರು ಎಂದೂ ತಲೆ ಬಾಗುವುದಿಲ್ಲ: ಆಸಿಮ್ ಮುನೀರ್
ಆಪರೇಷನ್ ಸಿಂಧೂರ್ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಕಾರ್ಯಾಚರಣೆಯ ಸಮಯದಲ್ಲಿ ನಾವು ಸ್ಥಳೀಯ ತಂತ್ರಜ್ಞಾನವನ್ನು ಬಳಸಿದ್ದೇವೆ . ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯ ಪ್ರತೀಕಾರವಾಗಿ ಮೇ 7ರಂದು ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿತು. ನಾಲ್ಕು ದಿನಗಳ ಕಾಲ ಪರಸ್ಪರ ಮುಖಾಮುಖಿ ನಡೆಯಿತು. ಅದಾದ ಬಳಿಕ ಮೇ 10ರಂದು ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಲಾಯಿತು.
ಈ ಕದನ ವಿರಾಮಕ್ಕಾಗಿ ಪಾಕಿಸ್ತಾನ ಭಾರತವನ್ನು ಒಮ್ಮೆ ಅಲ್ಲ ಎರಡು ಬಾರಿ ಸಂಪರ್ಕಿಸಿತ್ತು. ಪಾಕಿಸ್ತಾನವು ಮೇ 7 ರ ಸಂಜೆ ಕದನ ವಿರಾಮಕ್ಕಾಗಿ ಭಾರತವನ್ನು ಮೊದಲ ಬಾರಿಗೆ ಸಂಪರ್ಕಿಸಿತ್ತು. ಮೇ 10 ರಂದು ಮಧ್ಯಾಹ್ನ 3.35 ಕ್ಕೆ ಡಿಜಿಎಂಒ ಮಟ್ಟದ ಮಾತುಕತೆಗಳು ನಡೆದವು. ಈ ಸಂದರ್ಭದಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Fri, 11 July 25








