AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ತನ್ನದಲ್ಲವೆಂಬ ಅನುಮಾನ ಪ್ರೇಯಸಿ, ಮಗು ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ

ದೆಹಲಿಯಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆರು ತಿಂಗಳ ಮಗುವನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಮಜ್ನುಕಾ ತಿಲ್ಲಾ ಪ್ರದೇಶದಲ್ಲಿ ನಡೆದಿದೆ. ಉತ್ತರಾಖಂಡ ಮೂಲದ ನಿಖಿಲ್ ಎಂಬ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ ನಿಖಿಲ್ ಸೋನಾಲ್ ಹಾಗೂ ಆಕೆಯ 6 ತಿಂಗಳ ಮಗುವನ್ನು ಹತ್ಯೆ ಮಾಡಿದ್ದ.

ಮಗು ತನ್ನದಲ್ಲವೆಂಬ ಅನುಮಾನ ಪ್ರೇಯಸಿ, ಮಗು ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ
ಆರೋಪಿ ನಿಖಿಲ್, ಮಗುImage Credit source: NDTV
ನಯನಾ ರಾಜೀವ್
|

Updated on: Jul 10, 2025 | 2:24 PM

Share

ನವದೆಹಲಿ, ಜುಲೈ 10: ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆರು ತಿಂಗಳ ಮಗುವನ್ನು ಕತ್ತು ಸೀಳಿ ಹತ್ಯೆ(Murder) ಮಾಡಿರುವ ಘಟನೆ ದೆಹಲಿಯ ಮಜ್ನುಕಾ ತಿಲ್ಲಾ ಪ್ರದೇಶದಲ್ಲಿ ನಡೆದಿದೆ. ಉತ್ತರಾಖಂಡ ಮೂಲದ ನಿಖಿಲ್ ಎಂಬ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ ನಿಖಿಲ್ ಸೋನಾಲ್ ಹಾಗೂ ಆಕೆಯ 6 ತಿಂಗಳ ಮಗುವನ್ನು ಹತ್ಯೆ ಮಾಡಿದ್ದ.

ಈ ಕೊಲೆಯನ್ನು ಸರ್ಜಿಕಲ್ ಬ್ಲೇಡ್​​ನಿಂದ ನಡೆಸಲಾಗಿದೆ, ನಿಖಿಲ್ ನಂತರ ಸ್ಥಳದಿಂದ ಪರಾರಿಯಾಗಿದ್ದ. ಆತ್ಮಹತ್ಯೆಗೂ ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಕೊನೆಗೆ ಆತನನ್ನು ಹಲ್ದ್ವಾನಿಯಲ್ಲಿರುವ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಮತ್ತು ಸೋನಾಲ್ 2023ರಲ್ಲಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಆ ವರ್ಷದ ಕೊನೆಯಲ್ಲಿ ಆಕೆ ಗರ್ಭಿಣಿಯಾದಳು. ಪೊಲೀಸರ ಪ್ರಕಾರ ಆಗ ಅವಿವಾಹಿತರಾಗಿದ್ದಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಇಬ್ಬರಿಗೂ ಮಗುವನ್ನು ಸಾಕಲು ಇಷ್ಟವಿರಲಿಲ್ಲ. ಆರಂಭದಲ್ಲಿ ಗರ್ಭಪಾತ ಬಯಸಿದ್ದರೂ ಅದು ಸಾಧ್ಯವಾಗಲಿಲ್ಲ, 2024ರಲ್ಲಿ ಮಗು ಜನಿಸಿತ್ತು.

ಮತ್ತಷ್ಟು ಓದಿ: ಗಾಂಜಾ ನಶೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ಬೆಂಗಳೂರು ಹೊರವಲಯದಲ್ಲಿ ಭೀಕರ ಕೃತ್ಯ

ನಂತರ ದಂಪತಿ ಮಗುವನ್ನು ಅಲ್ಮೋರಾದಲ್ಲಿ ಅಪರಿಚಿತ ವ್ಯಕ್ತಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಹಣದಿಂದ ಅವರು ದೆಹಲಿಗೆ ಸ್ಥಳಾಂತರಗೊಂಡಿದ್ದರು. ಆರಂಭದಲ್ಲಿ ವಜೀರಾಬಾದ್​​ನಲ್ಲಿ ವಾಸಿಸುತ್ತಿದ್ದರು. ನಂತರ ಮಜ್ನುಕಾ ತಿಲ್ಲಾಗೆ ತೆರಳಿದ್ದರು. ದೆಹಲಿಯಲ್ಲಿರುವಾಗ ರಶ್ಮಿ ಎಂಬುವವರು ಪರಿಚಯವಾಗಿದ್ದರು. ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದರು. ನಿಖಿಲ್ ಜತೆ ಜಗಳಾವಾದಾಗಲೆಲ್ಲಾ ಆಕೆ ಅವರ ಮನೆಗೆ ಹೋಗುತ್ತಿದ್ದಳು.

ಸೋನಲ್ ರಶ್ಮಿಯ ಪತಿ ಜತೆ ಸಂಬಂಧದ ಹೊಂದಿದ್ದಾಳೆ ಎಂಬ ಅನುಮಾನ ನಿಖಿಲ್​ಗೆ ಬಂದಿತ್ತು. ಆಕೆ ಮತ್ತೆ ಗಭರ್ಿಣಿಯಾಗಿದ್ದರು. ಈ ಬಾರಿ, ನಿಖಿಲ್ ಮಗುವನ್ನು ಉಳಿಸಿಕೊಳ್ಳಲು ಬಯಸಿದ್ದಳು. ಹಾಗೆಯೇ ಮಗುವನ್ನು ತನ್ನ ಜತೆಯೇ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಳು.ದಾಳಿಗೂ ಮುನ್ನ ಸೋನಾಲ್ ರಶ್ಮಿ ಮನೆಯಲ್ಲಿ 20-25 ದಿನಗಳ ಕಾಲ ಇದ್ದಳು.ನಿಖಿಲ್ ಸೋನಾಳ್​ನ್ನನು ಹಿಂದಿರುಗುವಂತೆ ಮನವೊಲಿಸಲು ಪ್ರಯತ್ನಿಸಿದ್ದ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ರಶ್ಮಿ ಹಾಗೂ ದುರ್ಗೇಶ್ ತಮ್ಮ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗಿದ್ದರು. ಆಗ ಸೋನಲ್ ಆರು ತಿಂಗಳ ಮಗು ಜತೆ ಮನೆಯಲ್ಲಿದ್ದರು. ಆಗ ನಿಖಿಲ್ ಅವರ ಮನೆಗೆ ಹೋಗಿ ಮೊದಲು ಸೋನಾಲ್​​ರನ್ನು ಕೊಲೆ ಮಾಡಿ. ಬಳಿಕ ಮಗುವಿನ ಬಾಯಿಗೆ ಟೇಪ್ ಅಂಟಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಬಳಿಕ ತನ್ನನ್ನು ಯಾರೂ ಪತ್ತೆ ಹಚ್ಚಬಾರದೆಂದು ಫೋನ್ ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ರಶ್ಮಿ ಮತ್ತು ದುರ್ಗೇಶ್ ತಮ್ಮ ಹಿರಿಯ ಮಗಳೊಂದಿಗೆ ಶಾಲೆಯಿಂದ ಹಿಂತಿರುಗಿದಾಗ, ರಕ್ತದ ಮಡುವಿನಲ್ಲಿ ಸೋನಾಲ್ ಮತ್ತು ಮಗುವಿನ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಿಖಿಲ್ ಮೊದಲು ತನ್ನ ಮನೆಗೆ ಹೋಗಿ, ಆತ್ಮಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾದಾಗ, ದೆಹಲಿ ರೈಲು ನಿಲ್ದಾಣಕ್ಕೆ ಹೋಗಿ, ಹಲ್ದ್ವಾನಿ ಹೋಗುವ ಮೊದಲು ಬರೇಲಿಗೆ ಹೋಗಿದ್ದ.ಹಲ್ದ್ವಾನಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.ತಾನೇ ಕೊಲೆ ಮಾಡಿರುವುದಾಗಿ ನಿಖಿಲ್ ಒಪ್ಪಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ